ಉಡುಪಿ, ಮೇ 13: ಉಡುಪಿ ಜಿಲ್ಲೆಯ ವಿವಿಧೆಡೆ ಭಾನುವಾರ ಮಳೆಯಾಗಿದೆ. ಹೆಬ್ರಿಯಲ್ಲಿ ಗರಿಷ್ಠ 4.8 ಮಿಮೀ ಮಳೆಯಾದರೆ, ಕಾರ್ಕಳ- 4.4 ಮಿಮೀ, ಕಾಪು- 4.1, ಉಡುಪಿ- 1.6, ಬ್ರಹ್ಮಾವರ-0.6, ಬೈಂದೂರು- 0.3, ಕುಂದಾಪುರ-0.1 ಮಿಮೀ ಮಳೆಯಾಗಿದೆ. ಕಾರ್ಕಳ ಮತ್ತು ಹಿರ್ಗಾನ ಗ್ರಾಮದಲ್ಲಿ ಗಾಳಿಗೆ ಮರ ಬಿದ್ದು ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಇನ್ನೂ ಮೂರು ದಿನಗಳ ಕಾಲ ರಾಜ್ಯದ ಕರಾವಳಿ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಕಾರ್ಕಳ: ಗಾಳಿ ಮಳೆಯಿಂದ ಮನೆಗಳಿಗೆ ಹಾನಿ
ಕಾರ್ಕಳ: ಗಾಳಿ ಮಳೆಯಿಂದ ಮನೆಗಳಿಗೆ ಹಾನಿ
Date: