ಉಡುಪಿ, ಮೇ 1: ಶ್ರೀಮದ್ಭಾಗವತ ಮಹಾಪುರಾಣ ಪ್ರತಿಪಾದ್ಯನಾದ ಶ್ರೀಕೃಷ್ಣನ ಸನ್ನಿಧಿಯಲ್ಲಿ ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಜಗನ್ನಿಯಾಮಕನಾದ ಶ್ರೀಕೃಷ್ಣನು ತನ್ನ ದಿವ್ಯವಾದ ಸಾನ್ನಿಧ್ಯವನ್ನು ಶ್ರೀಮದ್ಭಾಗವತ ಮಹಾಪುರಾಣದಲ್ಲಿ ಇಟ್ಟಿದ್ದಾನೆ. ಆದ್ದರಿಂದ ಶ್ರೀಮದ್ಭಾಗವತವು ಸಾಕ್ಷಾತ್ ಶ್ರೀಕೃಷ್ಣ ಸ್ವರೂಪವಾಗಿದೆ. ಕಲಿಯ ಬಾಧೆಯಿಂದ ಪಾರಾಗಲು ಶ್ರೀಮದ್ಭಾಗವತವೇ ದಿವ್ಯೌಷಧಿಯಾಗಿದೆ. ಇಂಥಹ ಶ್ರೀಮದ್ಭಾಗವತ ಪ್ರವಚನ ಸಪ್ತಾಹವನ್ನು ಶ್ರೀ ಸುವಿದ್ಯೇಂದ್ರತೀರ್ಥಶ್ರೀಪಾದರು ಶ್ರೀಕೃಷ್ಣನ ಸನ್ನಿಧಿಯಲ್ಲಿ ಪ್ರಾರಂಭಿಸಿದರು. ಅಭಿನವ ಶುಕಾಚಾರ್ಯರೆಂದೇ ಪ್ರಸಿದ್ಧರಾಗಿರುವ ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದರು ಈವರೆಗೆ ಸಾವಿರಾರು ಬಾರಿ ಶ್ರೀ ಮದ್ಭಾಗವತ ಪ್ರವಚನನ್ನು ನಡೆಸಿದ್ದಾರೆ. ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಪೀಠಾಧಿಪತಿಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ವಿಶೇಷ ಸಂಕಲ್ಪದಂತೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೇ 6 ರವರಿಗೆ ಪ್ರವಚನ ಕಾರ್ಯಕ್ರಮ ನಡೆಯಲಿದ್ದು ಮಠದ ದಿವಾನರಾದ ಮುರಲೀಧರಾಚಾರ್ಯ ದಂಪತಿಗಳು ಕಾರ್ಯಕ್ರವನ್ನು ಪ್ರಯೋಜಿಸಿದ್ದಾರೆ. ಸಂಜೆ 6 ರಿಂದ 7 ರವರೆಗೆ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ಉಡುಪಿ ಶ್ರೀ ಕೃಷ್ಣ ಮಠ: ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಆರಂಭ
ಉಡುಪಿ ಶ್ರೀ ಕೃಷ್ಣ ಮಠ: ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಆರಂಭ
Date: