ಉಡುಪಿ, ಜ. 27: ಉಪ್ಪೂರು ಗ್ರಾಮದಲ್ಲಿ ಗ್ರಾಮದ 8 ಕೇಂದ್ರಗಳಲ್ಲಿ ವಿವಿಧ ಸಮಯದಲ್ಲಿ ಗ್ರಾಮ ಪಂಚಾಯತ್ ಉಪ್ಪೂರು ಹಾಗೂ ಪಶು ಆಸ್ಪತ್ರೆ ಬ್ರಹ್ಮಾವರ ಹಾಗೂ ಗ್ರಾಮದ 8 ಇತರ ಸಂಘಗಳ ಸಂಯೋಜನೆಯಿಂದ ಯಶಸ್ವಿಯಾಗಿ ನಡೆಯಿತು. ಶಿಬಿರವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಲಸಿಕೆಯ ಕಿಟ್ ಅನ್ನು ವೈದ್ಯರಿಗೆ ಹಸ್ತಾಂತರಿಸಿ ಉದ್ಘಾಟಿಸಿದರು. ಮುಖ್ಯ ಪಶು ವೈದ್ಯಾಧಿಕಾರಿ ಡಾ. ಪ್ರದೀಪ್ ಕೊಂಡಾಜೆ ಅವರು ಲಸಿಕೆ ನೀಡಿ ಶಿಬಿರಕ್ಕೆ ಚಾಲನೆ ನೀಡಿ, ಚಿಕಿತ್ಸೆಯಿಲ್ಲದ ರೇಬಿಸ್ ಖಾಯಿಲೆಗೆ ಲಸಿಕೆಯೊಂದೇ ಪರಿಹಾರ ಎನ್ನುತ್ತಾ ರೇಬಿಸ್ ಖಾಯಿಲೆ ಹಾಗೂ ಲಸಿಕೆಯ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ಪೂಜಾರಿ ಅವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ನಂತರ ಪಶು ಆಸ್ಪತ್ರೆ ವೈದ್ಯರ 3 ತಂಡಗಳೊಂದಿಗೆ ಗ್ರಾಮದ 8 ಕೇಂದ್ರಗಳಲ್ಲಿ ವಿವಿಧ ಸಮಯದಲ್ಲಿ ಸುಮಾರು 285 ಸಾಕು ನಾಯಿಗಳಿಗೆ ಲಸಿಕೆ ನೀಡಲಾಯಿತು.
ವೇದಿಕೆಯಲ್ಲಿ ಶಿಬಿರದ ಸಂಪೂರ್ಣ ಸಂಯೋಜನೆ ಮಾಡಿದ ಯುವ ವಿಚಾರ ವೇದಿಕೆಯ ಅಧ್ಯಕ್ಷರಾದ ದಿನೇಶ್ ಶೆಟ್ಟಿ, ಆಯಾಯ ಕೇಂದ್ರಗಳಲ್ಲಿ ಸಂಯೋಜನೆ, ಪ್ರಚಾರ ಹಾಗೂ ಸಹಕಾರ ನೀಡಿದ ಯುವಜನ ಮಂಡಲ ಉಪ್ಪೂರು ಅಧ್ಯಕ್ಷರಾದ ಜಯಕರ್ ಉಪ್ಪೂರು, ಜನತಾ ವ್ಯಾಯಾಮ ಶಾಲೆ ಅಧ್ಯಕ್ಷರಾದ ಅರುಣ್, ಸವಿನಯ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಸುಕೇಶ್, ಗೆಳೆಯರ ಬಳಗ ಅಧ್ಯಕ್ಷರಾದ ಸುಕೇಶ್, ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ, 1ನೇ ವಾರ್ಡ ಅಭಿವೃದ್ದಿ ಸಮಿತಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಅಶ್ವಿನ್ ರೋಚ್, ಗ್ರಾಮ ಪಂಚಾಯತ್ ಸದಸ್ಯರಾದ ಧರಣೇಷ್, ವಿಶ್ವಾಸ್ ಫ್ರೆಂಡ್ಸ್ ಅಧ್ಯಕ್ಷರಾದ ಪುರುಷೋತ್ತಮ್, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಪಶು ಆಸ್ಪತ್ರೆ ತಂಡದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು. ಯೋಗೀಶ್ ಗಾಣಿಗ ಕೊಳಲಗಿರಿ ವಂದಿಸಿದರು.