ತೆಂಕನಿಡಿಯೂರು, ಜ.17: ಇಲ್ಲಿನ ಶ್ರೀ ಕಾಳಿಕಾಂಬಾ ಭಜನಾ ಸಂಘದ ವತಿಯಿಂದ ಮಕರ ಸಂಕ್ರಾಂತಿಯ ಪ್ರಯುಕ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಉಡುಪಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾಜೀವಿ ನಾರಾಯಣ ಆಚಾರ್ಯ ಕೆಳಾರ್ಕಳಬೆಟ್ಟು ಉದ್ಘಾಟನೆ ನೆರವೇರಿಸಿದರು. ಕೆಳಾರ್ಕಳಬೆಟ್ಟು ಶ್ರೀದೇವಿ ಭೂದೇವಿ ಸಹಿತ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸದಾನಂದ ನಾಯ್ಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಶ್ರೀ ದೇವಿ ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಅಪ್ಪಿ ಶಿವಯ್ಯ ಆಚಾರ್ಯ ಉಪಸ್ಥಿತರಿದ್ದರು. ಅದೇ ದಿನ ನಡೆದ ಸಮಾರೋಪ ಸಮಾರಂಭದಲ್ಲಿ ಬಡಾನಿಡಿಯೂರಿನ ಯಕ್ಷಗಾನ ಗುರುಗಳಾದ ಕೇಶವ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಕರ ಸಂಕ್ರಾಂತಿ ಕಾರ್ಯಕ್ರಮವನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡು ಅರ್ಥಪೂರ್ಣವಾಗಿ ಆಚರಿಸಿರುವ ಸಂಘಟಕರನ್ನು ಅಭಿನಂದಿಸಿದರು. ಪಠ್ಯೇತರ ಚಟುವಟಿಕೆಗಳು ಮತ್ತು ಕಲೆಗಳು ಪಾಠದೊಂದಿಗೆ ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ರೂಪಿಸುವಲ್ಲಿ ಸಹಕಾರಿಯಾಗಿವೆ. ಇಂತಹ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡು ಸಂಸ್ಕಾರಯುತ ಪ್ರಜೆಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಸಂಘದ ಅಧ್ಯಕ್ಷ ಟಿ. ಕೃಷ್ಣ ಆಚಾರ್ಯ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಶೀಲಾ ವಾದಿರಾಜ ಆಚಾರ್ಯ, ಬಾಲ ಸಂಸ್ಕಾರ ಕೇಂದ್ರದ ಅಧ್ಯಕ್ಷ ಪ್ರದೀಪ್ ಆಚಾರ್ಯ ಉಪಸ್ಥಿತರಿದ್ದರು. ಸಂಪತ್ ಆಚಾರ್ಯ ಸ್ವಾಗತಿಸಿ, ಉದಯ್ ಜೆ ಆಚಾರ್ಯ ವಂದಿಸಿದರು. ಪ್ರದೀಪ್ ಆಚಾರ್ಯ ಬಹುಮಾನ ವಿತರಣೆ ಕಾರ್ಯಕ್ರಮ ನಿರ್ವಹಿಸಿ ವಾಣಿಶ್ರೀ ಕಾರ್ತಿಕ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿ: ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಭಕ್ತಿಗೀತೆ ಸ್ಪರ್ಧೆ (ತಲಪಾಡಿ ಸರಳಾದೇವಿ ದತ್ತಿನಿಧಿ ಪ್ರಾಯೋಜಿತ) ಪ್ರಥಮ : ಪ್ರಾರ್ಥನಾ, ಮುಕುಂದ ಕೃಪಾ ಹಿ.