ಬಾರಕೂರು, ಏ.30: ಬಾರಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದ್ಮ ಗಂಗಾಧರ್ ಹಿರಿಯಡ್ಕ ಇವರ ನೇತೃತ್ವದಲ್ಲಿ ಸಹಜ ಯೋಗ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ನಡೆಸಲಾಯಿತು. ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೊ. ರಮೇಶ್ ಆಚಾರ್ ವಹಿಸಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿರ್ವಹಣಾ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸುದಿನ್ ಟಿ ಏ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಇಂದಿನ ಒತ್ತಡದ ಜಗತ್ತಿನಲ್ಲಿ ಯೋಗದ ಅವಶ್ಯಕತೆಯನ್ನು ವಿವರಿಸಿದರು. ಪದ್ಮ ಗಂಗಾಧರ್ ಹಿರಿಯಡ್ಕ ಇವರು ಸಹಜ ಯೋಗದ ಕುರಿತು ಮಾತನಾಡುತ್ತಾ ಪ್ರಾಯೋಗಿಕವಾಗಿ ಧ್ಯಾನದ ರೀತಿಯನ್ನು ಹೇಳಿಕೊಟ್ಟರು. ಪ್ರತಿ ದಿನವೂ ದಿನಕ್ಕೆ ಎರಡು ಬಾರಿ ಹತ್ತು ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಎಂಬುವುದನ್ನು ಒತ್ತಿ ಹೇಳಿದರು. ತೃತೀಯ ಬಿಎ ವಿದ್ಯಾರ್ಥಿ ಸುಜನ್ ಪ್ರಾರ್ಥಿಸಿದರು. ಪ್ರಥಮ ಬಿಸಿಎ ವಿದ್ಯಾರ್ಥಿನಿ ಪ್ರಿಯಾ ವಂದಿಸಿದರು. ಪ್ರಥಮ ಬಿಸಿಎ ವಿದ್ಯಾರ್ಥಿ ಸುದರ್ಶನ್ ಕಾರ್ಯಕ್ರಮ ನಿರೂಪಿಸಿದರು.
ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸ.ಪ್ರ.ದ.ಕಾಲೇಜು: ಸಹಜ ಯೋಗ ಕಾರ್ಯಕ್ರಮ
ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸ.ಪ್ರ.ದ.ಕಾಲೇಜು: ಸಹಜ ಯೋಗ ಕಾರ್ಯಕ್ರಮ
Date: