ಮಲ್ಪೆ, ಜ.22: ಅಯೋಧ್ಯೆ ರಾಮಮಂದಿರದಲ್ಲಿ ಶ್ರೀ ರಾಮ ದೇವರ ಪ್ರಾಣಪ್ರತಿಷ್ಠಾಪನೆಯ ಪ್ರಯುಕ್ತ ಮಲ್ಪೆ ಬೀಚ್ ಆಟೋ ಫ್ರೆಂಡ್ಸ್ ವತಿಯಿಂದ ಆಟೋ ನಿಲ್ದಾಣದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಆಟೋ ಚಾಲಕರ ಮತ್ತು ಮಾಲಕರ ಸಂಘದ ಗೌರವಾಧ್ಯಕ್ಷರಾದ ಚಂದ್ರಹಾಸ್ ಕಾಂಚನ್ ಮಾತನಾಡಿ, ಶ್ರೀ ರಾಮ ದೇವರು ಯಾವುದೇ ಜಾತಿ, ಧರ್ಮ, ಬೇಧವಿಲ್ಲದೆ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಇಂದು ಭಾರತವಲ್ಲದೇ ಇಡೀ ವಿಶ್ವದಲ್ಲಿ ಈ ಆಚರಣೆಯನ್ನು ಮಾಡಿ ಸಂಭ್ರಮಿಸುತ್ತಿದ್ದಾರೆ ಎಂದರು.
ಅಧ್ಯಕ್ಷರಾದ ಪ್ರಕಾಶ್ ಎಮ್ ಕಲ್ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೀಚ್ ಆಟೋ ನಿಲ್ದಾಣದ ಕಮಿಟಿ ಸದಸ್ಯರಾದ ಸುರೇಶ್ ಪಾಲನ್ ನಿರೂಪಿಸಿದರು. ಕಾರ್ಯದರ್ಶಿ ಅರುಣ್ ಬಂಗೇರ, ಹಿರಿಯ ಸದಸ್ಯರಾದ ಅಯ್ತಪ್ಪ ಬಂಗೇರ, ಬೀಚ್ ಆಟೋ ನಿಲ್ದಾಣದ ಎಲ್ಲಾ ಸದಸ್ಯರು, ಹಾಗೂ ಸಂಘದ ಸದಸ್ಯರು ಇದ್ದರು.