ಉಡುಪಿ, ಏ. 18: ಮಣಿಪಾಲದ ಕೆ ಹೆಚ್ ಬಿ ಕಾಲೋನಿಯಲ್ಲಿರುವ ಮಣಿಪಾಲ್ ಹಿಲ್ಸ್ ರೋಟರಿ ಮಕ್ಕಳ ಗ್ರಂಥಾಲಯದಲ್ಲಿ ‘ವಿದ್ಯುತ್ ನಡೆದು ಬಂದ ದಾರಿ ಮತ್ತು ವಿದ್ಯುತ್ ಜೀವನ’ ಪುಸ್ತಕದ ಬಿಡುಗಡೆ ಕಾರ್ಯಕ್ರಮ ನಡೆಯಿತು. ಮಣಿಪಾಲದ ವಸಂತ ಗೀತ ಪ್ರಕಾಶನದಿಂದ ಪ್ರಕಟಣೆಯಾದ ಪುಸ್ತಕದ ಲೇಖಕ ಗೋಪಿನಾಥ್ ರಾವ್ ಸರ್ವದೇ ಇವರು ಕರ್ನಾಟಕ ಎಲೆಕ್ಟ್ರಿಸಿಟಿ ಬೋರ್ಡ್ ನ ನಿವೃತ್ತ ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್.
ಪುಸ್ತಕ ಬಿಡುಗಡೆಗೊಳಿಸಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಪುಸ್ತಕದ ಬಗ್ಗೆ ಮಾತನಾಡಿ, ಲೇಖಕರು ಕೆಇಬಿ ನೌಕರರ ಕೆಲಸ ಕಾರ್ಯದ ಬಗ್ಗೆ ಹಾಗೂ ಅಂದಿನ ಕೆಲಸ ಮತ್ತು ಇಂದಿನ ನೌಕರರ ಕೆಲಸದ ಬಗ್ಗೆ ಒಳ್ಳೆಯ ಮಾಹಿತಿ ನೀಡಿದ್ದಾರೆ ಎಂದರು.
ರೋಟರಿ ಜಿಲ್ಲೆ 3182 ಜಿಲ್ಲಾ ಗವರ್ನರ್ ಸಿಎ ದೇವಾನಂದ್, ಕೆಪಿಟಿಸಿ ಎಲ್ ಬೆಂಗಳೂರು ವಿಶ್ರಾಂತ ತಾಂತ್ರಿಕ ನಿರ್ದೇಶಕ
ಎನ್ ರಘುಪ್ರಕಾಶ್, ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಪಾಲಕರಾದ ಜಯಶ್ರೀ, ಕಸಾಪ ಉಡುಪಿ ತಾಲೂಕು ಘಟಕ ಅಧ್ಯಕ್ಷರಾದ ರವಿರಾಜ್ ಎಚ್ ಪಿ., ಕೆಪಿಟಿಸಿಎಲ್ ಉಡುಪಿ ಎಇಇ ಎಸ್. ಗಣರಾಜ ಭಟ್, ರೋಟರಿ ಮಣಿಪಾಲ ಹಿಲ್ಸ್ ಕಾರ್ಯದರ್ಶಿ ಮಾಧವ ಮಯ್ಯ, ಮುಂತಾದವರು ಕಾರ್ಯ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ವಸಂತ ಗೀತ ಪ್ರಕಾಶನದ ಪ್ರಕಾಶಕರಾದ ವಸಂತ ಗೋಪಿನಾಥ್ ರಾವ್ ಹಾಗೂ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಲ್ಲಿಕಾ, ಪುರುಷೋತ್ತಮ್ ಮಕ್ಕಿತ್ತಾಯ, ಮಂಜುನಾಥ ಭಟ್ ಹಾಗೂ ಶಶಿಕಾಂತ್ ಇವರನ್ನು ಪುರುಷೋತ್ತಮ್ ಸರ್ವದೇ ಸನ್ಮಾನಿಸಿದರು. ವಿಜಯ್ ಸ್ವಾಗತಿಸಿ, ಉದಯ್ ಕುಮಾರ್ ವಂದಿಸಿದರು. ಜ್ಯೋತಿ ಪುರುಷೋತ್ತಮ್ ನಿರೂಪಿಸಿದರು.