Monday, November 11, 2024
Monday, November 11, 2024

43 ನೇ ರಾಜ್ಯಮಟ್ಟದ ಕಬ್ಸ್- ಬುಲ್‌ಬುಲ್ಸ್ ಉತ್ಸವ

43 ನೇ ರಾಜ್ಯಮಟ್ಟದ ಕಬ್ಸ್- ಬುಲ್‌ಬುಲ್ಸ್ ಉತ್ಸವ

Date:

ಮೂಡುಬಿದಿರೆ, ಜ.23: ಪಠ್ಯದ ಜ್ಞಾನದ ಜೊತೆ ಪಠ್ಯೇತರ ಚಟುವಟಿಕೆ ಮೂಲಕ ಮನಸ್ಸು ಕಟ್ಟಿದಾಗ ಅತ್ಯುತ್ತಮ ನಾಗರಿಕನಾಗಲು ಸಾಧ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಆಯುಕ್ತರು ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಹಾಗೂ ಮೂಡುಬಿದಿರೆ ಘಟಕವು ನಗರದ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ಹಮ್ಮಿಕೊಂಡ 43 ನೇ ರಾಜ್ಯಮಟ್ಟದ ಕಬ್ಸ್- ಬುಲ್‌ಬುಲ್ಸ್ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕನ್ನಡ, ವಿಜ್ಞಾನ, ಗಣಿತ, ವಾಣಿಜ್ಯ ಸೇರಿದಂತೆ ಯಾವುದೇ ವಿಷಯ ಇರಲಿ, ಅವು ನೀಡುವ ಜ್ಞಾನ ಬುದ್ಧಿಗೆ ಮಾತ್ರ. ಮನುಷ್ಯನಿಗೆ ಜ್ಞಾನ, ಬುದ್ಧಿಯ ಜೊತೆ ಮನಸ್ಸು ಬೇಕು ಎಂದರು. ನಮ್ಮ ದೇಶದ ದೊಡ್ಡ ಶಕ್ತಿಯೇ ಯುವಶಕ್ತಿ. ಅಮೇರಿಕಾ ಭೌಗೋಳಿಕವಾಗಿ ದೊಡ್ಡ ದೇಶವಾದರೂ, ಕಡಿಮೆ ಜನಸಂಖ್ಯೆ ಹೊಂದಿದೆ.

ನಮ್ಮ ದೇಶದಲ್ಲಿ 1 ರಿಂದ 12 ತರಗತಿಯಲ್ಲಿ 39 ಕೋಟಿ ಮಕ್ಕಳು ಇದ್ದಾರೆ. 18 ರಿಂದ 20 ವರ್ಷದ ಯುವಜನತೆ 11 ಕೋಟಿ ಇದ್ದಾರೆ. ಒಟ್ಟು 49 ಕೋಟಿ ಯುವ ಸಂಪತ್ತು ಇದೆ ಎಂದು ವಿವರಿಸಿದರು. ನಾವು ನಮ್ಮ ಜನ್ಮ ಕೊಟ್ಟ ದೇಶ, ಭಾಷೆ, ಸಂಸ್ಕೃತಿ, ಪರಿಸರ ಎಲ್ಲವನ್ನೂ ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಪ್ರೀತಿಯಿಂದಲ್ಲದೆ ಸಂಘರ್ಷದಿಂದ ಬದುಕು ಸಾಧ್ಯವಿಲ್ಲ. ಎಷ್ಟೇ ಜಾತಿ- ಮತಗಳಿದ್ದರೂ, ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು. ದೇಶಪ್ರೇಮವನ್ನು ಬಾಲ್ಯದಿಂದಲೇ ಕಲಿಯಬೇಕು ಎಂದರು. ಈ ಶಿಬಿರದ ಮೂಲಕ ನೀವು ಎಲ್ಲವನ್ನು ಕಲಿಯುತ್ತೀರಿ. ನಿಮ್ಮ ಮನೆಯಲ್ಲಿ ಎಷ್ಟೇ ಐಷಾರಾಮ ಇದ್ದರೂ, ನೆಲದಲ್ಲಿ ಕುಳಿತು ಕೂಡಿ ಬಾಳುವುದು, ನಮ್ಮ ಕೆಲಸವನ್ನು ನಾವೇ ಮಾಡುವುದು ಕಲಿಯಬೇಕು. ಜೀವನ ಪಾಠ
ಕಲಿಸುವ ಇಂತಹ ಶಿಬಿರಗಳೇ ಪರಮಶ್ರೇಷ್ಠ ಎಂದರು.

ಮಾಜಿ ಸಚಿವ ಅಭಯ ಚಂದ್ರ ಜೈನ್ ಮಾತನಾಡಿ, ಎಳವೆಯಲ್ಲಿಯೇ ಬದುಕು ಕಟ್ಟುವ ಧೈರ್ಯ ನೀಡುವ ಚಿಂತನೆಯನ್ನು ಈ ಶಿಬಿರ ಹೊಂದಿದೆ. ಮೂಡುಬಿದಿರೆಗೆ ಬಂದ ನೀವು ಖಂಡಿತಾ ಒಳ್ಳೆಯ ಅನುಭವ ಪಡೆಯುತ್ತೀರಿ ಎಂದರು. ಇಂತಹ ಅದ್ಭುತ ಭವನ ಭಾರತ ದೇಶದಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ, ಅದು ಡಾ. ಎಂ. ಮೋಹನ ಆಳ್ವ ಅವರಿಂದ ನಮಗೆಲ್ಲ ದೊರೆತಿದೆ ಎಂದು ಅವರು ಶ್ಲಾಘಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಬಂಟ್ವಾಳ ಜಿಲ್ಲಾ ನೋಡೆಲ್ ಅಧಿಕಾರಿ ಶ್ರೀನಿವಾಸ ಅಡಿಗ ಮಾತನಾಡಿ, ಮಕ್ಕಳು ಜ್ಞಾನ, ಸೂಕ್ಷ್ಮತೆ ಹಾಗೂ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು. ನಾವು ಇತರರಿಗೆ ಹೇಗೆ ಸ್ಪಂದಿಸುತ್ತೇವೆ ಹಾಗೂ ಸ್ನೇಹ ಬೆಳೆಸುತ್ತೇವೆ ಎಂಬುದು ಬದುಕಿನಲ್ಲಿ ಬಹುಮುಖ್ಯವಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಸಾಮಾಜಿಕ ಜವಾಬ್ದಾರಿ ತಿಳಿಸುತ್ತದೆ, ಈ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದರು. ಮೂಡುಬಿದಿರೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್. ಎಸ್ ಮಾತನಾಡಿ, ನಾವು ಸಂಘ ಜೀವಿಗಳು, ಬೇರೆ ಬೇರೆ ಜಿಲ್ಲೆಯ ವಿದ್ಯಾರ್ಥಿಗಳು ಬೇರೆ ಬೇರೆ ಆಚಾರ ವಿಚಾರಗಳನ್ನು ಹೊಂದಿರುತ್ತಾರೆ. ಎಲ್ಲರೂ ಒಟ್ಟಿಗೆ ಸೇರಿದಾಗ ಅನೇಕ ವಿಚಾರಗಳು ಸಿಗುತ್ತವೆ. ನಾವು ಶಿಕ್ಷಣ, ಸಮಾಜ ಮತ್ತು ಬೇರೆಯವರವನ್ನು ಗಮನಿಸುವ ಮೂಲಕ ಕಲಿಯುತ್ತೇವೆ ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕೆ. ಗಂಗಪ್ಪ ಗೌಡ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ನಡವಳಿಕೆಯಲ್ಲಿ ಸೇವಾ ಭಾವ ಹೆಚ್ಚಿಸುವ ಉದ್ದೇಶ ಹೊಂದಿದೆ. ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದರಂತಹ ವ್ಯಕ್ತಿತ್ವ ನಿಮಗೆ ಆದರ್ಶವಾಗಬೇಕು. ಕೇವಲ ಪುಸ್ತಕದ ಬದನೆ ಆಗುವುದಕ್ಕಿಂತ, ಬದನೆ ಬೆಳೆಯುವುದೇ ಉತ್ತಮ ಎಂದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಜಂಟಿ ಕಾರ್ಯದರ್ಶಿ ಕೃಪಾ ವಿಜಯ್, ಸಂಘಟನಾ ಆಯುಕ್ತ ಪ್ರಭಾಕರ್ ಭಟ್, ಸಂಘಟನಾ ಆಯುಕ್ತೆ ಮಂಜುಳಾ, ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ, ಪರೀಕ್ಷಾ ಮೇಲ್ವಿಚಾರಕಿ ಹೊನ್ನಮ್ಮ, ಜಿಲ್ಲಾ ಉಪಾಧ್ಯಕ್ಷರಾದ ವಿಮಲ ರಂಗಯ್ಯ, ಕೋಶಾಧಿಕಾರಿ ಅನಿಲ್ ಕುಮಾರ್, ಜಿಲ್ಲಾ ತರಬೇತಿ ಆಯುಕ್ತ ಪ್ರತೀಮ್ ಕುಮಾರ್, ಬಂಟ್ವಾಳ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಬಿ. ಎಂ ತುಂಬೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಭಾರತಿ, ಕಬ್ಸ್ ಶಿಬಿರ ನಾಯಕ ರಾಮರಾವ್, ನಾಯಕಿ ಸಿಸಿರಾ ಲೊರಿನಾ ಇದ್ದರು. ಮೂಡುಬಿದಿರೆ ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ನವೀನ್‌ಚಂದ್ರ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಂಸ್ಥೆಯ ಪದಾಧಿಕಾರಿ ಮಹಮ್ಮದ್ ತುಂಬೆ ಸ್ವಾಗತಿಸಿ, ಜಿಲ್ಲಾ ಜಂಟಿ ಕಾರ್ಯದರ್ಶಿ ಜಯವಂತಿ ಸೋನ್ಸ್ ವಂದಿಸಿದರು.

ಐದು ದಿನಗಳ ಶಿಬಿರ: ಕಾರ್ಯಕ್ರಮದಲ್ಲಿ ಮೂಡುಬಿದಿರೆ ಸರ್ಕಾರಿ ಪ್ರೌಢ ಶಾಲೆಯ 120 ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. 5 ದಿನಗಳ ಕಾಲ ನಡೆಯಲಿರುವ ಕಬ್ ಮತ್ತು ಬುಲ್ ಬುಲ್ ಶಿಬಿರದಲ್ಲಿ ಸಾಹಸ ಚಟುವಟಿಕೆ, ಕರಕೌಶಲ, ಮೋಜಿನ ಚಟುವಟಿಕೆ, ಸಾಂಪ್ರದಾಯಿಕ ಉಡುಗೆ ತೊಡುಗೆ, ವಸ್ತು ಪ್ರದರ್ಶನ, ಪ್ರತಿಭಾ ಪ್ರದರ್ಶನ, ಕಲಾ ವೈಭವ, ಸಾಂಸ್ಕೃತಿಕ ವೈಭವ, ಮೂಡುಬಿದಿರೆ ಪರಿಸರ ವೀಕ್ಷಣೆ ಸೇರಿದಂತೆ ಹಲವು ಚಟುವಟಿಕೆಗಳಿವೆ ಎಂದು ಸಂಘಟಕರು ತಿಳಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾರಂತರದ್ದು ಶ್ರೇಷ್ಠ ವ್ಯಕ್ತಿತ್ವ: ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್

ಕೋಟ, ನ.10: ಕಾರಂತರು ಹುಟ್ಟಿದ ನೆಲದಲ್ಲಿ ಧನ್ಯತೆಯ ಭಾವ ಮೈದುಂಬಿದೆ. ಪ್ರಶಸ್ತಿ...

ಮಣಿಪಾಲ: ‘ಗಿರಿಜಾ ಸರ್ಜಿಕಲ್ಸ್’ ನೂತನ ಶಾಖೆ ಉದ್ಘಾಟನೆ

ಮಣಿಪಾಲ, ನ.10: ಅಂತರಾಷ್ಟ್ರೀಯ ಖ್ಯಾತಿಯ ಮಣಿಪಾಲದಲ್ಲಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸರ್ಜಿಕಲ್...

‘ನನ್ನ ನಾಡು ನನ್ನ ಹಾಡು’ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ

ಉಡುಪಿ, ನ.10: ಲಯನ್ಸ್ 317 ಸಿ ಹಾಗೂ ರೋಟರಿ ಕ್ಲಬ್ ಜಿಲ್ಲೆ...

ಶ್ರೀ ಕೃಷ್ಣ ಮಠದಲ್ಲಿ ವಿಜಯದಾಸರ ಆರಾಧನೆ; ಮೇಘಾಲಯ ರಾಜ್ಯಪಾಲ ವಿಜಯಶಂಕರ್ ಭಾಗಿ

ಉಡುಪಿ, ನ.10: ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ವಿಜಯದಾಸರ...
error: Content is protected !!