ವ್ಯಕ್ತಿತ್ವ ಎಂಬುದು ಪರ್ಸನಲ್ ಹಾಗೂ ಪ್ರೊಫೆಷನಲ್ ಲೈಫ್ ನ ಮ್ಮಿಶ್ರಣವೆನ್ನಬಹುದು. ಆದರೆ ಒಮ್ಮೆ ಯೋಚಿಸಿ ನೋಡಿ, ನಮ್ಮ ಪರ್ಸನಲ್ ನಡವಳಿಕೆ ಹಾಗೂ ಪ್ರೊಫೆಷನಲ್ ನಡವಳಿಕೆಯಲ್ಲಿ ಬಹಳ ವ್ಯತ್ಯಾಸವಿರುವುದು. ಉದಾಹರಣೆಗೆ ಒಬ್ಬ ನಟ ಪ್ರೊಫೆಷನ್ ನಲ್ಲಿ ಪರಿಪಕ್ವ ಇರಬಹುದು, ಆದರೆ ಅವರ ವಯಕ್ತಿಕ ಜೀವನದಲ್ಲಿ ಹೊಂದಾಣಿಕೆಯ ಕೊರತೆ ಇರಬಹುದು, ಕಷ್ಟ ಅನುಭವಿಸುತ್ತಿರಬಹುದು. ಇದು ಎಲ್ಲರ ಜೀವನದಲ್ಲಿ ಕಾಣಬಹುದು. ವೃತ್ತಿ ನಮ್ಮ ಫ್ಯಾಷನ್ ಇರಬಹುದು ಅಥವಾ ಕೇವಲ ಹಣ ಸಂಪಾದನೆಗೆ ಇರಬಹುದು. ಅಲ್ಲಿ ನಮ್ಮ ಕೆಲಸಕ್ಕೆ ನಮಗೆ ಹಣ ಸಿಗುವುದು. ಆದರೆ ವೈಯಕ್ತಿಕ ಜೀವನದಲ್ಲಿ ನಮ್ಮ ಹೊಂದಾಣಿಕೆ, ಪರಸ್ಪರ ಪ್ರೀತಿ, ಗೌರವ ಮುಖ್ಯವೆನಿಸುತ್ತದೆ. ಅದರಲ್ಲಿ ಅನೇಕರು ಸೋಲುತ್ತಾರೆ. ಎರಡನ್ನೂ ಬ್ಯಾಲೆನ್ಸ್ ಮಾಡಿ ಹೋಗುವವರು ತೀರಾ ಕಡಿಮೆ ಅನ್ನಬಹುದು.
ಇಲ್ಲಿ ಇನ್ನೊಂದು ವಿಷಯ, ಏನೆಂದರೆ ನಾವು ಯಾವುದಕ್ಕೆ ಪ್ರಾಮುಖ್ಯತೆ ನೀಡುತ್ತೇವೆ ಎಂಬುದು. ಹಣ ಗಳಿಸುವುದೇ ನಮ್ಮ ಗುರಿಯಾದರೆ ನಮ್ಮ ವೃತ್ತಿಯೇ ನಮ್ಮ ಜೀವನವಾಗಿ ಬಿಡುತ್ತದೆ. ಸಂಬಂಧಗಳು ಏನು ಬೇಕಾದರೂ ಆಗಲಿ ಎನ್ನುವ ಮನೋಭಾವ. ಇನ್ನು ಕೆಲವರು ತಮ್ಮ ಸಂಬಂಧಗಳಿಗೆ ವಿಶೇಷ ಕಾಳಜಿ ವಹಿಸುತ್ತಾರೆ. ಅದನ್ನು ತಮ್ಮ ಪ್ರೀತಿ, ಗೌರವ, ಅಹಂ ಅನ್ನು ಬಿಟ್ಟು ಬೆಳೆಸುತ್ತಾರೆ. ಅವರಿಗೆ ಅದೇ ಮುಖ್ಯ. ಕರಿಯರ್ ನಲ್ಲಿ ಯಶಸ್ವಿಯಾದ ಮಾತ್ರಕ್ಕೆ ಒಳ್ಳೆಯ ಗಂಡ ಅಥವಾ ಹೆಂಡತಿ ಒಳ್ಳೆಯ ಅಪ್ಪ, ಅಮ್ಮ ಆಗುತ್ತಾರೆ ಎಂದು ಭಾವಿಸಬೇಡಿ. ಪ್ರೊಫೆಷನಲ್ ಲೈಫೇ ಬೇರೆ ಪರ್ಸನಲ್ ಲೈಫೇ ಬೇರೆ. ಎರಡರಲ್ಲಿ ನಮ್ಮ ಮನಸ್ಥಿತಿ ತೀರ ಭಿನ್ನವಾಗಿರುತ್ತದೆ. ಹುಡಗ ಹಣ ಸಂಪಾದನೆ ಮಾಡಿದ್ದಾನೆ ಎಂದು ಒಳ್ಳೆಯ ಗಂಡ ಆಗುತ್ತಾನೆ ಎಂದು ಭಾವಿಸಿ ಮದುವೆಯಾಗುವವರು ಅನೇಕರು. ಆದರೆ ಅವರು ಒಳ್ಳೆಯ ಗಂಡ ಆಗದೆ ಇರಬಹುದು. ಇಂಟರ್ ಪರ್ಸನಲ್ ಬುದ್ದಿವಂತಿಕೆ ಇದ್ದರೆ ನಮ್ಮ ಸಂಬಂದಗಳು ಉಳಿಯುತ್ತದೆ. ಇಲ್ಲಿ ನಮ್ಮ ಮನಸ್ಸು ಯಾವ ರೀತಿ ಕೆಲಸ ಮಾಡುತ್ತದೆ ಯಾವುದಕ್ಕೆ ಪ್ರಾಮುಖ್ಯತೆ ನೀಡುತ್ತದೆ ಎಂಬುದು ತಿಳಿದಿರಬೇಕು. ಹಣ ಗಳಿಸುವ ಬುದ್ದಿವಂತಿಕೆ ಇರಬಹುದು, ಆದರೆ ಅದೇ ವ್ಯಕ್ತಿ ಭಾವನೆಗಳನ್ನು ಅರ್ಥಮಾಡಿಕೊಳ್ಳದೆ ಇರಬಹುದು. ಆದ್ದರಿಂದ ಒಬ್ಬ ವ್ಯಕ್ತಿಯನ್ನು ಅಳೆಯುವಾಗ ಪ್ರೊಫೆಷನ್ ಹಾಗೂ ಪರ್ಸನಲ್ ನಡವಳಿಕೆಯನ್ನು ಮಿಕ್ಸ್ ಮಾಡಬೇಡಿ. ಅದು ಯಾವಾಗಲೂ ಬೇರೇನೆ. ಅದನ್ನು ನೀವು ಬೇರೆ ರೀತಿ ನೋಡಬೇಕಾಗುತ್ತದೆ.
ಎರಡನ್ನೂ ಸುಧಾರಿಸಲು ಆಗೋದಿಲ್ಲವೇ ಎಂದರೆ ಖಂಡಿತವಾಗಿಯೂ ಸಾಧ್ಯವಿದೆ.. ಪ್ರತಿಯೊಂದು ಕೆಲಸಕ್ಕೆ ಅದರದ್ದೇ ಸಮಯ ಕೊಟ್ಟಾಗ ಖಂಡಿತವಾಗಿಯೂ ಪರ್ಸನಲ್ ಲೈಫ್ ಹಾಗೂ ಪ್ರೊಫೆಷನಲ್ ಲೈಫಲ್ಲಿ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ. ಜೀವನದಲ್ಲಿ ಎರಡೂ ಅಗತ್ಯ, ಒಂದನ್ನು ಆಯ್ಕೆ ಮಾಡಲು ಆಗುವುದಿಲ್ಲ. ಬದುಕು ಸುಲಲಿತವಾಗಿ ನಡೆಯಲು ಎರಡೂ ಬೇಕೇ ಬೇಕು, ಮನಸ್ಸೂ ಬೇಕು. ನಮ್ಮ ಮಾನಸಿಕ ಆರೋಗ್ಯಕ್ಕೆ ನೆಮ್ಮದಿ ಸಿಗುವುದು ಎರಡೂ ಸರಿ ಇದ್ದಾಗ ಮಾತ್ರ ನೆನಪಿಡಿ.
-ಡಾ. ಹರ್ಷಾ ಕಾಮತ್