Sunday, September 8, 2024
Sunday, September 8, 2024

ಅವಕಾಶಗಳ ಸದ್ಭಳಕೆಯಿಂದ ಯಶಸ್ಸು ಸಾಧ್ಯ: ಐಶ್ವರ್ಯ ಕೋಟ

ಅವಕಾಶಗಳ ಸದ್ಭಳಕೆಯಿಂದ ಯಶಸ್ಸು ಸಾಧ್ಯ: ಐಶ್ವರ್ಯ ಕೋಟ

Date:

ಕೋಟ, ಮೇ 18: ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳು ಶಾಲಾ ಪಠ್ಯದ ಜೊತೆ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಾಗ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಚಿತ್ರಕಲಾ ಶಿಕ್ಷಕಿ ಐಶ್ವರ್ಯ ಕೋಟ ಹೇಳಿದರು. ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ)ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ವಿದ್ಯಾರ್ಥಿನಿಯರಿಗಾಗಿ ಮೂರು ದಿನಗಳ ಆರ್ಟ್ ಕ್ಯಾಂಪ್ ಆರಾಧನಾ-2024 (ಬೆರಳುಗಳಲ್ಲಿ ಭಾವಗೀತೆ) ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶಿಭಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಶಿಬಿರಾರ್ಥಿಗಳಾದ ಶರಧಿ ಎಸ್., ಮಾನಸ ಜಿ., ಮೇದಿನಿ ಅವರು ಆರ್ಟ್ ಕ್ಯಾಂಪ್‌ನ ಅನಿಸಿಕೆಯನ್ನು ಹಂಚಿಕೊಂಡರು.

ಕೋಟತಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಬಣ್ಣಗಳ ಮಿಶ್ರಣದಿಂದ ಹೊಸ ಬಣ್ಣವಾಗುವಂತೆ ನೋವು ನಲಿವುಗಳನ್ನು ಸರಿಸಮವಾಗಿ ಸ್ವೀಕರಿಸಿ ನಮ್ಮ ಗುರಿಯತ್ತಾ ಮನಸ್ಸು ಕೇಂದ್ರೀಕರಿಸಿಕೊಳ್ಳಬೇಕು ಎಂದರು. ಕೋಟತಟ್ಟು ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಮೇಲ್ವಿಚಾರಕಿ ಶೈಲಜಾ ಕೆ ಎನ್ ಉಪಸ್ಥಿತರಿದ್ದರು. ಶಿಕ್ಷಕ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದೇಶಕ್ಕೆ ಶಿಕ್ಷಕರ ಸೇವೆ ಮಹತ್ವದ್ದು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಸೆ.7: ಶಿಕ್ಷಕರು ರಾಷ್ಟ್ರಕ್ಕೆ ಅತ್ಯಂತ ಮಹತ್ವದ ಸೇವೆ ಸಲ್ಲಿಸುತ್ತಿದ್ದು, ಇಂದಿನ...

ಸುಳ್ಳು ದಾಖಲೆ ಸೃಷ್ಟಿ: ಐಎಎಸ್ ಪ್ರೊಬೇಷನರ್ ಪೂಜಾ ಖೇಡ್ಕರ್ ಸೇವೆಯಿಂದ ಬಿಡುಗಡೆ

ನವದೆಹಲಿ, ಸೆ.7: 2023 ರ ಬ್ಯಾಚ್ ಐಎಎಸ್ ಪ್ರೊಬೇಷನರ್ ಪೂಜಾ ಖೇಡ್ಕರ್...

18ನೇ ವರ್ಷದ ಅಬ್ಬನಡ್ಕ ಗಣೇಶೋತ್ಸವ

ಬೆಳ್ಮಣ್, ಸೆ.7: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...

ಮದ್ಯ ಮಾರಾಟ ನಿಷೇಧ

ಉಡುಪಿ, ಸೆ.6: ಗಣೇಶ ಹಬ್ಬದ ಆಚರಣೆಯ ಪ್ರಯುಕ್ತ ಹೆಚ್ಚಿನ ಸ್ಥಳಗಳಲ್ಲಿ ಗಣೇಶ...
error: Content is protected !!