ಕೋಟ, ಮೇ 11: ಇಲ್ಲಿನ ಶ್ರೀ ಕ್ಷೇತ್ರ ಕಾರಣಿಕ ದೈವ ದೇವರುಗಳ ನೆಲೆವೀಡಾಗಿ ಕಂಗೊಳಿಸುತ್ತಿದೆ ಎಂದು ಪಾಂಡೇಶ್ವರದ ಯೋಗ ಗುರುಕುಲದ ಮುಖ್ಯಸ್ಥ ವಿದ್ವಾನ್ ಡಾ.ವಿಜಯ್ ಮಂಜರ್ ಹೇಳಿದರು. ಶ್ರೀ ಕ್ಷೇತ್ರ ಕಳಿಬೈಲು ತುಳಸಿ ಅಮ್ಮ, ಶಿರಸಿ ಮಾರಿಕಾಂಬೆ, ಪಂಜುರ್ಲಿ ಮತ್ತು ಸ್ಚಾಮಿ ಕೊರಗಜ್ಜ ಸಪರಿವಾರ ದೇವಸ್ಥಾನದ ಇದರ ಕಳಿಬೈಲು ನೇಮೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಾಂಡೇಶ್ವರದ ಕಳಿಬೈಲು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ತಾಣವಾಗಿ ಮೂಡಿಬಂದಿದೆ ಎಂದರು. ಅಧ್ಯಕ್ಷತಯನ್ನು ಶ್ರೀ ಕ್ಷೇತ್ರದ ಮುಖ್ಯಸ್ಥ ಎಂ.ಸಿ ಚಂದ್ರಶೇಖರ್ ವಹಿಸಿದ್ದರು. ಕಳಿಬೈಲು ಕಂಬಳರತ್ನ ಪುರಸ್ಕಾರವನ್ನು ಬಿ.ಶಾಂತರಾಮ್ ಶೆಟ್ಟಿ, ಸಹಕಾರರತ್ನ ಪುರಸ್ಕಾರವನ್ನು ಜೋಜ್೯ ಎಸ್ ಫೆರ್ನಾಂಡೀಸ್, ಜೀವರಕ್ಷಕ ಪುರಸ್ಕಾರವನ್ನು ಈಶ್ವರ ಮಲ್ಪೆ, ಭಜನಾ ಸೇವಾ ಪುರಸ್ಕಾರವನ್ನು ವಾಸುದೇವ ಹಂಗಾರಕಟ್ಟೆ, ರಂಗರತ್ನ ಪರಸ್ಕಾರವನ್ನು ಸುಜಾತ ಅಲ್ವಿನ್ ಆಂದ್ರಾದೆ ದಂಪತಿಗಳಿಗೆ ನೀಡಲಾಯಿತು. ಕಳಿಬೈಲ್ ಕಿಂಗ್ ಕುಟ್ಟಿ ಕಂಬಳದ ಶ್ರೇಷ್ಠ ಓಟದ ಕೋಣ ಬಾರ್ಕೂರು ಕುಟ್ಟಿಗೆ ವಿಶೇಷ ಪುರಸ್ಕಾರ ನೀಡಲಾಯಿತು.
ಮುಖ್ಯ ಅಭ್ಯಾಗತರಾಗಿ ಐರೋಡಿ ಮಹಾಕಾಳಿ ದೇಗುಲದ ಅಧ್ಯಕ್ಷ ಐರೋಡಿ ವಿಠ್ಠಲ ಪೂಜಾರಿ, ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ, ವಿದ್ಯುತ್ ಗುತ್ತಿಗೆದಾರ ದಯಾನಂದ ಪೂಜಾರಿ, ಶ್ರೀ ಕ್ಷೇತ್ರದ ಪಾತ್ರಿಗಳಾದ ನವೀನ್ ಗುರುಗಳು, ಗೌರವ ಸಲಹೆಗಾರ ಶಶಿಧರ ರಾವ್, ಬೆಣ್ಣೆಕುದ್ರು ಉದ್ಯಮಿ ಸತೀಶ್ ಪೂಜಾರಿ, ಪಾಂಡೇಶ್ವರ ಪಂಚಾಯತ್ ಸದಸ್ಯ ರವೀಶ್ ಶ್ರೀಯಾನ್, ವಿಠ್ಠಲ ಪಾತ್ರಿ, ಕಂಬಿಗಾರ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಮಟಪಾಡಿ ಮೊಕ್ತೇಸರ ವಿಶ್ವನಾಥ ಶೆಟ್ಟಿ, ವೇ.ಮೂ ರಮೇಶ್ ಭಟ್, ರೈಲ್ವೆ ಇಲಾಖೆಯ ಇಂಜಿನಿಯರ್ ಶರೀತಾ ವಿಕಾಸ್ ಕುಮಾರ್ ಉಪಸ್ಥಿತರಿದ್ದರು. ದೇಗುಲದ ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ, ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು. ಶ್ರೀಶ ಆಚಾರ್ ವಂದಿಸಿದರು.