ಉಡುಪಿ, ಮಾ. 1: 2023- 24ರ ಸಾಲಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ ಆಯುರ್ವೇದ ಪಂಚಕರ್ಮ (ಎಂ .ಡಿ) ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಡಾ. ಸುರಕ್ಷಾ ಎಸ್ ಅವರು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಸ್ವರ್ಣ ಪದಕ ವಿಜೇತರಾಗಿರುತ್ತಾರೆ. ಇವರು ಈ ಹಿಂದೆ ನಡೆದ ಯುಜಿ ಮತ್ತು ಪಿಜಿಯ ಎಲ್ಲಾ ವಿಭಾಗದಲ್ಲೂ ರಾಂಕ್ ಗಳನ್ನು ಪಡೆದಿರುತ್ತಾರೆ.
ಇವರು ಉಡುಪಿಯ ಮಧ್ವನಗರದ ಶಿಕ್ಷಕ ದಂಪತಿಗಳಾದ ಸುರೇಶ್ ಭಟ್ ಕಾಶಿ ಹಾಗೂ ಸುಮನಾ ಭಟ್ ಅವರ ಪುತ್ರಿ.