ಪ್ರಾ ಶಾಲೆ, ಉಡುಪಿ ದ್ವಿತೀಯ : ಪ್ರಜನ್ಯ ಕೆ. ರಾವ್, ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ ತೃತೀಯ : ವಂಶಿಕ, ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಚಿತ್ರಕಲಾ ಸ್ಪರ್ಧೆ (ಹೊಯಿಗೆತೋಟ ಲಕ್ಷ್ಮಣ ಆಚಾರ್ಯ ದತ್ತಿನಿಧಿ ಪ್ರಾಯೋಜಿತ) ಪ್ರಥಮ : ವಿಶ್ರುತ ಸಾಮಗ, ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ ದ್ವಿತೀಯ : ಪ್ರೇರಿತ, ಮುಕುಂದ ಕೃಪಾ ಹಿ.ಪ್ರಾ ಶಾಲೆ, ಉಡುಪಿ ತೃತೀಯ : ಭೂಮಿಕ, ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ (ಬೈಕಾಡಿ ಶಿವಯ್ಯ ಆಚಾರ್ಯ ದತ್ತಿನಿಧಿ ಪ್ರಾಯೋಜಿತ) ಪ್ರಥಮ : ನಿವೇದ ಗಾಯತ್ರಿ, ಸುಶಾಂತ್, ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ ದ್ವಿತೀಯ : ಮಹಮ್ಮದ್ ರಫಾನ್, ಮಹಮ್ಮದ್ ರಜೀನ್ ಕ್ರೆಸೆಂಟ್ ಪ್ರೌಢಶಾಲೆ ಕಾಪು ತೃತೀಯ : ಶಗುನ್, ಯುಕ್ತ ಎಂ.ಕೆ. ಸೈಂಟ್ ಸಿಸಿಲಿಸ್ ಪ್ರೌಢಶಾಲೆ ಉಡುಪಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಭಾವಗಾನ ಸ್ಪರ್ಧೆ (ಕುಂಜಿಬೆಟ್ಟು ಜಲಜ ಸೋಮಯ್ಯಾಚಾರ್ಯ ದತ್ತಿನಿಧಿ ಪ್ರಾಯೋಜಿತ) ಪ್ರಥಮ : ಚಿಂತನ, ಡಾ.ಟಿ.ಎಂ.ಎ ಪೈ ಪ್ರೌಢಶಾಲೆ ಕಲ್ಯಾಣಪುರ ದ್ವಿತೀಯ : ಶಗುನ್, ಸೈಂಟ್ ಸಿಸಿಲಿಸ್ ಪ್ರೌಢಶಾಲೆ ಉಡುಪಿ ತೃತೀಯ : ತ್ರಿಶಾ ಯು. ರಾವ್, ಡಾ. ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕುಂಜಿಬೆಟ್ಟು ಉಡುಪಿ
ಕಾಲೇಜು ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ (ಕೆ. ಬಂಟುಞ ಆಚಾರ್ಯ ದತ್ತಿನಿಧಿ ಪ್ರಾಯೋಜಿತ) ಪ್ರಥಮ : ಕೀರ್ತನ್, ಸಾತ್ವಿಕ್, ಎಂ.ಜಿ.ಎಂ. ಕಾಲೇಜು, ಉಡುಪಿ ದ್ವಿತೀಯ : ಹನುಮಂತ, ಭರತ್ ಕುಮಾರ್ ಕೆ., ಸರಕಾರಿ ಪದವಿಪೂರ್ವ ಕಾಲೇಜು ತೆಂಕನಿಡಿಯೂರು ತೃತೀಯ : ಲಕ್ಷ್ಮೀಕಾಂತ್, ಶ್ರಾವ್ಯ, ಸರಕಾರಿ ಪದವಿಪೂರ್ವ ಕಾಲೇಜು ಉಡುಪಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ (ಟಿ.ಕೃಷ್ಣಯ್ಯ ಆಚಾರ್ಯ ದತ್ತಿನಿಧಿ ಪ್ರಾಯೋಜಿತ) ಪ್ರಥಮ: ಲಕ್ಷ್ಮೀಕಾಂತ್, ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ, ದ್ವಿತೀಯ : ತೇಜಸ್ವಿನಿ, ಸರಕಾರಿ ಪ.ಪೂ. ಕಾಲೇಜು ತೆಂಕನಿಡಿಯೂರು ತೃತೀಯ: ಸುಷ್ಮಾ, ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು.