Monday, November 25, 2024
Monday, November 25, 2024

ಸಾಲಿಗ್ರಾಮದಲ್ಲಿ ಐಸಿರಿ ಮಹಿಳಾ ವೇದಿಕೆ ಸಮಾವೇಶ

ಸಾಲಿಗ್ರಾಮದಲ್ಲಿ ಐಸಿರಿ ಮಹಿಳಾ ವೇದಿಕೆ ಸಮಾವೇಶ

Date:

ಕೋಟ, ಮೇ 15: ಸಮುದಾಯದ ಮಹಿಳೆಯರು ಸ್ವಾವಲಂಬಿ ಬದುಕಿನತ್ತ ಚಿತ್ತ ಹರಿಸಬೇಕು, ತನ್ಮೂಲಕ ಮನೆಮನಗಳಲ್ಲಿ ಐಸಿರಿ ತುಂಬುವಂತಾಗಲಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷೆ ರೂಪಾ ಶಾಸ್ತ್ರಿ ಹೇಳಿದರು. ಅವರು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಬಯಲು ರಂಗಮಂದಿರದಲ್ಲಿ ಮಹಿಳಾ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಇವರ ನೇತೃತ್ವದಲ್ಲಿ ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆ ಮತ್ತು ಅಂಗಸಂಸ್ಥೆ ಸಹಯೋಗದೊಂದಿಗೆ ಐಸಿರಿ ಮಹಿಳಾ ಸಮ್ಮೇಳನ 2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಹಿಳೆಯರು ಸಾಂಸ್ಕೃತಿಕ, ಸಾಮಾಜಿಕ, ಸಂಘಟಿತ, ರಾಜಕೀಯ, ಸ್ವಾವಲಂಬಿಯಾಗಿ ಮುನ್ನಲೆಗೆ ಬರುವ ಮೂಲಕ ಸಮುದಾಯದ ಏಳಿಗೆಯ ಕೇಂದ್ರವಾಗಲಿ, ಹೆಚ್ಚು ಹೆಚ್ಚು ಮಹಿಳಾ ಸಮಾವೇಶಗಳನ್ನು ಆಯೋಜಿಸಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಸಂಘಟಿತ ಶಕ್ತಿಯಾಗಿ ಹೊರಹೊಮ್ಮಲಿ ಎಂದರು. ಬೆಂಗಳೂರಿನ ಶೇಖರ್ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ. ಪುಷ್ಭಲತಾ ವಿ ಐತಾಳ್, ಗಮಕ ವಿದುಷಿ ಯಾಮಿನಿ ಭಟ್, ಪಿಎಚ್‌ಡಿ ಯುಎಸ್‌ಎ ಡಾ. ಸಹನಾ ಹೊಳ್ಳ ಇವರುಗಳನ್ನು ಸನ್ಮಾನಿಸಲಾಯಿತು.

ಸಮ್ಮೇಳನಾಧ್ಯಕ್ಷೆಯಾಗಿ ಹಿರಿಯ ಸಂಶೋಧಕಿ ಡಾ. ಗಾಯತ್ರಿ ನಾವಡ, ಶುಭಾಸಂಸನೆಯನ್ನು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ಅಧ್ಯಕ್ಷ ಡಾ.ಕೆ ಎಸ್ ಕಾರಂತ್, ಮುಖ್ಯ ಅಭ್ಯಾಗತರಾಗಿ ತರಂಗ ಪತ್ರಿಕೆಯ ಸಂಪಾದಕಿ ಡಾ. ಯು.ಬಿ ರಾಜಲಕ್ಷ್ಮಿ ಗೌರವ ಉಪಸ್ಥಿತಿಯಲ್ಲಿ ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಎಚ್.ಸತೀಶ್ ಹಂದೆ, ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಡುಪಿ ಜಿಲ್ಲಾ ಸಂಚಾಲಕಿ ಶಾಂತ ಗಣೇಶ್ ಇದ್ದರು. ಮಹಿಳಾ ವೇದಿಕೆ ಕೂಟಮಹಾಜಗತ್ತು ಸಾಲಿಗ್ರಾಮ ಇದರ ಅಧ್ಯಕ್ಷೆ ಯಶೋಧ ಸಿ ಹೊಳ್ಳ ಸ್ವಾಗತಿಸಿ, ಭಾರತಿ ವಿ ಮಯ್ಯ, ವನೀತಾ ಉಪಾಧ್ಯ ಗಣ್ಯರನ್ನು ಪರಿಚಯಿಸಿದರು. ಸುಜಾತ ಬಾಯರಿ, ನಾಗರತ್ನ ಹೇರ್ಳೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಐಸಿರಿ ಸಮಾವೇಶದಲ್ಲಿ ಪೂರ್ವಾಹ್ನ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ವಿಷ್ಣು ಸಹಸ್ರನಾಮ ಪಠಿಸಿ, ನಂತರ ಮೆರವಣಿಗೆಯ ಮೂಲಕ ಆಂಜನೇಯ ದೇಗುಲವನ್ನು ಸಂದರ್ಶಿಸಲಾಯಿತು. ನೂರಾರು ಮಹಿಳೆಯರು ಮಂಗಳ ದ್ರವ್ಯಗಳೊಂದಿಗೆ ಭಾಗಿಯಾದರು. ಸ್ಯಾಕ್ಸೋಪೋನ್, ಭರತನಾಟ್ಯ, ಕೋಲಾಟ, ತಾಳದೊಂದಿಗೆ ಅತಿಥಿ ಗಣ್ಯರನ್ನು ವಿಶೇಷವಾಗಿ ಸ್ವಾಗತಿಸಲಾಯಿತು. ಐಸಿರಿ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಪಂಚ ಐಸಿರಿಗಳಾದ ತೆಂಗಿನ ಹೂ ಬಿಡಿಸುವುದು, ಧಾನ್ಯ ಹಾಕುವುದು, ತುಳಸಿಗೆ ನೀರೆರೆಯುವುದು, ಹಾಲನ್ನು ಹಾಕುವುದು, ವೀಣೆಗೆ ಹೂ ಹಾಕುವುದರ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಲಾಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...

ತುಳು ಭಾವಗೀತೆ ಸ್ಪರ್ಧೆ

ಉಡುಪಿ, ನ.24: ತುಳುಕೂಟ ಉಡುಪಿ (ರಿ,) ವತಿಯಿಂದ ದಿ. ನಿಟ್ಟೂರು ಸಂಜೀವ...

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...
error: Content is protected !!