Monday, November 25, 2024
Monday, November 25, 2024

ಸಾಂದೀಪನಿ ವಿದ್ಯಾಕೇಂದ್ರದಲ್ಲಿ ನವ-ಯುವ ದಂಪತಿಗಳ ಸಮಾವೇಷ

ಸಾಂದೀಪನಿ ವಿದ್ಯಾಕೇಂದ್ರದಲ್ಲಿ ನವ-ಯುವ ದಂಪತಿಗಳ ಸಮಾವೇಷ

Date:

ಕಾರ್ಕಳ, ಮಾ.31: ವಸುದೈವ ಕುಟುಂಬಕಂ, ಸರ್ವೇಜನ: ಸುಖಿನೋ ಭವಂತು ಎಂದು ಜಗತ್ತಿಗೆ ಸಾರಿದ ದೇಶ ನಮ್ಮದು. ಸಂಸ್ಕೃತಿ, ಸಂಸ್ಕಾರ, ಸದ್ವಿಚಾರ, ಆಚಾರ, ವಿಚಾರಗಳನ್ನು ಒಳಗೊಂಡ ಬಹುಸಂಪನ್ನತೆಯ ಘನತೆ, ಗೌರವದ ನೆಲವಿದು. ಇಂತಹ ನೆಲದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯು ಅನುಕರಣೆ ಹೆಚ್ಚಾಗುತ್ತಿದೆ ಎಂಬುದು ಕಳವಳಕಾರಿ ಸಂಗತಿಯಾಗಿದೆ. ಇದರ ಪರಿಣಾಮ ಸಾಂಸಾರಿಕ ತಾಪತ್ರಯಗಳು, ಕೌಟುಂಬಿಕ ಕಲಹಗಳು ಗಣ್ಯವಾಗಿದ್ದು ಸಾಮರಸ್ಯದ ಬಾಂಧವ್ಯದ ನಡೆ-ನುಡಿಗಳು ನಗಣ್ಯವಾಗಿವೆ. ನಾವಿಂದು ಜಾಗೃತರಾಗ ಬೇಕಾಗಿದೆ. ಈ ನಿಟ್ಟಿನಲ್ಲಿ ಸಮರಸದ ಬಾಳನ್ನು ನಡೆಸುತ್ತಾ ರಾಷ್ಟ್ರ- ಕಟ್ಟುವುದಕ್ಕಾಗಿ ಕೈ ಜೋಡಿಸುವಂತಹ ಮಾದರಿ ಕುಟುಂಬ ನಿರ್ಮಿಸಬೇಕಿದೆ. ದಾಂಪತ್ಯ ಎನ್ನುವುದು ವೈಭವಕ್ಕಲ್ಲ, ವೈಭೋಗಕ್ಕೂ ಅಲ್ಲ. ಗದ್ದಲ, ಗುದ್ದಾಟಗಳಿಗೂ ಅಲ್ಲ. ದಾಂಪತ್ಯವೆಂಬುದು ಸರಸ, ವಿರಸ, ಸಮರಸದ ಬಾಳುವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳ ಬೇಕಾಗಿದೆ. ಆದರ್ಶ ದಾಂಪತ್ಯದ ಮೂಲಕ ಸುಖಿಪರಿವಾರವನ್ನು ಹುಟ್ಟು ಹಾಕಬೇಕೆಂಬ ಆಶಯ ಸರ್ವ ಬಂಧುಗಳದು. ನವ-ಯುವ ದಂಪತಿಗಳ ಸಮಾವೇಷ ಗೃಹಸ್ಥಾಶ್ರಮದ ಜೀವನ ಪದ್ಧತಿಯ ಸಂಸ್ಕಾರ, ಸಾಮರಸ್ಯದ ಬದುಕನ್ನು ಪ್ರಸ್ತುತ ಪಡಿಸುವ ಯುವ- ನವ ದಂಪತಿಗಳ ಉಚಿತ ಸಮಾವೇಶವನ್ನು ಭಾರತಿ ಸೇವಾ ಸಮಿತಿ ಕಾರ್ಕಳ ಹಾಗೂ ಕುಟುಂಬ ಪ್ರಬೋಧನ್ ಸಹಯೋಗದೊಂದಿಗೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾದ ಸು.ರಾಮಣ್ಣರವರ ಮಾರ್ಗದರ್ಶನದಲ್ಲಿ ಕಾರ್ಕಳದ ಸಾಂದೀಪನಿ ವಿದ್ಯಾಕೇಂದ್ರದಲ್ಲಿ ಏಪ್ರಿಲ್ 7 ಆದಿತ್ಯವಾರದಂದು, ಬೆಳಗ್ಗೆ 9 ರಿಂದ ಮದ್ಯಾಹ್ನ 3 ಗಂಟೆಯವರೆಗೆ ಆಯೋಜಿಸಲಾಗಿದೆ. ಆಸಕ್ತ ದಂಪತಿಗಳು ಈ ಮುಂದಿನ ಸಂಪರ್ಕ ಸಂಖ್ಯೆಗೆ ಕರೆಮಾಡಿ ನೊಂದಾಯಿಸಿಕೊಳ್ಳುವಂತೆ ಕೋರಲಾಗಿದೆ. 9632381348, 8150059912

