ಮೂಲ್ಕಿ, ಜ.27: ಸುಮಾರು 400 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಇತಿಹಾಸ ಪ್ರಸಿದ್ದ ಶ್ರೀ ನಾಗಬ್ರಹ್ಮ ಕ್ಷೇತ್ರ ಪುತ್ರನ್ ಆಧಿಮೂಲ ಸ್ಥಾನದ ಪವಿತ್ರ ನಾಗ ಪುಷ್ಕರಣಿಯ ನವೀಕರಣದ ಅಡಿಪಾಯ ಕಾರ್ಯಕ್ಕೆ ಮೂಲ್ಕಿ ಸೀಮೆ ಸಾವಂತ ಅರಸರಾದ ದುಗ್ಗಣ್ಣ ಸಾವಂತರು ಚಾಲನೆ ನೀಡಿ, ಜೀರ್ಣೋದ್ಧಾರ ಕಾರ್ಯವು ನಿರ್ವಿಘ್ನವಾಗಿ ನಡೆಯಲಿ ಎಂದರು. ಕ್ಷೇತ್ರದ ತಂತ್ರಿಗಳಾದ ಉಡುಪರು ಹಾಗೂ ರಾಮದಾಸ್ ಭಟ್ ರವರು ವಿಧಿ ವಿಧಾನ್ಗಳನ್ನು ನೆರವೇರಿಸಿದರು.
ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ಸೂರ್ಯ ಪುತ್ರನ್, ಉಪಾಧ್ಯಕ್ಷರಾದ ನವೀನ್ ಪುತ್ರನ್, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಅಶೋಕ್ ಪುತ್ರನ್ ಮಲ್ಪೆ, ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರಾದ ಜಗನ್ನಾಥ ಸಪಳಿಗ ಮೂಡಬಿದ್ರಿ, ಗೌರವಾಧ್ಯಕ್ಷ ಚಿನ್ನಯ ಪುತ್ರನ್, ಡಾ. ಸತ್ಯಶಂಕರ್ ಪುತ್ರನ್, ಆಡಳಿತ ಸಮಿತಿಯ ಶೇಖರ್ ಪುತ್ರನ್, ಅಶೋಕ್ ಪುತ್ರನ್, ರಮೇಶ್ ಪುತ್ರನ್, ಪ್ರಶಾಂತ್ ಕಾಂಚನ್, ಹರೀಶ್ ಕಾಂಚನ್, ಸೇವಂತಿ ಪುತ್ರನ್, ಸುರೇಶ ಕಾಂಚನ್, ಶಿಲ್ಪಿಯವರಾದ ಈಶ್ವರ್, ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷರಾದ ಮಹಾಬಲ ಸನಿಲ್, ಕ್ಷೇತ್ರದ ಕಚೇರಿ ಮೇಲ್ವಿಚಾರಕರಾದ ಸುಪ್ರಿತಾ ಮುಂತಾದವರು ಉಪಸ್ಥಿತರಿದ್ದರು.