ಕೋಟ, ಮೇ 7: ಇಲ್ಲಿನ ಸಾಸ್ತಾನ ಪಾಂಡೇಶ್ವರ ಮೂಡಹಡು ಗ್ರಾಮದ ಕೆಳಬೆಟ್ಟು ಶ್ರೀ ಕ್ಷೇತ್ರ ಕಳಿಬೈಲ್ ತುಳಸಿ ಅಮ್ಮ ಶಿರಸಿ ಮಾರಿಕಾಂಬೆ ಪಂಜುರ್ಲಿ ಮತ್ತು ಸ್ವಾಮಿ ಕೊರಗಜ್ಜ ಸಪರಿವಾರ ದೈವಸ್ಥಾನದ ಕಳಿಬೈಲ್ ನೇಮೋತ್ಸವ, ಗೆಂಡೋತ್ಸವ ಹಾಗೂ ಮಾರಿಪೂಜೆ, ನೇಮೋತ್ಸವ ಮೇ 10, 11 ಹಾಗೂ 12 ರಂದು ನಡೆಯಲಿದೆ. ಮೇ 10 ರಂದು ಬೆಳಿಗ್ಗೆ 6 ರಿಂದ ವೇದಮೂರ್ತಿ ನಾಯಿರಬೆಟ್ಟು ರಮೇಶ್ ಭಟ್ ನೇತೃತ್ವದಲ್ಲಿ ಶ್ರೀ ತುಳಸಿ ಅಮ್ಮನ ಶಿಲಾಮಯ ಬಿಂಬ ಪ್ರತಿಷ್ಠೆ. ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ, ಅನ್ನಪೂರ್ಣ ಪಾಕಶಾಲೆ ಲೋಕಾರ್ಪಣೆ ಸನ್ಮಾನ ಹಾಗೂ ಪ್ರಶಸ್ತಿ ಪ್ರಧಾನ, ರಾತ್ರಿ 8:30 ಕ್ಕೆ ಭಕ್ತಿಗಾನ ನೃತ್ಯ ವೈಭವ ರಾತ್ರಿ 9:30 ಕ್ಕೆ ಶಿರಸಿ ಅಮ್ಮನ ದರ್ಶನ ಸೇವೆ ಗೆಂಡೋತ್ಸವ ನಡೆಯಲಿದೆ. ಮೇ 11 ರಂದು ಬೆಳಿಗ್ಗೆ 6 ಗಂಟೆಗೆ ಪ್ರಸನ್ನ ಪೂಜೆ ಬೆಳಿಗ್ಗೆ 10 ಗಂಟೆಗೆ ನೇಮೋತ್ಸವದ ಚಪ್ಪರ ಮೂರ್ತ ಮಧ್ಯಾಹ್ನ 12 ಗಂಟೆಗೆ ಮಧ್ಯಾಹ್ನ ಪೂಜೆ, 1 ರಿಂದ ಮಹಾ ಅನ್ನಸಂತರ್ಪಣೆ, ಸಂಜೆ 3:30 ಕ್ಕೆ ಭಂಡಾರ ಇಳಿಯುವುದು ಸಂಜೆ 6 ರಿಂದ ಕಳಿಬೈಲ್ ನೇಮೋತ್ಸವ ಯಕ್ಷಿ ಕೋಲ ಸೇವೆ, ಪಂಜುರ್ಲಿ ಗುರಮ್ಮ ಕೋಲ ಸೇವೆ, ಮಲಸಾವರಿ ಆಕಾಶ ರಾಹು ಕೋಲ ಸೇವೆ ಕಳಿಬೈಲ್ ಕೊರಗಜ್ಜ ಕೋಲ ಸೇವೆ. ಮೇ ೧೨ರಂದು ಬೆಳಿಗ್ಗೆ 10 ಗಂಟೆಗೆ ಪಂಜುರ್ಲಿ ದೈವದ ದರ್ಶನ ಸೇವೆ, ದೈವದ ಪೂಜೆ ಮಧ್ಯಾಹ್ನ 2 ಗಂಟೆಗೆ ತುಳಸಿ ಅಮ್ಮನ ದರ್ಶನ ಸೇವೆ, ಶ್ರೀ ಮಳಯಾಳಿ ಭಂಗಿ ಅಜ್ಜನ ದರ್ಶನ ಸೇವೆ, ಹುಲಿದುರ್ಗಿ ಅಮ್ಮನ ದರ್ಶನ ಸೇವೆ, ಸಂಜೆ 4 ರಿಂದ ಶಿರಸಿ ಮಾರಿಕಾಂಬೆ ದರ್ಶನ ಸೇವೆ ಮಾರಿ ಪೂಜೆ ರಾತ್ರಿ 8 ಕ್ಕೆ ಸ್ವಾಮಿ ಕೊರಗಜ್ಜನ ದರ್ಶನ ಸೇವೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ ಎಂದು ಶ್ರೀ ಕಳಿಬೈಲು ಸ್ವಾಮೀ ಕೊರಗಜ್ಜ ಸೇವಾ ಸಮಿತಿ ಪ್ರಧಾನ ಅರ್ಚಕರು ಹಾಗೂ ಸಂಚಾಲಕರಾದ ಅಭಿಜಿತ್ ಪಾಂಡೇಶ್ವರ ಹಾಗೂ ಶ್ರೀ ಕ್ಷೇತ್ರ ಕಳಿಬೈಲು ಆಡಳಿತ ಮೊಕ್ತೇಸರರು ಎಂ.ಸಿ. ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 10-12: ಸಾಸ್ತಾನ ಪಾಂಡೇಶ್ವರ ಕಳಿಬೈಲ್ ನೇಮೋತ್ಸವ
ಮೇ 10-12: ಸಾಸ್ತಾನ ಪಾಂಡೇಶ್ವರ ಕಳಿಬೈಲ್ ನೇಮೋತ್ಸವ
Date: