ಮಣಿಪಾಲ, ಮಾ.21: ಹವಾಮಾನ ಬದಲಾವಣೆಯ ವಿದ್ಯಮಾನವು, ಇತರ ವಿಪತ್ತು ಪರಿಣಾಮಗಳ ಹೊರತಾಗಿ ಅಸ್ತಿತ್ವದಲ್ಲಿರುವ ಸಾಮಾಜಿಕ-ಆರ್ಥಿಕ ಅಸಮಾನತೆಗಳನ್ನು ಹೆಚ್ಚಿಸುತ್ತದೆ ಎಂದು ಪ್ರಾಧ್ಯಾಪಕಿ ಡಾ. ಮೈತ್ರೇಯಿ ಮಿಶ್ರಾ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಯೋಜಿಸಿದ್ದ ‘ಕ್ಲೈಮೇಟ್ ಚೇಂಜ್ ಇನ್ ದ ಈಸ್ಟರ್ನ್ ಹೈಲ್ಯಾಂಡ್’ ವಿಷಯದ ಕುರಿತು ಮಾತನಾಡಿದ ಡಾ. ಮೈತ್ರೇಯಿ, ಹವಾಮಾನ ಬದಲಾವಣೆಯು ಯಾವುದೇ ಬೇಧ ಭಾವವಿಲ್ಲದೆ ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದರು. ಇದು ಆಹಾರ ಮತ್ತು ನೀರಿನಂತಹ ಜೀವನದ ಮೂಲಭೂತ ಅಗತ್ಯದ ಮೂಲಗಳ ಮೇಲೆ ಗಂಭೀರವಾಗಿ ಪರಿಣಾಮ ಬೀರಬಹುದು, ಇದರಿಂದಾಗಿ ಅಸ್ತಿತ್ವದಲ್ಲಿರುವ ಅಸಮಾನತೆಗಳನ್ನು ವರ್ಧಿಸುತ್ತದೆ. ಈ ವಿದ್ಯಮಾನವು ‘ಈಸ್ಟರ್ನ್ ಹೈಲ್ಯಾಂಡ್ಸ್’ ವಿಶೇಷವಾಗಿ ಒಡಿಸ್ಸಾದಲ್ಲಿ ಕಾಣಬಹುದು ಎಂದರು. ಡಾ. ಮೈತ್ರೇಯಿ ಮಿಶ್ರಾ ಇವರು ಮಾಹೆಯ ಎಂ.ಐ.ಸಿಯಲ್ಲಿ ಪ್ರಾಧ್ಯಾಪಕರಾಗಿದ್ದು ಜರ್ಮನಿಯ ಹೈಡೆಲ್ ಬರ್ಗ್ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ ಪಡೆದಿದ್ದಾರೆ. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಕಾರ್ಯಕ್ರಮ ನಿರೂಪಿಸಿದರು ಮತ್ತು ತನಿಷ್ಕಾ ಕೋಟ್ಯಾನ್ ಕಾರ್ಯಕ್ರಮ ಸಂಯೋಜಿಸಿದರು.
ಹವಾಮಾನ ಬದಲಾವಣೆಯ ಪರಿಣಾಮ ಗಂಭೀರ
ಹವಾಮಾನ ಬದಲಾವಣೆಯ ಪರಿಣಾಮ ಗಂಭೀರ
Date: