ಉಡುಪಿ, ಮಾ.20: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ 2024-25 ನೇ ಸಾಲಿನ ಉದ್ದಿಮೆ ಪರವಾನಿಗೆ ನವೀಕರಣ ಕಾರ್ಯವು ಏಪ್ರಿಲ್ ಮಾಹೆಯಲ್ಲಿ ಪ್ರಾರಂಭವಾಗಲಿದ್ದು, ಎಲ್ಲಾ ಉದ್ಯಮದಾರರು ಹಾಗೂ ವ್ಯಾಪಾರಸ್ಥರು ನಿಗಧಿತ ದಾಖಲೆಗಳಾದ ಉದ್ಯಮದಾರರ ಆಧಾರ್ ಕಾರ್ಡ್ ನಕಲು ಪ್ರತಿ ಮತ್ತು ವಾಣಿಜ್ಯ ಕಟ್ಟಡದ ಬಾಡಿಗೆ ಕರಾರು ಪತ್ರ, ಒಪ್ಪಿಗೆ ಪತ್ರ, ಕಟ್ಟಡ ಮಾಲೀಕರ ಪುರಾವೆ, ಅಫಿದಾವಿತ್ ಹಾಗೂ ಹಿಂದಿನ ಸಾಲಿನ ವ್ಯಾಪಾರ ಪರವಾನಿಗೆ ಪತ್ರದ ನಕಲು ಪ್ರತಿಯೊಂದಿಗೆ ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಉದ್ಯಮ ಪರವಾನಿಗೆಯನ್ನು ನವೀಕರಿಸಿಕೊಳ್ಳಬಹುದಾಗಿದ್ದು, ನಂತರದ ಅವಧಿಗೆ ಕರಡು ಅಧಿಸೂಚನೆಯಂತೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಉದ್ಯಮ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಉದ್ಯಮ ನಡೆಸುತ್ತಿದ್ದಲ್ಲಿ ತಕ್ಷಣವೇ ಪಟ್ಟಣ ಪಂಚಾಯತ್ ಕಛೇರಿಗೆ ನಿಗದಿತ ದಾಖಲೆಗಳಾದ, ಅರ್ಜಿದಾರರ ಪೋಟೋ, ಅರ್ಜಿದಾರರ ಆಧಾರ ಕಾರ್ಡ್ ನಕಲು ಪ್ರತಿ, ವಾಣಿಜ್ಯ ಕಟ್ಟಡದ ಬಾಡಿಗೆ ಕರಾರು ಪತ್ರ, ಒಪ್ಪಿಗೆ ಪತ್ರ, ಕಟ್ಟಡ ಮಾಲೀಕರ ಪುರಾವೆ, ಅಫಿದಾವಿತ್ ಮತ್ತು ಚಾಲ್ತಿ ಸಾಲಿನ ವಾಣಿಜ್ಯ ಕಟ್ಟಡದ ತೆರಿಗೆ ಪಾವತಿಸಿದ ಪ್ರತಿಯೊಂದಿಗೆ ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಿ ಪರವಾನಿಗೆ ಪಡೆದುಕೊಳ್ಳಬೇಕು. ತಪ್ಪಿದ್ದಲ್ಲಿ ಕರ್ನಾಟಕ ಪೌರಸಭೆ ಅಧಿನಿಯಮ ಪ್ರಕಾರ ದಂಡನೆ ವಿಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಸಾಲಿಗ್ರಾಮ: ವ್ಯಾಪಾರೋದ್ದಿಮೆ ಪರವಾನಿಗೆ ನವೀಕರಣಕ್ಕೆ ಸೂಚನೆ
ಸಾಲಿಗ್ರಾಮ: ವ್ಯಾಪಾರೋದ್ದಿಮೆ ಪರವಾನಿಗೆ ನವೀಕರಣಕ್ಕೆ ಸೂಚನೆ
Date: