ಉಡುಪಿ, ಜೂ.7: ಉಡುಪಿ ಜಿಲ್ಲೆಯಾದ್ಯಂತ ಕೃಷಿ ಇಲಾಖೆಯಲ್ಲಿ ಎಂ.ಓ 4 ತಳಿಯ ಭತ್ತದ ಬಿತ್ತನೆ ಬೀಜದ ಕೊರತೆಯಿಂದ ಜಿಲ್ಲೆಯ ಕೃಷಿಕರು ಕೃಷಿ ಚಟುವಟಿಕೆ ಆರಂಭಿಸಲು ಸಮಸ್ಯೆ ಎದುರಿಸುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಜಿಲ್ಲೆಗೆ ಅಗತ್ಯ ಪ್ರಮಾಣದ ಬೀಜವನ್ನು ಪೂರೈಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೃಷಿ ಸಚಿವ ಚೆಲುವರಾಯಸ್ವಾಮಿ ಯವರಿಗೆ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 38,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯುತ್ತಿದ್ದು, ಭತ್ತದ ಬಿತ್ತನೆ ಬೀಜದ ಕೊರತೆಯಿಂದ ಮುಂಗಾರು ಪೂರ್ವಭಾವಿ ಕೃಷಿ ಸಿದ್ಧತೆಗೆ ತೊಂದರೆಯಾಗಿದೆ. ಮಾತ್ರವಲ್ಲದೆ ಎಂ.ಓ 4 ಭತ್ತದ ಬೀಜ ದರದಲ್ಲಿ ಗಣನೀಯ ಏರಿಕೆಯಾಗಿದ್ದು, ಸರ್ಕಾರ ಪ್ರತಿ ಕಿಲೋಗೆ ರೂ. 9.25 ಹೆಚ್ಚಿಸಿ ರೂ. 55.25 ದರ ನಿಗದಿ ಮಾಡಿದ್ದು ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಜಿಲ್ಲೆಯ ಬೇಡಿಕೆಗೆ ಅನುಗುಣವಾಗಿ ಎಂ.ಓ 4 ತಳಿಯ ಭತ್ತದ ಬೀಜವನ್ನು ಪೂರೈಕೆ ಮಾಡಿ, ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.