ಉಡುಪಿ, ಏ.26: ರಾಜ್ಯದಲ್ಲಿ ಮೊದಲ ಹಂತದ ಮತದಾನ ಶುಕ್ರವಾರ ಮುಕ್ತಾಯಗೊಂಡಿದೆ. ಸುಡು ಬಿಸಿಲನ್ನು ಲೆಕ್ಕಿಸದೇ ಪ್ರಜ್ಞಾವಂತ ನಾಗರಿಕರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಶೇ. 77.11 ಮತದಾನ ಆಗಿದೆ. ಕಳೆದ ಬಾರಿಯ ಲೋಕಸಭಾ ಚುನಾವಣೆಗೆ ಹೋಲಿಸಿದರೆ (ಶೇ. 75.97) ಈ ಬಾರಿ ಗರಿಷ್ಠ ಮತದಾನ ಆಗಿದೆ. ಸ್ವೀಪ್ ಸಮಿತಿಯ ವತಿಯಿಂದ ಮತದಾರರ ಜಾಗೃತಿ ಬಹಳ ಪರಿಣಾಮಕಾರಿಯಾಗಿ ನಡೆದಿದೆ ಎಂಬುದು ಸಾಬೀತಾಗಿದೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾನ ಪ್ರಮಾಣ: ಕುಂದಾಪುರ- 79.11, ಉಡುಪಿ-77.84, ಕಾಪು-79.03, ಕಾರ್ಕಳ-79.69, ಶೃಂಗೇರಿ- 80.27, ಮೂಡಿಗೆರೆ-77.43, ಚಿಕ್ಕಮಗಳೂರು-70.70 ಮತ್ತು ತರಿಕೆರೆಯಲ್ಲಿ ಶೇ. 74.22 ಮತದಾನವಾಗಿದೆ.