ಮುಂಬಯಿ, ಫೆ.26: ಗಜಲ್ ಮಾಂತ್ರಿಕ ಪದ್ಮಶ್ರೀ ಪುರಸ್ಕೃತ ಪಂಕಜ್ ಉಧಾಸ್ ಸೋಮವಾರ ವಿಧಿವಶರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರು ದೀರ್ಘಕಾಲದ ಅಸೌಖ್ಯದಿಂದ ನಿಧನರಾದರು ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ‘ಚಿಟ್ಟಿ ಆಯಿ ಹೈ’, ಚಾಂದನಿ ರಾತ್ ಮೈ’, ‘ನ ಕಜ್ರೆ ಕಿ ಧಾರ್’, ‘ಔರ್ ಅಹಿಸ್ತಾ ಕೀಜಿಯೆ ಬಾತೇನ್,’ ‘ಎಕ್ ತರಫ್ ಉಸ್ಕಾ ಘರ್’, ‘ಥೋಡಿ ಥೋಡಿ ಪಿಯಾ ಕರೋ’ ಅವರ ಜನಪ್ರಿಯ ಹಾಡುಗಳು.
ಗಣ್ಯರ ಸಂತಾಪ: ಪಂಕಜ್ ಅವರು ಭಾರತೀಯ ಸಂಗೀತದ ದಾರಿದೀಪವಾಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ. ಖ್ಯಾತ ಗಾಯಕರಾದ ಸೋನು ನಿಗಮ್, ಶಂಕರ್ ಮಹಾದೇವನ್ ಸೇರಿದಂತೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.