ಉಡುಪಿ, ಮಾ.10: ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 1.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡ ಕುದ್ರುಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದ ರಸ್ತೆಯನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.
ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ, ಪ್ರಮುಖರಾದ ರಾಘವೇಂದ್ರ ಭಟ್, ರಾಜು ಪೂಜಾರಿ ಉಪ್ಪೂರು, ಮಹೇಶ್ ಕೋಟ್ಯಾನ್, ಜಗನ್ನಾಥ್ ಪೂಜಾರಿ, ಧರಣೇಶ್, ಸಚಿನ್ ಪೂಜಾರಿ, ರಾಘವೇಂದ್ರ ಉಪ್ಪೂರು, ಪ್ರದೀಪ್ ಮಧ್ಯಸ್ಥ, ರಾಜೇಶ್ ರಾವ್, ಉಮೇಶ್ ಪೂಜಾರಿ, ರಮ್ಯ ರಾವ್, ವಿದ್ಯಾ, ಸಾವಿತ್ರಮ್ಮ ಮುಂತಾದವರು ಉಪಸ್ಥಿತರಿದ್ದರು.