ನವದೆಹಲಿ, ಮಾ.15: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ ಗೆ ತಲಾ 2 ರೂ. ಕಡಿಮೆ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಘೋಷಿಸಿವೆ. 2022 ಮೇ ಬಳಿಕ ಇಂಧನ ದರ ಪರಿಷ್ಕರಣೆ ಮಾಡುತ್ತಿರುವುದು ಇದೇ ಮೊದಲು.
“ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ರೂ. 2 ರಷ್ಟು ಕಡಿಮೆ ಮಾಡುವ ಮೂಲಕ, ಪ್ರಧಾನಮಂತ್ರಿ ನರೇಂದ್ರ ಮೋದಿ ಕೋಟ್ಯಂತರ ಭಾರತೀಯರ ಕುಟುಂಬದ ಕಲ್ಯಾಣ ಮತ್ತು ಅನುಕೂಲತೆ ಯಾವಾಗಲೂ ತಮ್ಮ ಗುರಿಯಾಗಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ” ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳು ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಸಿಂಗ್ ಪೂರಿ ಹೇಳಿದ್ದಾರೆ.