ಬೆಂಗಳೂರು, ಏ.17: ರಾಜ್ಯದ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿರುವ ಕಾಲಘಟ್ಟದಲ್ಲೇ ಸಿಹಿ ಸುದ್ಧಿಯೊಂದು ಸಿಕ್ಕಿದೆ. ಈ ಬಾರಿ ಮುಂಗಾರು ಕಳೆಗಟ್ಟುವ ನಿರೀಕ್ಷೆಯಿದ್ದು ತನ್ಮೂಲಕ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಜೂನ್ ವೇಳೆಗೆ ರಾಜ್ಯದಲ್ಲಿ ನೀರಿನ ಸಮಸ್ಯೆ ದೂರವಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. ರಾಜ್ಯದ ಮುಂಗಾರು ಸರಾಸರಿ ವಾಡಿಕೆ ಮಳೆ ಪ್ರಮಾಣ 85.2 ಸೆಂ.ಮೀ. ದೀರ್ಘಾವಧಿ ಸರಾಸರಿ ವಾಡಿಕೆ ಮಳೆ ವಿವರ ಹೀಗಿದೆ- ಜೂನ್ ತಿಂಗಳಿನಲ್ಲಿ 19.9 ಸೆಂ.ಮೀ., ಜುಲೈ- 27.1 ಸೆಂ.ಮೀ., ಆಗಸ್ಟ್- 22 ಸೆಂ.ಮೀ., ಸೆಪ್ಟೆಂಬರ್ 16.1 ಸೆಂ.ಮೀ.
ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ
ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ
Date: