ಉಡುಪಿ, ಜ.23: ಉಡುಪಿ ನಗರಸಭೆ ವ್ಯಾಪ್ತಿಯ ದ್ರವ ಹಾಗೂ ಘನ ತ್ಯಾಜ್ಯ ನಿರ್ವಹಣೆ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರದಿಂದ 47.50 ಕೋಟಿ ಅನುದಾನ ಮಂಜೂರು ಮಾಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಭಿನಂದನೆ ಸಲ್ಲಿಸಿದ್ದಾರೆ.
ಉಡುಪಿ ನಗರಸಭೆ ವ್ಯಾಪ್ತಿಯ ದ್ರವ ತ್ಯಾಜ್ಯ ನಿರ್ವಹಣೆ ಮೇಲ್ದರ್ಜೆಗೇರಿಸಲು ಎನ್.ಜಿ.ಟಿ ಮೂಲಕ ರೂ. 30 ಕೋಟಿ ಹಾಗೂ ಘನ ತ್ಯಾಜ್ಯ ವೈಜ್ಞಾನಿಕವಾಗಿ ನಿರ್ವಹಿಸಲು ರೂ. 13 ಕೋಟಿಗಳ ಪ್ರಸ್ತಾವನೆಗೆ ಅನುಮತಿ ನೀಡಿ ಮಂಜೂರಾತಿ ನೀಡಿದೆ ಹಾಗೂ ಘನ ತ್ಯಾಜ್ಯ ನಿರ್ವಹಣಾ ಎಂ.ಆರ್.ಎಫ್. ಘಟಕ ಸ್ಥಾಪನೆಗೆ ರೂ. 4.5 ಕೋಟಿ ರೂಪಾಯಿ ಮಂಜೂರುಗೊಳಿಸುವ ಮೂಲಕ ನಗರದ ತ್ಯಾಜ್ಯಗಳನ್ನು ವೈಜ್ಞಾನಿಕ ವಿಲೇವಾರಿಗೆ ಹೆಚ್ಚಿನ ವೇಗ ತುಂಬಲಿದೆ. ಕೇಂದ್ರ ಸರ್ಕಾರದ ಮೂಲಕ ಈ ಗರಿಷ್ಠ ಅನುದಾನ ಮಂಜೂರಿಗೆ ವಿಶೇಷ ಮುತುವರ್ಜಿ ವಹಿಸಿದ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆಯವರಿಗೆ ಉಡುಪಿ ಜನತೆಯ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದ್ದಾರೆ.