ಬೆಳ್ಮಣ್ಣು, ಫೆ.2: ಬೆಳ್ಮಣ್ಣು ಹೊಸಮಾರು ಹಳೆ ವಿದ್ಯಾರ್ಥಿ ಸಂಘದ 37ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಜರಗಿತು. ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ತಂತ್ರಿಗಳಾದ ಸತೀಶ್ ತಂತ್ರಿ ನಡಿಗುತ್ತು ದೀಪ ಪ್ರಜ್ವಲಿಸಿದರು, ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ಬಿ.ಕೆ. ವಿಘ್ನೇಶ್ ಭಟ್ ಅವರು ಆರ್ಶೀವಚನ ನೀಡಿದರು. ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರಾದ ಶ್ರೀಧರ್ ಭಟ್, ರಂಗಭೂಮಿ ಕಲಾವಿದರು, ಪತ್ರಕರ್ತರಾದ ಹರಿಪ್ರಸಾದ ನಂದಳಿಕೆ, ಬೆಳ್ಮಣ್ಣು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಮೇಶ್ವರೀ ಶೆಟ್ಟಿ, ಯುವ ಉದ್ಯಮಿ ಅರುಣ್ ಕುಮಾರ್ ನಿಟ್ಟೆ, ಬೆಳ್ಮಣ್ಣು ಸರಕಾರಿ ಪದವಿಪೂರ್ವ ಕಾಲೇಜಿನ ಶಿಕ್ಷಕಿ ಜಯಂತಿ ಶೆಟ್ಟಿ, ಬೆಳ್ಮಣ್ಣು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾದ ದಿನೇಶ್ ಕುಲಾಲ್ ಕೆದಿಲ, ಹೊಸಮಾರು ಶಾಲಾ ಮುಖ್ಯ ಶಿಕ್ಷಕಿ ಕಲಾವತಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀಧರ್ ನಡಿಗುತ್ತು ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಾಜ ಸೇವಕರಾದ ಎಸ್.ಕೆ. ಸಾಲ್ಯಾನ್, ಯುವ ಉದ್ಯಮಿ ಸುರೇಶ್ ದೇವಾಡಿಗ, ನಿವೃತ್ತ ಯೋಧರಾದ ರಾಧಕೃಷ್ಣ ಭಟ್, ಪ್ರಗತಿಪರ ಕೃಷಿಕರಾದ ವಿನ್ಸೆಂಟ್ ರೆಬೆಲ್ಲೋ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಳ್ಮಣ್ಣು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸಂದೀಪ್ ಅಂಚನ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬೆಳ್ಮಣ್ಣು ಹೊಸಮಾರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶರತ್ ಶೆಟ್ಟಿ, ಗೌರವಾಧ್ಯಕ್ಷರಾದ ಹರೀಶ್ ಕುಮಾರ್, ಕಾರ್ಯದರ್ಶಿ ಸಂದೇಶ್ ಅಂಚನ್ ಮೊದಲಾದವರಿದ್ದರು. ರಾಜೇಶ್ ಕುಲಾಲ್ ಸ್ವಾಗತಿಸಿದರು, ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ರಾವ್ ಮತ್ತು ಸತೀಶ್ ದೇವಾಡಿಗ ಸನ್ಮಾನಿತರ ಪರಿಚಯ ವಾಚಿಸಿದರು. ಸುರೇಶ್ ದೇವಾಡಿಗ ವಂದಿಸಿದರು.