ಉಡುಪಿ, ಮಾ.14: ಇತಿಹಾಸ ಪ್ರಸಿದ್ಧ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಮಾರ್ಚ್ 14 ರಂದು ಧ್ವಜಾರೋಹಣ ನೆರವೇರಿತು. ಮಾರ್ಚ್ 15 ರಂದು ಮಧ್ಯಾಹ್ನ ಮಹಾಪೂಜೆ, ಸಮಾರಾಧನೆ, ಸಂಜೆಯಿಂದ 3 ದಿನಗಳ ಕಾಲ ಅಬ್ಬನಡ್ಕ ಚೆಂಡು ಆರಂಭ, ರಾತ್ರಿ ತಪ್ಪಂಗಾಯಿ ಬಲಿ ಮಾರ್ಚ್ 16 ರಂದು ಮಧ್ಯಾಹ್ನ ಮಹಾಪೂಜೆ, ಸಮಾರಾಧನೆ, ರಾತ್ರಿ ಮೂಡು ಸವಾರಿ ಉತ್ಸವ, ಅಬ್ಬನಡ್ಕದಲ್ಲಿ ಕಟ್ಟೆಪೂಜೆ ಮಾರ್ಚ್ 17 ರಂದು ಮಧ್ಯಾಹ್ನ ಮಹಾಪೂಜೆ, ಸಮಾರಾಧನೆ, ರಾತ್ರಿ ಸಿರಿಭೂತಬಲಿ, ಕವಾಟ ಬಂಧನ, ಶಯನಪೂಜೆ ಮಾರ್ಚ್ 18 ರಂದು ಬೆಳಿಗ್ಗೆ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಆರಾಟ ಮಹೋತ್ಸವ, ಅವಭೃತೋತ್ಸವ ಮಾಚ್ 19 ರಂದು ಬೆಳಿಗ್ಗೆ ಧ್ವಜಾವರೋಹಣ ಮಾರ್ಚ್ 20 ರಂದು ಮಧ್ಯಾಹ್ನ ಮಹಾಪೂಜೆ, ಮಾರಿ ಸಮಾರಾಧನೆ, ಅನ್ನಸಂತರ್ಪಣೆ, ರಾತ್ರಿ ಮಹಾರಂಗಪೂಜೆ ಮಾರ್ಚ್ 21 ರಂದು ರಾತ್ರಿ ಪಂಚ ದೈವಗಳ ನೇಮೋತ್ಸವ ಜರಗಲಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ಬಿ.ಕೆ.ವಿಘ್ನೇಶ್ ಭಟ್ರವರು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಬೆಳ್ಮಣ್ಣು: ಧ್ವಜಾರೋಹಣ, ಮಾರ್ಚ್ 18 ರಂದು ಆರಾಟ ಮಹೋತ್ಸವ
ಶ್ರೀ ಕ್ಷೇತ್ರ ಬೆಳ್ಮಣ್ಣು: ಧ್ವಜಾರೋಹಣ, ಮಾರ್ಚ್ 18 ರಂದು ಆರಾಟ ಮಹೋತ್ಸವ
Date: