Friday, October 25, 2024
Friday, October 25, 2024

ಅಂತರ್‌ ಕಾಲೇಜು ಕ್ರಿಕೆಟ್‌ ಪಂದ್ಯಾಟ: ಕೋಟ ಪಡುಕರೆ ಪದವಿ ಕಾಲೇಜಿಗೆ ಪ್ರಥಮ ಸ್ಥಾನ

ಅಂತರ್‌ ಕಾಲೇಜು ಕ್ರಿಕೆಟ್‌ ಪಂದ್ಯಾಟ: ಕೋಟ ಪಡುಕರೆ ಪದವಿ ಕಾಲೇಜಿಗೆ ಪ್ರಥಮ ಸ್ಥಾನ

Date:

ಕೋಟ, ಮೇ 31: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕರೆ ಇಲ್ಲಿ ಆಯೋಜಿಸಿದ್ದ ವಿಶ್ವವಿದ್ಯಾನಿಲಯ ಮಟ್ಟದ ಅಂತರ್‌-ಕಾಲೇಜು ಕ್ರಿಕೆಟ್‌ ಪಂದ್ಯಾಟವನ್ನು ಆನಂದ್‌ ಸಿ ಕುಂದರ್‌, ಪ್ರವರ್ತಕರು, ಗೀತಾನಂದ ಫೌಂಡೇಶನ್‌ ಮಣೂರು-ಪಡುಕರೆ ಇವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕ್ರಿಕೆಟ್‌ ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ವ್ಯಕ್ತಿತ್ವವನ್ನು ಬೆಳೆಸಲು ಸಹಾಯಕವಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿರುವ ಆಗಮಿಸಿದ್ದ ಕೋಟ ಪೋಲಿಸ್‌ ಠಾಣೆಯ ಉಪ ನಿರೀಕ್ಷಕರಾದ ತೇಜಸ್ವಿಯವರು ವಿದ್ಯಾರ್ಥಿಗಳು ಪಠ್ಯದೊಂದಿಗೆ, ದೈಹಿಕ ಪಾಠವನ್ನು ತಿಳಿಸುವ ಪಂದ್ಯಾಟಗಳಲ್ಲಿ ಪಾಲ್ಗೊಂಡಾಗ ಜೀವನವನ್ನು ಯಶಸ್ಸುಗೊಳಿಸಲು ಸಾಧ್ಯವಿದೆ ಎಂದರು. ಸಮಾರೋಪ ಸಮಾರಂಭದಲ್ಲಿ ರಮೇಶ್‌ ಹೆಚ್ ಕುಂದರ್‌ರವರು ವಿಜೇತ ತಂಡಗಳಿಗೆ ನಗದು ಬಹುಮಾನ ಮತ್ತು ಟ್ರೋಫಿಯನ್ನು ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸುನೀತ ವಿ ವಹಿಸಿದ್ದರು. ಪಂದ್ಯಾಟದ ಸಂಘಟಕರು ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಮನೋಜ್‌ಕುಮಾರ್‌ ಎಂ ಸ್ವಾಗತಿಸಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ. ಶಂಕರ ನಾಯ್ಕ ಬಿ.ರವರು ವಂದಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುದಿನ ಹಾಗೂ ಕಾರ್ಯದರ್ಶಿಗಳಾದ ಪ್ರಸಾದ್‌ ಬಿಲ್ಲವ ಉಪಸ್ಥಿತರಿದ್ದರು. ರಾಜಣ್ಣ ಎಂ ಕಾರ್ಯಕ್ರಮ ನಿರೂಪಿಸಿದರು. ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಅತಿಥೇಯ ಕಾಲೇಜು, ದ್ವಿತೀಯ ಸ್ಥಾನವನ್ನು ಎಸ್.ಎಮ್‌.ಎಸ್.‌ ಕಾಲೇಜು ಬ್ರಹ್ಮಾವರ ಮತ್ತು ತೃತೀಯ ಸ್ಥಾನವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತ್ಯಾಜ್ಯ ನಿರ್ವಹಣೆಯಲ್ಲಿ ನಗರಸಭೆಯೊಂದಿಗೆ ಸಹಕರಿಸಿ

ಉಡುಪಿ, ಅ.25: ಉಡುಪಿ ನಗರಸಭೆಯು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ವಿವಿಧ...

ಕಟ್ಟಡಗಳ ಭಗ್ನ ಅವಶೇಷಗಳನ್ನು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಲು ಸೂಚನೆ

ಉಡುಪಿ, ಅ.25: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಕಟ್ಟಡಗಳ ಭಗ್ನ ಅವಶೇಷಗಳನ್ನು ಎಲ್ಲೆಂದರಲ್ಲಿ...

ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧ

ಉಡುಪಿ, ಅ.25: ರಾಜ್ಯ ಸರ್ಕಾರದ ಆದೇಶದಂತೆ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಎಲ್ಲಾ...

ಅ.26: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ವತಿಯಿಂದ ಜಾಗೃತಿ ನಡಿಗೆ

ಉಡುಪಿ, ಅ.25: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ವತಿಯಿಂದ ಉಪಶಾಮಾಕ ಆರೈಕೆ ದಿನದ...
error: Content is protected !!