ಉಡುಪಿ, ಏ.29: ರಮಾಕಾಂತ ಪುರಾಣಿಕ್ ಹೆಚ್. ಇವರು ಮಂಡಿಸಿದ ‘Studies on the physical and NLO properties of Halogen substituted novel Chalcones’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಘಟಿಕೋತ್ಸವದಲ್ಲಿ ಪಿಎಚ್ ಡಿ ಪದವಿಯನ್ನು (ಡಾಕ್ಟರೇಟ್) ಪ್ರಧಾನ ಮಾಡಲಾಯಿತು. ರಮಾಕಾಂತ ಪುರಾಣಿಕರು ಎಂಎಸ್ಸಿ, ಎಂಟೆಕ್, ಎಂಫಿಲ್ ಪದವೀಧರರಾಗಿದ್ದು, ಡಾ. ರವೀಂದ್ರ ಹೆಚ್ .ಜೆ (ಭೌತಶಾಸ್ತ್ರ ಮುಖ್ಯಸ್ಥರು, ಎಸ್.ಎಮ್.ವಿ.ಐ.ಟಿಎಮ್ ಬಂಟಕಲ್) ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಇವರು ಪ್ರಸ್ತುತ ಮಂಗಳೂರಿನ ರಥಬೀದಿಯಲ್ಲಿರುವ ಡಾ. ಪಿ. ದಯಾನಂದ ಪೈ ಪಿ ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದು, ಹಟ್ಟಿಯಂಗಡಿ ಗಣಪತಿ ಪುರಾಣಿಕ್ ಮತ್ತು ಶಾರದಾ ಪುರಾಣಿಕ್ ದಂಪತಿಗಳ ಪುತ್ರ.
ರಮಾಕಾಂತ ಪುರಾಣಿಕರಿಗೆ ಪಿ.ಎಚ್.ಡಿ ಪದವಿ
ರಮಾಕಾಂತ ಪುರಾಣಿಕರಿಗೆ ಪಿ.ಎಚ್.ಡಿ ಪದವಿ
Date: