ಮೈಸೂರು, ಮೇ 16: ಕರ್ನಾಟಕ ವಿಧಾನ ಪರಿಷತ್ ಚುನಾವಣೆ 2024 ಇದರ ನೈರುತ್ಯ ಪದವೀಧರರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಕೆ. ರಘುಪತಿ ಭಟ್ ಅವರು ಗುರುವಾರ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ನಮ್ಮ ಟಿವಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಶಿವಚರಣ್ ಶೆಟ್ಟಿ, ಬಿಜೆಪಿಯ ಹಿರಿಯ ಕಾರ್ಯಕರ್ತರಾದ ವಿಶ್ವನಾಥ್ ಭಟ್, ಕೊಡಗು ಜಿಲ್ಲೆಯ ಮುಖಂಡರಾದ ಚೇತನ್ ಮಂದಣ್ಣ, ಶಿವಮೊಗ್ಗದ ಎಂ. ಶಂಕರ್ ಉಪಸ್ಥಿತರಿದ್ದರು. ರಘುಪತಿ ಭಟ್ ಅವರು ನೂರಾರು ಮಂದಿ ಹಿತೈಷಿಗಳೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಮೊದಲು ರಘುಪತಿ ಭಟ್ ಬೆಂಬಲಿಗರೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದರು.