ಬ್ರಹ್ಮಾವರ, ಫೆ.23: ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಉಡುಪಿ ಜಿಲ್ಲೆಯ ಸಾಲಿಗ್ರಾಮ ಕಾಯಾಕಿಂಗ್ ಪಾಯಿಂಟ್ ನಲ್ಲಿ ಸಂವಿಧಾನ ಜಾಗೃತಿಯ ಅಂಗವಾಗಿ ವಿನೂತನವಾಗಿ ಪ್ರವಾಸಿ ಬೋಟನ್ನು ಸಂವಿಧಾನ ಜಾಗೃತಿ ಪಥವನ್ನಾಗಿ ವಿನ್ಯಾಸಗೊಳಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಂವಿಧಾನ ಜಾಗೃತಿ ಪಥಕ್ಕೆ ಚಾಲನೆ ನೀಡಲಾಯಿತು. ಸೀತಾ ನದಿಯಲ್ಲಿ ಕಾಯಾಕಿಂಗ್ ಮೂಲಕ ತೆರಳಿ ಮ್ಯಾಂಗ್ರೋ ಕಾಡುಗಳ ಮಧ್ಯೆ ನೀರಿನಲ್ಲಿ ಕಾಯಕಿಂಗ್ ದೋಣಿಗಳನ್ನು ಬಳಸಿ 75 ಎಂದು ಬರೆಯಲಾಯಿತು. ಸಾಲಿಗ್ರಾಮ ಕಯಾಕಿಂಗ್ ಪಾಯಿಂಟ್ ವಿನೂತನ ಪ್ರಯೋಗಗಳ ಮೂಲಕ ಜನಜಾಗ್ರತಿ ಮೂಡಿಸುವ ಕೆಲಸ ಮಾಡುತ್ತಿರುವುದು ಇದೇ ಮೊದಲೆನಲ್ಲ. ಇದಕ್ಕೂ ಮೊದಲು ಮತದಾನ ಜಾಗ್ರತಿ, ಪ್ಲಾಸ್ಟಿಕ್ ಜಾಗ್ರತಿ, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳನ್ನು ನವ ನವೀನ ಮಾದರಿಯ ಪ್ರಯೋಗಗಳ ಮೂಲಕ ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಲೇ ಬಂದಿದೆ. ಇದೀಗ ಸಂವಿಧಾನ ಜಾಗ್ರತಿ ಕಾರ್ಯಕ್ರಮವನ್ನು ಪ್ರಕೃತಿ ಮಡಿಲಲ್ಲಿ ಮಾಡಿದೆ.
ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಸಿಇಓ ಪ್ರತೀಕ್ ಬಾಯಲ್, ಕುಂದಾಪುರ ಸಹಾಯಕ ಆಯುಕ್ತರಾದ ರಶ್ಮಿ ಎಸ್ ಆರ್., ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ನಿರ್ದೇಶಕಿ ಅನಿತಾ ಮಡ್ಲೂರು, ಪ್ರೊಬೇಷನರಿ ಐಪಿಎಸ್ ಅಧಿಕಾರಿ ಹರ್ಷಪ್ರಿಯಂವದ, ಬ್ರಹ್ಮಾವರ ತಹಸಿಲ್ದಾರ್ ಶ್ರೀಕಾಂತ್ ಹೆಗ್ಡೆ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶಿವ ನಾಯ್ಕ, ಸಾಲಿಗ್ರಾಮ, ಕಯಾಕಿಂಗ್ ಪಾಯಿಂಟ್ ಮುಖ್ಯಸ್ಥ ಮಿಥುನ್ ಕುಮಾರ್ ಮೆಂಡನ್, ಲೋಕೇಶ್, ವಿನಯ್ ಮೊದಲಾದವರು ಇದ್ದರು.