ಕಾರ್ಕಳ, ಜ.9: ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಸವಿತಾ ಶೆಣೈ ಮತ್ತು ತೇಜಸ್ ಆಚಾರ್ಯ ಇವರು ಐ.ಸಿ.ಎ.ಐ ನಡೆಸಿದ ಸಿ.ಎ.ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕಾರ್ಕಳದ ನಿವಾಸಿ ಸವಿತಾ ಶೆಣೈ ಇವರು ಸುರೇಶ್ ಶೆಣೈ ಅಲೆವೂರು ಮತ್ತು ವಿದ್ಯಾವತಿ ಎಸ್. ಶೆಣೈ ದಂಪತಿಗಳ ಪುತ್ರಿ ಹಾಗೂ ತೇಜಸ್ ಆಚಾರ್ಯ ನೆಲ್ಲಿಗುಡ್ಡೆಯ ಕುಕ್ಕುಂದೂರು ನಿವಾಸಿ ಲಕ್ಮೀ ನಾರಾಯಣ ಆಚಾರ್ಯ ಮತ್ತು ಶಾರದಾ ಆಚಾರ್ಯ ದಂಪತಿಗಳ ಪುತ್ರ.
ಇವರ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಮೆಚ್ಚುಗೆ ವ್ಯಕ್ತಪಡಿಶಿದ್ದಾರೆ. ಆಡಳಿತ ಮಂಡಳಿ ಹಾಗೂ ಸಂಸ್ಥೆಯ ವಾಣಿಜ್ಯ ವಿಭಾಗ ಸಹಿತ ಜ್ಞಾನಸುಧಾ ಪರಿವಾರವು ಹರ್ಷ ವ್ಯಕ್ತಪಡಿಸಿದೆ.