ನವದೆಹಲಿ, ಜ.14: ರಾಗಿಗೆ ಉತ್ತೇಜನ ನೀಡುವುದರಿಂದ ದೇಶದ ಸಣ್ಣ ರೈತರು ಮತ್ತು ಯುವ ಉದ್ಯಮಿಗಳಿಗೆ ಅನುಕೂಲವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ನವದೆಹಲಿಯಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್ ಮುರುಗನ್ ಅವರ ನಿವಾಸದಲ್ಲಿ ನಡೆದ ಪೊಂಗಲ್ ಆಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ರಾಗಿ ಬೇಸಾಯ ಮಾಡುತ್ತಿರುವ ಮೂರು ಕೋಟಿಗೂ ಹೆಚ್ಚು ರೈತರು ಇದರ ಪ್ರಚಾರದಿಂದ ನೇರವಾಗಿ ಪ್ರಯೋಜನ ಪಡೆಯುತ್ತಿದ್ದಾರೆ ಮತ್ತು ರಾಗಿಯ ಬಗ್ಗೆ ಹೊಸ ಜಾಗೃತಿ ಮೂಡಿದೆ. ಅನೇಕ ಯುವಕರು ರಾಗಿಗೆ ಸಂಬಂಧಿಸಿದ ಸ್ಟಾರ್ಟ್ಅಪ್ ಉದ್ಯಮಗಳನ್ನು ಆರಂಭಿಸಿದ್ದಾರೆ.
ಭಾರತದ ಪ್ರತಿಯೊಂದು ಹಬ್ಬಗಳ ಜತೆಗೆ ಗ್ರಾಮೀಣ, ಬೆಳೆ ಮತ್ತು ರೈತರ ಸಂಪರ್ಕವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಮಹಾನ್ ಸಂತ ತಿರುವಳ್ಳುವರ್ ಅವರನ್ನು ಪ್ರಧಾನಿ ಉಲ್ಲೇಖಿಸಿದರು. ಪೊಂಗಲ್ ಹಬ್ಬವು ಏಕ ಭಾರತ ಶ್ರೇಷ್ಠ ಭಾರತದ ರಾಷ್ಟ್ರೀಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರ ಸಂತೋಷ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತಿದ್ದೇನೆ. ಮಕರ ಸಂಕ್ರಾಂತಿ ಪ್ರತಿಯೊಬ್ಬರಿಗೂ ಹೊಸ ಅವಕಾಶಗಳು ಮತ್ತು ಸಾಧ್ಯತೆಗಳನ್ನು ತೆರೆಯುತ್ತದೆ. ದೇವರು ಎಲ್ಲರ ಆಕಾಂಕ್ಷೆಗಳನ್ನು ಈಡೇರಿಸಲಿ ಎಂದು ಪ್ರಧಾನಿ ಹೇಳಿದರು.