Saturday, October 26, 2024
Saturday, October 26, 2024

ಕೇದಾರ್: ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ ಶ್ರೀ ಮಹಾವಿಷ್ಣುಮೂರ್ತಿ ದೇವಾಸ್ಥಾನದ ಶಾಸನ ಅಧ್ಯಯನ

ಕೇದಾರ್: ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ ಶ್ರೀ ಮಹಾವಿಷ್ಣುಮೂರ್ತಿ ದೇವಾಸ್ಥಾನದ ಶಾಸನ ಅಧ್ಯಯನ

Date:

ಉದ್ಯಾವರ, ಮಾ.7: ಉಡುಪಿ ಜಿಲ್ಲೆಯ ಉದ್ಯಾವರದ ಕೇದಾರ್ ಪರಿಸರದ ಹರಿಹರ ಕ್ಷೇತ್ರದಲ್ಲಿನ ಶಾಸನವನ್ನು ದೇವಾಲಯದ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರಾದ ಸಂತೋಷ್ ಸುವರ್ಣರವರ ಮಾಹಿತಿಯ ಮೇರೆಗೆ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ-ಉಡುಪಿ ಇದರ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ (ಇತಿಹಾಸ ಮತ್ತು ಪುರಾತತ್ತ್ವ ಉಪನ್ಯಾಸಕರು, ಎಂ.ಎಸ್.ಆರ್.ಎಸ್ ಕಾಲೇಜು-ಶಿರ್ವ) ಅಧ್ಯಯನಕ್ಕೆ ಒಳಪಡಿಸಿರುತ್ತಾರೆ.

ಪ್ರಸ್ತುತ ದೇವಾಲಯ ಜೀರ್ಣೋದ್ಧಾರದ ಸಂದರ್ಭದಲ್ಲಿ ಪತ್ತೆಯಾದ ಈ ಶಾಸನವನ್ನು ಈ‌ ಮೊದಲು ಪಾದೂರು‌ ಗುರುರಾಜ ಭಟ್ ಅವರು ದಾಖಲಿಸಿದ್ದು, ದೇವಾಲಯದ ಆಡಳಿಯ ಸಮಿತಿಯ ಅನುಮತಿಯ ಮೇರೆಗೆ ಈ ಶಾಸನವನ್ನು ಮರು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಶಾಸನವನ್ನು ದೇವಾಲಯದ ಪ್ರಾಂಗಣದಲ್ಲಿ ಸಂರಕ್ಷಿಸಲಾಗಿದ್ದು, ಕಣಶಿಲೆ (ಗ್ರಾನೈಟ್)ಯಲ್ಲಿ ಕೊರೆಯಲ್ಪಟ್ಟ ಈ ಶಾಸನವು 13ನೇ ಶತಮಾನದ ಕನ್ನಡ ಲಿಪಿ ಮತ್ತು ಭಾಷೆಯಲ್ಲಿದ್ದು 25 ಸಾಲುಗಳನ್ನು ಹೊಂದಿದೆ. ಶಾಸನದ ಮೇಲ್ಭಾಗದಲ್ಲಿ ಶಿವಲಿಂಗ, ಇಕ್ಕೆಲಗಳಲ್ಲಿ ದೀಪಕಂಬ, ಕೈ ಮುಗಿದು ಪದ್ಮಾಸನದಲ್ಲಿ ಕುಳಿತಿರುವ ಪುರುಷ ಮತ್ತು ಸೂರ್ಯ-ಚಂದ್ರರ ಗೀರು ಚಿತ್ರವಿದೆ.

ನಮಸ್ತುಂಗ ಶಿರಶ್ಚುಂಬಿ ಎಂಬ ಶೈವ ಸ್ತುತಿಯೊಂದಿಗೆ ಪ್ರಾರಂಭವಾಗುವ ಈ ಶಾಸನವು ಆಳುಪ ರಾಣಿ ಬಲ್ಲಮಹಾದೇವಿಯ (ಸಾ.ವ 1275-92) ಉಲ್ಲೇಖವನ್ನು ಹೊಂದಿದೆ. ಬಲ್ಲಮಹಾದೇವಿಯು ಉದಯಪುರದ (ಉದ್ಯಾವರ) ಅರಮನೆಯಲ್ಲಿರುವ ಕಾಲಘಟ್ಟದಲ್ಲಿ ಅಂದರೆ ಶಕವರುಷ 1213ನೆಯ (ಸಾ.ವ 1291) ಖರ ಸಂವತ್ಸರದ ತ್ರಯೋದಶಿ ಮಿಥುನ ಮಾಸದ ಆದಿವಾರದಂದು ಕೊಟ್ಟಂತಹ ಭೂ ದಾನವನ್ನು ಶಾಸನವು ತಿಳಿಸುತ್ತದೆ. ಶಾಸನದಲ್ಲಿನ ಲಿಪಿಗಳು ತೃಟಿತಗೊಂಡಿರುವುದರಿಂದ ಗೋಚರಿಸುವ ಪದಗಳನ್ನು ಆಧಾರಿಸಿ ಇದೊಂದು ದಾನ ಶಾಸನವೆಂದು ಊಹಿಸಬಹುದು. ಇದರೊಂದಿಗೆ ಬಯಲು, ಸಮುದಾಯ, 25 ಹೊಂನು ಮುಂತಾದ ಪದಗಳ ಉಲ್ಲೇಖವಿದ್ದು, ಶಾಸನವು ಶಾಪಾಶಯ ವಾಕ್ಯದೊಂದಿಗೆ ಮುಕ್ತಾಯಗೊಂಡಿದೆ. ಅಧ್ಯಯನದ ದೃಷ್ಟಿಯಿಂದ ಈ ಶಾಸನವು ಮಹತ್ವಪೂರ್ಣವಾದುದರಿಂದ ಹೆಚ್ಚಿನ ಅಧ್ಯಯನವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಸಂಶೋಧನಾರ್ಥಿಯು ತಿಳಿಸಿದ್ದಾರೆ.

ಕ್ಷೇತ್ರಕಾರ್ಯದಲ್ಲಿ ಎಂ.ಎಸ್.ಆರ್.ಎಸ್ ಇಲ್ಲಿನ ಪುರಾತತ್ವ ವಿದ್ಯಾರ್ಥಿಗಳಾದ ವಿಶಾಲ್ ರೈ ಕೆ, ಶ್ರಾವ್ಯಾ ಆರ್, ಮಂಜುನಾಥ ಹಾಗೂ ದೇವಾಲಯದ ಸಮಿತಿಯ ಸದಸ್ಯರು ಮತ್ತು ಸ್ಥಳೀಯರು ಸಹಕಾರ ನೀಡಿರುತ್ತಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇಂದಿನ (25-10-2024) ಚಿನ್ನದ ದರ

Gold 22 CT- Rs. 7295 Gold 24 CT- Rs. 7808 Silver-...

ರಕ್ತದಾನ ಶ್ರೇಷ್ಠದಾನ: ಡಾ. ಗಣನಾಥ ಎಕ್ಕಾರು

ಉಡುಪಿ, ಅ.25: ಯಾವುದೇ ದಾನಕ್ಕಿಂತಲೂ ರಕ್ತದಾನ ಶ್ರೇಷ್ಠದಾನವಾಗಿದ್ದು, ಅಪಾಯದಲ್ಲಿರುವವರ ಅಮೂಲ್ಯ ಜೀವವನ್ನು...

ತ್ಯಾಜ್ಯ ನಿರ್ವಹಣೆಯಲ್ಲಿ ನಗರಸಭೆಯೊಂದಿಗೆ ಸಹಕರಿಸಿ

ಉಡುಪಿ, ಅ.25: ಉಡುಪಿ ನಗರಸಭೆಯು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ವಿವಿಧ...

ಕಟ್ಟಡಗಳ ಭಗ್ನ ಅವಶೇಷಗಳನ್ನು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಲು ಸೂಚನೆ

ಉಡುಪಿ, ಅ.25: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಕಟ್ಟಡಗಳ ಭಗ್ನ ಅವಶೇಷಗಳನ್ನು ಎಲ್ಲೆಂದರಲ್ಲಿ...
error: Content is protected !!