ಬಾರಕೂರು, ಮಾ.18: ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಏಸಿ ಮತ್ತು ಪ್ಲೇಸ್ಮೆಂಟ್ ಸೆಲ್ ಸಹಭಾಗಿತ್ವದಲ್ಲಿ ಗಣಕ ವಿಜ್ಞಾನ ವಿಭಾಗ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ಅಡಿಯಲ್ಲಿ ಸಾಫ್ಟ್ ಸ್ಕಿಲ್ ಮತ್ತು ಸಂದರ್ಶನ ಕೌಶಲ್ಯಗಳ ಕುರಿತು ಎರಡು ದಿನಗಳ ಕಾರ್ಯಗಾರ ನಡೆಯಿತು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಮೇಶ್ ಆಚಾರ್, ಇಂದಿನ ಔದ್ಯೋಗಿಕ ಜಗತ್ತಿನಲ್ಲಿ ಇಂತಹ ಕಾರ್ಯಗಾರಗಳ ಪ್ರಸ್ತುತತೆ ಅತಿ ಮುಖ್ಯ ಎನ್ನುತ್ತಾ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.
ಐಕ್ಯೂಏಸಿ ಸಂಚಾಲಕಿ ವಿದ್ಯಾ ಪಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶೋಭಾ ಆರ್ ಇವರು ಕಾರ್ಯಗಾರದ ಉದ್ದೇಶವನ್ನು ತಿಳಿಸಿದರು. ಮೊದಲ ದಿನದ ಕಾರ್ಯಗಾರದಲ್ಲಿ ಮಣಿಪಾಲದ ಮಾಹೆಯ ನಿರ್ವಹಣಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀವತ್ಸ ಗುಡಿ ಇವರು ರೆಸ್ಯೂಮ್ ರೈಟಿಂಗ್ ಹಾಗೂ ಸಂದರ್ಶನ ಕೌಶಲ್ಯಗಳ ಕುರಿತು ಉಪನ್ಯಾಸ ನೀಡಿದರು. ಸೈಂಟ್ ಫಿಲೋಮಿನಾ ಕಾಲೇಜು ಪುತ್ತೂರು, ಇಲ್ಲಿ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಪ್ರಶಾಂತ್ ರೈ ಪಿ ಇವರು ಸಂವಹನ ಕಲೆಯ ಕುರಿತು ಮಾತನಾಡುತ್ತಾ ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ಕಾರ್ಯನಿರ್ವಹಿಸುವಾಗ ನೌಕರ ಹೇಗಿರಬೇಕೆಂಬುದನ್ನು ತಿಳಿಸಿದರು.
ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುದಿನ್ ಟಿ ಎ., ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ರಾಘವೇಂದ್ರ ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಚಿಕ್ಕಹನುಮಯ್ಯ ಉಪಸ್ಥಿತರಿದ್ದರು. ತೃತೀಯ ಬಿಎ ವಿದ್ಯಾರ್ಥಿ ಸುಜನ್ ಪ್ರಾರ್ಥಿಸಿದರು. ತೃತೀಯ ಬಿ ಎಸ್ ಡಬ್ಲ್ಯೂ ವಿದ್ಯಾರ್ಥಿನಿ ಸೌಜನ್ಯ ಸ್ವಾಗತಿಸಿ, ಅನನ್ಯ ವಂದಿಸಿದರು. ಚೇತನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.