ಕಾರ್ಕಳ, ಜ.23: ಕಾರ್ಕಳ ಜಿ.ಎಸ್.ಬಿ ಮಹಿಳಾ ವಿಭಾಗದ ವಾರ್ಷಿಕ ಮಹಾಸಭೆಯು ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆಯಿತು. ಶಿಕ್ಷಕಿ ಹಾಗೂ ಲೇಖಕಿ ಪ್ರಜ್ವಲ ಶೆಣೈ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ಮಹಿಳೆಯರು ಚಿಂತೆಯನ್ನು ಬಿಟ್ಟು ಸಕಾರಾತ್ಮಕವಾಗಿ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು ಎಂದರು. ದಿವ್ಯ ಡಿ. ಪೈ ಅಧ್ಯಕ್ಷತೆ ವಹಿಸಿದ್ದರು. ಐವರು ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಚಾಣಕ್ಯ ಪ್ರಶಸ್ತಿ ಪಡೆದ ಶಿಕ್ಷಕಿ ಹಾಗೂ ಲೇಖಕಿ ಸೀಮಾ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 98.72 ಉತ್ತಮ ಅಂಕ ಪಡೆದ ಎಸ್.ವಿ.ಟಿ ಶಾಲೆಯ ವಿದ್ಯಾರ್ಥಿ ನಿಧಿ ರಾವ್ ಗೆ ಸನ್ಮಾನ ಮಾಡಲಾಯಿತು. ಅಯೋಧ್ಯೆ ಮಂದಿರದ ನಿರ್ಮಾಣದ ಪ್ರಯುಕ್ತ ಸಾಮೂಹಿಕವಾಗಿ ಶ್ರೀರಾಮರಕ್ಷಾ ಸ್ತೋತ್ರ ಪಠಿಸಲಾಯಿತು.
ಕ್ರೀಡೆ, ರಂಗೋಲಿ, ಛಧ್ಮವೇಷ ಸ್ಪರ್ಧೆ, ‘ದೋನಿ ಘಡಿ ಹಾಸೂನ್ ಕಾಡಿ’ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರೇಷ್ಮಾ ಶೆಣೈ ರಾಮನ ಭಜನೆ ಹಾಡಿದರು. ಕಾರ್ಯದರ್ಶಿ ರಾಧಿಕಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ವಾರಿಜಾ ವಿ ಕಾಮತ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪದಾಧಿಕಾರಿಗಳಾದ ಮಮತಾ ಶೆಣೈ, ಶ್ವೇತಾ ಶೆಣೈ, ರಾಖಿ ಭಟ್, ಪ್ರಜ್ಞಾ ಪೈ, ಸಂಧ್ಯಾ ಕಾಮತ್, ಲಲಿತಾ ಭಟ್, ವಸುಂಧರಾ ಕಾಮತ್, ಪ್ರಭಾ ನಾಯಕ್ ಉಪಸ್ಥಿತರಿದ್ದರು.