ದಾಖಲಾತಿ ಆಹ್ವಾನ: ಸೇವೆ, ಸಂಸ್ಕಾರ, ಶಿಕ್ಷಣ, ಸಾಮರಸ್ಯ, ಸಂಘಟನೆ ಎಂಬ ಧ್ಯೇಯದೊಂದಿಗೆ 1991 ರಲ್ಲಿ ಕಾರ್ಕಳದಲ್ಲಿ ಪ್ರಾರಂಭಗೊಂಡ ಸಂಸ್ಥೆ ಭಾರತಿ ಸೇವಾ ಸಮಿತಿ (ರಿ). ಇವರ ಪ್ರಾಯೋಜಕತ್ವದಲ್ಲಿ ಪೆರ್ವಾಜೆ ಸಮೀಪದ ಭಾರತೀ ನಗರದಲ್ಲಿ ಸಾಂದೀಪನಿ ವಿದ್ಯಾ ಕೇಂದ್ರವು ಕಾರ್ಯಚರಿಸುತ್ತಾ ಬರುತ್ತಿದೆ. ಕಳೆದ 31 ವರ್ಷಗಳಿಂದ ಗುರುಕುಲ ಮಾದರಿಯಲ್ಲಿ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ದೈಹಿಕ, ಬೌದ್ಧಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಜ್ಞಾನಧಾರೆಯನ್ನು ಬಾಲ-ಬಾಲೆಯರಿಗೆ ನೀಡುತ್ತಾ ಬರಲಾಗುತ್ತಿದೆ. ಅತೀ ಕಡಿಮೆ ಶುಲ್ಕದಲ್ಲಿ ಮೂರು ವರ್ಷದ ಬಾಲ ಶಿಕ್ಷಣವನ್ನು ನೀಡುವ ಕಾರ್ಕಳ ಪರಿಸರದ ಏಕೈಕ ಸಂಸ್ಥೆಯಾಗಿದೆ. ಇಲ್ಲಿ ಸಂಸ್ಕಾರದ ಜೊತೆಗೆ ಆಧುನಿಕ ಪ್ರಶಿಕ್ಷಣವನ್ನು ಒದಗಿಸುತ್ತಾ ಮಗುವಿನ
ಸರ್ವತೋಮುಖ ಬೆಳವಣಿಗೆಗೆ ಅಡಿಪಾಯ ನೀಡಲು ಕಂಕಣಬದ್ಧವಾಗಿದೆ. 2 ವರ್ಷ 10 ತಿಂಗಳ ಪ್ರಾಯದ ಮಗುವನ್ನು ಉಷಾ ತರಗತಿಗೂ, 3 ವರ್ಷ 10 ತಿಂಗಳ ಪ್ರಾಯದ ಮಗುವನ್ನು ಅರುಣ ತರಗತಿಗೂ (ಎಲ್.ಕೆ.ಜಿ), 4 ವರ್ಷ 10 ತಿಂಗಳ ಪ್ರಾಯದ ಮಗುವನ್ನು ಉದಯ (ಯು.ಕೆ.ಜಿ) ತರಗತಿಗೂ ದಾಖಲಾತಿ ಮಾಡಲಾಗುತ್ತದೆ. ಈ ವರ್ಷದ ದಾಖಲಾತಿ ಎಪ್ರಿಲ್ 1 ರಿಂದ ಪ್ರಾರಂಭಗೊಳ್ಳಲಿದೆ. ಆಸಕ್ತರು ವಿವರಗಳಿಗಾಗಿ 9611838280, 9845438960 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...

ತುಳು ಭಾವಗೀತೆ ಸ್ಪರ್ಧೆ

ಉಡುಪಿ, ನ.24: ತುಳುಕೂಟ ಉಡುಪಿ (ರಿ,) ವತಿಯಿಂದ ದಿ. ನಿಟ್ಟೂರು ಸಂಜೀವ...

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...
error: Content is protected !!