ಕಟಪಾಡಿ, ಮಾ.5: ಪಾಜಕ ಶ್ರೀ ವಿಶ್ವೇಶತೀರ್ಥ ಮಹಾವಿದ್ಯಾಲಾಯ ಪದವಿ ಕಾಲೇಜಿನ ಎನ್.ಎಸ್.ಎಸ್ ಘಟಕ ಹಾಗೂ ಕಟಪಾಡಿ ಜೆ.ಸಿ.ಐ ಜಂಟಿ ಆಶ್ರಯದಲ್ಲಿ, ಪ್ರಸಾದ್ ನೇತ್ರಾಲಯ ಉಡುಪಿ, ಮಿಷನ್ ಆಸ್ಪತ್ರೆ ಉಡುಪಿ ಹಾಗೂ ಜಿಲ್ಲಾ ಆಸ್ಪತ್ರೆ ಉಡುಪಿ ಇವರ ಸಹಯೋಗದೊಂದಿಗೆ ಒಂದು ದಿನದ ಉಚಿತ ನೇತ್ರ ತಪಾಸಣೆ, ರಕ್ತದಾನ, ಹಾಗೂ ಜನರಲ್ ಚಕಪ್ ಕ್ಯಾಂಪ್ ಕಾಲೇಜು ಸಬಾಂಗಣದಲ್ಲಿ ನಡೆಯಿತು. ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಹರಿ ಭಟ್ ಹಾಗೂ ಕಟಪಾಡಿ ಜೆ.ಸಿ.ಐ ಅಧ್ಯಕ್ಷ ಪ್ರಶಾಂತ್ ಆರ್ ಎಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಕಾಲದಲ್ಲಿ ಮನಷ್ಯನ ಜೀವನ ಶೈಲಿಯಿಂದ ಯಾವಾಗ ಯಾವ ಕಾಯಿಲೆ ಬರುತ್ತದೆ ಎಂಬುದೇ ತಿಳಿಯದಾಗಿದೆ. ಅದಕ್ಕಾಗಿ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಅವಕಾಶ ಇರುವವರು ರಕ್ತ ನೀಡಿ ಅಗತ್ಯ ಇರುವವರಿಗೆ ರಕ್ತ ಲಭ್ಯವಾಗುವಂತೆ ನೋಡಿಕೊಂಡರೆ ಜೀವನದಲ್ಲಿ ಹಲವಾರು ರೋಗಗಳಿಂದ ದುರವಿರಬಹುದು ಎಂದರು.
ಪ್ರಾಂಶುಪಾಲ ವಿಜಯ್ ಪಿ ರಾವ್, ಮಿಷನ್ ಆಸ್ಪತ್ರೆಯ ಡಾ. ಗಣೇಶ್ ಕಾಮತ್, ಪ್ರಸಾದ್ ನೇತ್ರಾಲಯದ ಡಾ. ತೇಜಸ್ವಿನಿ, ಜಿಲ್ಲಾಸ್ಪತ್ರೆಯ ಡಾ. ಮಂಜುಶ್ರೀ ಪೈ, ಜೆ.ಸಿ.ಐ ಕಟಪಾಡಿ ಅಧ್ಯಕ್ಷ ಪ್ರಶಾಂತ್ ಆರ್.ಎಸ್, ಪದವಿ ಕಾಲೇಜು ಸಂಯೋಜಕಿ ರಕ್ಷಿತಾ, ಉಪನ್ಯಾಸಕಿ ಸುಕನ್ಯಾ, ಕಾಲೇಜು ಎನ್.ಎಸ್,ಎಸ್ ಪ್ರಮುಖರಾದ ರೇವಿತ್ ಹಾಗೂ ರಮ್ಯಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸುಬೋಧ್ ಸ್ವಾಗತಿಸಿ, ರೇವಿತ್ ವಂದಿಸಿದರು. ನಿಧಿ ಕಾರ್ಯಕ್ರಮ ನಿರೂಪಿಸಿದರು. ಸುಮಾರು 450 ಕ್ಕೂ ಹೆಚ್ಚು ಜನರಿಗೆ ನೇತ್ರ ತಪಾಸಣೆ, ಆರೋಗ್ಯ ಪರೀಕ್ಷೆ ಮಾಡಲಾಯಿತು. 58 ಯೂನಿಟ್ ರಕ್ತ ಸಂಗ್ರಹ ಮಾಡಲಾಯಿತು.