Wednesday, November 27, 2024
Wednesday, November 27, 2024

ತೆಂಕನಿಡಿಯೂರು: ಕ್ಯಾಂಪಸ್ ಆಹಾರ ಮೇಳ ಉದ್ಘಾಟನೆ

ತೆಂಕನಿಡಿಯೂರು: ಕ್ಯಾಂಪಸ್ ಆಹಾರ ಮೇಳ ಉದ್ಘಾಟನೆ

Date:

ತೆಂಕನಿಡಿಯೂರು, ಮೇ 3: ಕ್ಯಾಂಪಸ್ ಆಹಾರ ಮೇಳ ಆಯೋಜನೆಯಿಂದ ವಿದ್ಯಾರ್ಥಿಗಳಿಗೆ ವಾಣಿಜ್ಯ ಚಟುವಟಿಕೆಗಳ ಪೂರ್ವತಯಾರಿ, ಯೋಜನೆ, ಅನುಷ್ಠಾನ, ಹಣಕಾಸು, ಮಾರುಕಟ್ಟೆ, ಗ್ರಾಹಕರ ಸ್ಪಂದನೆಯ ವಿಧಗಳು ಇತ್ಯಾದಿ ಅರಿವಿನಲ್ಯಾಬ್ ದೊರಕಿದಂತಾಗುತ್ತದೆ. ಅಲ್ಲದೆ ಬಿಸಿನೆಸ್ ಇನ್ಕ್ಯುಬೇಷನ್ ಅನುಭವ ದೊರಕಿದಂತಾಗುತ್ತದೆ ಎಂದು ಪ್ರಾಂಶುಪಾಲ ಪ್ರೊ. ಸುರೇಶ್‌ರೈ ಕೆ. ಹೇಳಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನ ವಾಣಿಜ್ಯಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಭಾಗ ಹಾಗೂ ಐಕ್ಯೂಎಸಿ ಸಹಕಾರದಲ್ಲಿ ಆಯೋಜಿಸಿದ ಕ್ಯಾಂಪಸ್ ಆಹಾರ ಮೇಳ ಉದ್ಘಾಟಿಸಿ ಮಾತನಾಡಿದರು.

ಕ್ಯಾಂಪಸ್ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು 22 ಆಹಾರ ಮಳಿಗೆಗಳನ್ನು ತೆರೆದು, ಸಸ್ಯಹಾರಿ ತಿಂಡಿ ತಿನಿಸುಗಳು, ಮೆಹಂದಿ ಆರ್ಟ್ಸ್, ಗೇಮ್ಸ್, ತಂಪು ಪಾನೀಯ ಮಾರಾಟದಿಂದ ಅಂದಾಜು ೭೫,೦೦೦ ರೂಪಾಯಿ ವಹಿವಾಟು ನಡೆಸಿದರು. ಸಂಚಾಲಕಿ ಡಾ. ಮೇವಿ ಮಿರಾಂದ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಬಿಂದು ಟಿ., ವ್ಯವಹಾರ ಅಧ್ಯಯನ ವಿಭಾಗ ಮುಖ್ಯಸ್ಥ ಡಾ. ರಘು ನಾಯ್ಕ, ಗ್ರಂಥಪಾಲಕ ಕೃಷ್ಣ ಸಾಸ್ತಾನ, ಪ್ಲೇಸ್ಮೆಂಟ್ ಸಂಚಾಲಕರಾದ ದಿನೇಶ್ ಎಂ. ಮತ್ತು ಉಮೇಶ್ ಪೈ, ಡಾ. ಗೀತಾ ಎನ್., ಕನ್ನಡ ವಿಭಾಗದ ರತ್ನಮಾಲ, ಡಾ. ಆಶಾ ಸಿ. ಇಂಗಳಗಿ, ವಿದ್ಯಾರ್ಥಿ
ಸಂಘಟನೆಯ ಅಧ್ಯಕ್ಷರಾದ ಸುಪ್ರೀತಾ, ಉಪನ್ಯಾಸಕರಾದ ಸ್ಮಿತಾ ಹೆಗ್ಡೆ, ನಮಿತಾ ಹೆಗ್ಡೆ, ಧನ್ಯ, ವಿನಯಶ್ರೀ, ಆರತಿ, ಅರವಿಂದ ಭಟ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಕಲಚೇತನರ ಸಪ್ತಾಹ ಉದ್ಘಾಟನೆ

ಉಡುಪಿ, ನ.26: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ...

ನಗರದ ಸ್ವಚ್ಛತೆಗೆ ಪೌರಕಾರ್ಮಿಕರ ಕೊಡುಗೆ ಅಮೂಲ್ಯ: ಶಾಸಕ ಯಶ್‌ಪಾಲ್ ಎ ಸುವರ್ಣ

ಉಡುಪಿ, ನ.26: ಸ್ವಚ್ಛತೆಯಲ್ಲಿ ಉಡುಪಿಯು ರಾಷ್ಟ್ರಮಟ್ಟದಲ್ಲಿ ಗುರುತಿಸಲು ಕಾರಣ ಜಿಲ್ಲೆಯ ಪೌರಕಾರ್ಮಿಕರು....

ರಥಬೀದಿ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

ಮಂಗಳೂರು, ನ.26: ಡಾ. ಪಿ. ದಯಾನಂದ ಪೈ-ಪಿ.ಸತೀಶ್ ಪೈ. ಸರ್ಕಾರಿ ಪ್ರಥಮ...

ಆಳ್ವಾಸ್ ಕಾಲೇಜಿನಲ್ಲಿ ಸಿನಿಮಾ ರಸಗ್ರಹಣ ಕಾರ್ಯಾಗಾರ

ವಿದ್ಯಾಗಿರಿ, ನ.26: ಗಾಳಿ, ನೀರು, ಅಗ್ನಿಯಷ್ಟೇ ‘ದೃಶ್ಯ-ಶ್ರವ್ಯ ಮಾಧ್ಯಮ’ವೂ ಬದುಕಿನ ಅವಿಭಾಜ್ಯ...
error: Content is protected !!