ಬ್ರಹ್ಮಾವರ, ಮಾ.6: ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ, ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಹಾಗೂ ಬಿ. ಡಿ .ಶೆಟ್ಟಿ ಕಾಲೇಜ್ ಆಫ್ ಬಿಸ್ನೆಸ್ ಮ್ಯಾನೇಜ್ಮೆಂಟ್ ಮಾಬುಕಳ ಬ್ರಹ್ಮಾವರ ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ 9ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಬುಧವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾರ್ಚುನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಮಾಬುಕಳ ಮುಖ್ಯಸ್ಥರಾದ ತಾರಾನಾಥ್ ಶೆಟ್ಟಿ ವಹಿಸಿದ್ದರು.
ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಡಾ. ಗಣೇಶ್ ಗಂಗೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಕರಾವಳಿ ಜಿಲ್ಲೆಗಳ ಜಾನಪದ ಕಲೆ ಸಂಸ್ಕೃತಿ ವಿಶಿಷ್ಟವಾದದ್ದು. ಇಲ್ಲಿಯ ಯಕ್ಷಗಾನ, ಜಾನಪದ ಕುಣಿತಗಳು, ಜಾನಪದ ಆಟಗಳು, ಇವೆಲ್ಲವನ್ನೂ ನಮ್ಮ ಹಿರಿಯರು ಕಟ್ಟಿ ಕೊಟ್ಟಿದ್ದಾರೆ. ಇಂದು ಇಂತಹ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಿ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಹೋಳಿ ಕುಣಿತದ ಹಿರಿಯ ಜಾನಪದ ಕಲಾವಿದರಾದ ಮರಿಯ ನಾಯ್ಕ್ ಪೇತ್ರಿ ಅವರನ್ನು ಹಾಗೂ ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಶಿರೂರಿಂದ ಬ್ರಹ್ಮಾವಾರ ತಾಲೂಕಿನವರೆಗೆ ಕಂಡು ಬರುವ. ನಶಿಸಿ ಹೋಗುತ್ತಿರುವ ಹೌಂದರಾಯನ ವಾಲಗ್ ಕುಣಿತದ ಹಿರಿಯ ಕಲಾವಿದರಾದ ಗುಂಡು ಪೂಜಾರಿ ಸಾಲಿಗ್ರಾಮ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಂಗಾರಕಟ್ಟೆ ಚೇತನ ಪ್ರೌಢಶಾಲೆಯ ಅಮೂಲ್ಯ, ಪಾರ್ವತಿ ಇವರನ್ನು ನಗದು ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮುಖ್ಯ ಅಥಿತಿಗಳಾಗಿ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಮಾಬುಕಳ ಇದರ ಪ್ರಾಂಶುಪಾಲರಾದ ಸ್ಮಿತಾ ಮೌಲ್, ಚೇತನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕಲ್ಪನಾ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಸುವರ್ಣ ಕಟಪಾಡಿ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕವಾ೯ಲು ಉಪಸ್ಥಿತರಿದ್ದರು. ಪರಿಷತ್ ಖಜಾಂಚಿ ಹಾಗೂ ಶಿಕ್ಷಕರಾದ ಚಂದ್ರ ಹಂಗಾರಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಕಲಾವಿದರಾದ ಮಾಯಾ ಕಾಮತ್ ಮತ್ತು ಕುಸುಮಾ ಕಾಮತ್ ಉಪಸ್ಥಿತರಿದ್ದರು. ಶಿಕ್ಷಕ ವೃಂದದವರು ಸಹಕರಿಸಿದರು.