ಕೋಟ, ಮಾ.29: ಕೋಟದ ಮಣೂರು ಪರಿಸರದ ಶ್ರೀ ಚಿತ್ತಾರಿ ಟ್ರಸ್ಟ್ ಮೂಲಕ ವಿವಿಧ ರೀತಿಯ ವಿನೂತನ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಕೋಟದ ಮಣೂರು ಮಹಾಲಿಂಗೇಶ್ವರ ದೇಗುಲದ ಹೇರಂಬ ಮಹಾಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸ್ಥಳೀಯ ಬಡ ಕುಟುಂಬಗಳಿಗೆ ಸ್ಥಳೀಯಾಡಳಿತದ ನೆರವಿನೊಂದಿಗೆ ಸೂರು, ಅನಾರೋಗ್ಯ ಪೀಡಿತರಿಗೆ ಆರೋಗ್ಯ ನಿಧಿ, ಕೋಟದ ಪಂಚವರ್ಣ ಯುವಕ ಮಂಡಲದ ಪ್ರತಿ ಭಾನುವಾರದ ಸ್ವಚ್ಛತಾ ಕಾರ್ಯಕ್ರಮಕ್ಕೆ ಉಪಹಾರದ ವ್ಯವಸ್ಥೆ, ಸ್ಥಳೀಯ ಸಂಘಸಂಸ್ಥೆಗಳ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ಹೀಗೆ ವಿವಿಧ ಯೋಜನೆಗಳಿಗೆ ಛಕ್ ಹಾಗೂ ಆದೇಶ ಪತ್ರವನ್ನು ಹಸ್ತಾಂತರಿಸಲಾಯಿತು. ಆದೇಶ ಪ್ರತಿಯನ್ನು ಬಡ ಕುಟುಂಬದ ಸೂರು ಕಲ್ಪಿಸುವ ಗುಲಾಬಿ ಕಾಸನಗುಂದು, ವೈದ್ಯಕೀಯ ನೆರವನ್ನು ಆದಿತ್ಯ ಭಟ್, ನಾಗರಾಜ್ ಆಚಾರ್, ಸಂಘ ಸಂಸ್ಥೆಗಳಾದ ಪಂಚವರ್ಣ ಸಂಸ್ಥೆ ಕೋಟ, ಅಪ್ಪು ಅಟ್ಯಾಕರ್ಸ್ ಮಣೂರು, ಚಿತ್ತಾರಿ ದೇಗುಲ, ಮಹಾಲಿಂಗೇಶ್ವರ ದೇಗುಲಕ್ಕೆ ಚಕ್ ವಿತರಿಸಲಾಯಿತು. ಶ್ರೀ ಚಿತ್ತಾರಿ ಟ್ರಸ್ಟ್ ಅಧ್ಯಕ್ಷ ಗೋಪಾಲ ಪೈ ವಿವಿಧ ಯೋಜನೆಗಳ ಆದೇಶ ಪತ್ರದ ಪ್ರತಿಯ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಟ್ರಸ್ಟ್ನ ಪ್ರಮುಖರಾದ ಪಾಂಡುರಂಗ ದೇವಾಡಿಗ, ನಿತ್ಯಾನಂದ ಪ್ರಭು, ಬಾಬು ಪೂಜಾರಿ , ಗೀತಾನಂದ ಫೌಂಡೇಶನ್ ಮಣೂರು ನಿರ್ದೇಶಕಿ ಗೀತಾ ಎ ಕುಂದರ್, ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಸತೀಶ್ ಹೆಚ್ ಕುಂದರ್, ಸದಸ್ಯ ಅಶೋಕ್ ಶೆಟ್ಟಿ, ದಿವ್ಯ ನಾಗಪ್ಪಯ್ಯ ಪ್ರಭು, ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಅರುಣಾಚಲ ಮಯ್ಯ, ಎಂ.ಎನ್ ಮಧ್ಯಸ್ಥ, ಮಹೇಶ್ ಹೊಳ್ಳ, ರಾಜೇಂದ್ರ ಉರಾಳ, ಮಹೇಶ್ ಶೆಟ್ಟಿ, ನ್ಯಾಯವಾದಿ ಟಿ.ಮಂಜುನಾಥ್ ಗಿಳಿಯಾರ್, ದ.ಸಂಸ ಕೋಟ ಇದರ ಕುಮಾರ್ ಕೋಟ, ರಾಜು ಬೆಟ್ಟಿನಮನೆ, ಶ್ರೀ ಚಿತ್ತಾರಿ ನಾಗಬ್ರಹ್ಮ ದೇಗುಲದ ಅಧ್ಯಕ್ಷ ರಮೇಶ್ ಪ್ರಭು, ಯುವ ಉದ್ಯಮಿ ರಾಜೇಶ್ ಪ್ರಭು, ಭರತ್ ಕುಮಾರ್ ಶೆಟ್ಟಿ, ಶಿವರಾಮ್ ಶೆಟ್ಟಿ, ಜಯರಾಮ್ ಆಚಾರ್, ಚಂದ್ರ ಆಚಾರ್, ಪಂಚವರ್ಣದ ಅಧ್ಯಕ್ಷ ಅಜಿತ್ ಆಚಾರ್, ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಅಪ್ಪು ಅಟ್ಯಾಕರ್ಸ್ ನ ಆದರ್ಶ ಶೆಟ್ಟಿ, ಉದ್ಯಮಿ ನಾಗೇಶ್ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.