Tuesday, November 26, 2024
Tuesday, November 26, 2024

ಐಸಿಎಐ ಜೊತೆ ಆಳ್ವಾಸ್ ಒಡಂಬಡಿಕೆ

ಐಸಿಎಐ ಜೊತೆ ಆಳ್ವಾಸ್ ಒಡಂಬಡಿಕೆ

Date:

ವಿದ್ಯಾಗಿರಿ, ಜ. 12: ವಾಣಿಜ್ಯ ಅಧ್ಯಯನ ಕ್ಷೇತ್ರದಲ್ಲಿ ಅಕಾಡೆಮಿಕ್, ಸಂಶೋಧನೆ ಹಾಗೂ ತರಬೇತಿಯ ನಿಟ್ಟಿನಲ್ಲಿ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಕಾಲೇಜು ಮತ್ತು ದೆಹಲಿಯ ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಡುವೆ ಮಂಗಳೂರಿನಲ್ಲಿ ಗುರುವಾರ ಮಹತ್ತರ ಒಡಂಬಡಿಕೆಗೆ ಸಹಿ ಮಾಡಲಾಯಿತು. ಈ ಒಡಂಬಡಿಕೆಯ ಅನ್ವಯ ಎರಡೂ ಸಂಸ್ಥೆಗಳಲ್ಲಿ ಬೌದ್ಧಿಕ ಹಾಗೂ ಸಾಂಸ್ಕೃತಿಕ ಉನ್ನತೀಕರಣದ ನಿಟ್ಟಿನಲ್ಲಿ ಬಿ.ಕಾಂ, ಬಿ.ಕಾಂ (ಹಾರ‍್ಸ್), ಎಂ.ಕಾಂ ಮತ್ತು ಸರ್ಟಿಫಿಕೇಟ್ ಹಾಗೂ ಡಿಪ್ಲೊಮಾ ವಾಣಿಜ್ಯ ಕೋರ್ಸ್ಗಳ ಅಭಿವೃದ್ಧಿ ಹಾಗೂ ಪರಸ್ಪರ ಸಹಕಾರಕ್ಕೆ ನೆರವಾಗಲಿದೆ. ಅಕಾಡೆಮಿಕ್ ಮತ್ತು ವೃತ್ತಿಪರತೆ ವರ್ಧನೆಗಾಗಿ ಪರಸ್ಪರ ಸಹಕಾರ ನೀಡುವುದು ಹಾಗೂ ಸೌಹಾರ್ದ
ಸಂಬಂಧವನ್ನು ಮುಂದುವರಿಸುವುದು. ಎರಡೂ ಸಂಸ್ಥೆಗಳ ಧ್ಯೇಯೋದ್ದೇಶವನ್ನು ಪರಸ್ಪರ ಗೌರವಿಸಿಕೊಂಡು ಅಕಾಡೆಮಿಕ್ಸ್, ಸಂಶೋಧನೆ ಮತ್ತು ತರಬೇತಿ ಕ್ಷೇತ್ರದಲ್ಲಿನ ಜ್ಞಾನ ಹಾಗೂ ಕೌಶಲ ವೃದ್ಧಿಗಾಗಿ ಕೈ ಜೋಡಿಸುವುದು.

ಪಠ್ಯಕ್ರಮ ನಿರೂಪಣೆ, ಶೈಕ್ಷಣಿಕ ಸಿಬ್ಬಂದಿಗೆ ವಿಷಯ ಆಧಾರಿತ ತರಬೇತಿಗೆ ಐಸಿಎಐಯು ಸಂಪೂರ್ಣ ಬೆಂಬಲವನ್ನು ನೀಡಲಿದೆ. ಹೊಸ ಶಿಕ್ಷಣ ನೀತಿ (2020)ಗೆ ಪೂರಕವಾಗಿ ವಾಣಿಜ್ಯ ಕೋರ್ಸ್ಗಳ ಉನ್ನತೀಕರಣಕ್ಕಾಗಿ ಅಗತ್ಯ ಅಧಿವೇಶನಗಳನ್ನು ಹಾಗೂ ವಿಶೇಷ ತರಬೇತಿಗಳನ್ನು ನಡೆಸಲು ಐಸಿಎಐ ಬದ್ಧವಾಗಲಿದೆ. ಆಳ್ವಾಸ್ ಕಾಲೇಜಿನ ವಾಣಿಜ್ಯ ಸ್ನಾತಕೋತ್ತರ ಪದವಿ, ಪಿಎಚ್.ಡಿ (ಆಡಳಿತ ನಿರ್ವಹಣೆ) ಹಾಗೂ ವಾಣಿಜ್ಯ ಸಂಬಂಧಿತ ಕಾರ್ಯಕ್ರಮಗಳಿಗೆ ಐಸಿಎಐ ಮಾನ್ಯತೆ ನೀಡಲಿದೆ. ಐಸಿಎಐ ಉಪಾಧ್ಯಕ್ಷ ಸಿಎ. ದಯಾನಿವಾಸ ಶರ್ಮಾ, ಕೇಂದ್ರೀಯ ಮಂಡಳಿ ಸದಸ್ಯ ಸಿಎ. ಕೋತಾ ಎಸ್. ಶ್ರೀನಿವಾಸ್, ಮಂಗಳೂರು ಘಟಕದ ಅಧ್ಯಕ್ಷ ಸಿಎ. ಗೌತಮ್ ನಾಯಕ್ ಎಂ. ಹಾಗೂ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಕಾಲೇಜಿನ ಸಿಎ ಸಂಯೋಜಕರಾದ ಅನಂತಶಯನ ಮತ್ತು ಅಪರ್ಣಾ ಕೆ. ಇದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!