Monday, November 25, 2024
Monday, November 25, 2024

ಕಾರ್ಕಡ: ಕೃಷ್ಣದೇವರಾಯನ ಶಾಸನ ಪತ್ತೆ

ಕಾರ್ಕಡ: ಕೃಷ್ಣದೇವರಾಯನ ಶಾಸನ ಪತ್ತೆ

Date:

ಬ್ರಹ್ಮಾವರ, ಜ.27: ಬ್ರಹ್ಮಾವರ ತಾಲ್ಲೂಕಿನ, ಪಡುಹೋಬಳಿಯ ಕಾರ್ಕಡ ಗ್ರಾಮದ ನಾಗೇಶ್ವರ ಸೋಮಯಾಜಿಯವರ ಜಮೀನಿನಲ್ಲಿರುವ ಶಾಸನವನ್ನು ಕಂಚಾರ್ತಿ ರಾಜೇಶ್ವರ ಉಪಾಧ್ಯಾಯರವರ ಮಾಹಿತಿಯ ಮೇರೆಗೆ ಎಂ.ಎಸ್.ಆರ್.ಎಸ್ ಕಾಲೇಜು-ಶಿರ್ವ ಇಲ್ಲಿನ ಪುರಾತತ್ವ ವಿಭಾಗದ ಉಪನ್ಯಾಸಕರಾದ‌ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನಕ್ಕೆ ಒಳಪಡಿಸಿರುತ್ತಾರೆ.

ಕಣ (ಗ್ರಾನೈಟ್) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನದ ಮೇಲ್ಭಾಗದಲ್ಲಿ ಶಿವಲಿಂಗ, ಸೂರ್ಯ-ಚಂದ್ರ ಮತ್ತು ಇಕ್ಕೆಲಗಳಲ್ಲಿ ನಂದಿ, ರಾಜಕತ್ತಿ ಮತ್ತು ದೀಪಕಂಬದ ಉಬ್ಬು ಕೆತ್ತನೆಯನ್ನು ಮಾಡಲಾಗಿದೆ. ಸುಮಾರು 5 ಅಡಿ ಎತ್ತರ ಮತ್ತು 2.5 ಅಡಿ ಅಗಲವಾಗಿರುವ ಈ ಶಾಸನವು ವಿಜಯನಗರದ ತುಳುವ ಮನೆತನ ದೊರೆ ಕೃಷ್ಣದೇವರಾಯ ನ ಕಾಲಕ್ಕೆ ಸೇರುತ್ತದೆ.

ಶ್ರೀ ಗಣಾಧಿಪತಯೆಂ ನಮ ಎಂಬ ಶುಭ ಸೂಚಕದಿಂದ ಪ್ರಾರಂಭವಾಗುವ ಈ ಶಾಸನವು ಶಕವರ್ಷ 1440 ರ (ಸಾ.ಶ.ವ 1518) ಬಹುಧಾನ್ಯ ಸಂವತ್ಸರದ ಭಾದ್ರಪದ ಬಹುಳ ಎಂಬ ಕಾಲಮಾನವನ್ನು ಉಲ್ಲೇಖಿಸಿದ್ದು, ಈ ಸಂದರ್ಭದಲ್ಲಿ ಕೃಷ್ಣದೇವರಾಯನು (1509-1529) ವಿಜಯನಗರಿಯ ಸಿಂಹಾಸನದಲ್ಲಿದ್ದು ಬಾರಕೂರ ರಾಜ್ಯವನ್ನು ವಿಜಯಪ್ಪ ಒಡೆಯ (ಸಾ.ಶ.ವ 1519-20) ನೋಡಿಕೊಳ್ಳುತ್ತಿದ್ದ ಎಂಬ ಮಾಹಿತಿಯನ್ನು ನೀಡುತ್ತದೆ. ಶಾಸನದಲ್ಲಿ ಧಾರಪೂರ್ವಕವಾಗಿ ಧಾರೆಯೆರೆದು ಕೊಟ್ಟ ದಾನ ಎಂಬ ಉಲ್ಲೇಖವಿದ್ದು, ದಾನ ವಿವರಣ ಭಾಗವು ತೃಟಿತಗೊಂಡಿದ್ದರಿಂದ ದಾನವನ್ನು ಯಾರು ಮತ್ತು ಯಾರಿಗೆ ನೀಡಿದ್ದರೆಂದು ತಿಳಿದು ಬರುವುದಿಲ್ಲ. ಶಾಸನದಲ್ಲಿ ಕರಣಿಕ ಮಲ(*)ಸರ, ಅಂಣ ಎಂಬ ವ್ಯಕ್ತಿಗಳ ಉಲ್ಲೇಖವಿದ್ದು, ಕೊನೆಯಲ್ಲಿ ಶಾಪಾಶಯ ವಾಕ್ಯವನ್ನು ಕಾಣಬಹುದು.

ಕ್ಷೇತ್ರಕಾರ್ಯಕ್ಕೆ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ-ಉಡುಪಿ ಇಲ್ಲಿನ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್.ಎ ಕೃಷ್ಣಯ್ಯ, ಸತ್ಯನಾರಾಯಣ ಸೋಮಯಾಜಿ ಮತ್ತು ಕೆ.ವಿ.‌ ಸುಬ್ರಮಣ್ಯಂ ಅವರು ಸಹಕಾರ ನೀಡಿರುತ್ತಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!