Saturday, October 19, 2024
Saturday, October 19, 2024

ಸಾಧನೆಗೆ ಸರಳ ಮಾರ್ಗವಿಲ್ಲ: ಅಜಿತ್ ಹನಮಕ್ಕನವರ್

ಸಾಧನೆಗೆ ಸರಳ ಮಾರ್ಗವಿಲ್ಲ: ಅಜಿತ್ ಹನಮಕ್ಕನವರ್

Date:

ಮೂಡುಬಿದಿರೆ, ಜ.7: ಜನಪ್ರಿಯತೆಗೆ ಸರಳ ಮಾರ್ಗವಿದೆ, ಆದರೆ ಸಾಧನೆಗಲ್ಲ. ಸಾಧನೆ ಸತತ ಪ್ರಯತ್ನದ ಫಲ ಎಂದು ಸುವರ್ಣ ಸುದ್ದಿವಾಹಿನಿಯ ಪ್ರಧಾನ ಸಂಪಾದಕ ಅಜಿತ್ ಹನಮಕ್ಕನವರ್ ಹೇಳಿದರು. ಅವರು ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಸಂಘದ ವತಿಯಿಂದ ಮೂಡುಬಿದಿರೆಯ ಭಾರತ್ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಆಯೋಜಿಸಿದ್ದ ಬಹುಮಾನ ವಿತರಣಾ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿದರು. ನಿಮ್ಮನ್ನು ಕರೆಯುತ್ತಿರುವ ಜಗತ್ತಿಗೆ ತಯಾರಾಗಿ, ಬರೀ ಪರೀಕ್ಷೆಗಳಿಗಲ್ಲ. ಶಿಕ್ಷಣದ ಪ್ರತಿ ಹಂತವು ಪ್ರಮುಖವಾದರೂ, ಶಿಕ್ಷಣ ಮುಗಿಸಿ ನಾವು ಸಾಗುವ ವೃತ್ತಿ ಕ್ಷೇತ್ರದಲ್ಲಿನ ನಮ್ಮ ಕ್ಷಮತೆ ನಮ್ಮ ಯಶಸ್ಸನ್ನು ನಿರ್ಧರಿಸುತ್ತದೆ. ಹಾಗಾಗಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಬಂತು ಎಂದಾಗ ಹೆಚ್ಚಿನ ಆತ್ಮವಿಶ್ವಾಸವೂ ಬೇಡ, ಕಡಿಮೆ ಬಂತೆಂದು ಕುಗ್ಗುವಿಕೆಯು ಸಲ್ಲ. ವೃತ್ತಿ ಮತ್ತು ಪ್ರವೃತ್ತಿ ಒಂದೇ ಆಗಿರಬೇಕು. ಯಾವಾಗ ನಮ್ಮ ಹವ್ಯಾಸವೇ ನಮ್ಮ ಕೆಲಸವಾಗುತ್ತದೆಯೋ ಅಂದು ಯಶಸ್ಸು ನಮ್ಮದಾಗುತ್ತದೆ. ಎಲ್ಲರೂ ಖುಷಿ ಪಡಲು ವಾರದ ಕೊನೆಯ ದಿನವನ್ನು ಬಯಸುತ್ತಾರೆ, ಜೀವನ ಎಂದಿಗೂ ಒಂದೇ ದಿನಕ್ಕೆ ಕಾಯುವಂತಿರಬಾರದು.

ಪ್ರತಿಯೊಂದು ದಿನವೂ ನಮಗೆ ಅತೀ ಮುಖ್ಯ. ಸಣ್ಣ ಕನಸ್ಸನ್ನು ಇಟ್ಟು, ಒಂದೊಂದೇ ಮೆಟ್ಟಿಲೇರುವುದು, ದೊಡ್ಡ ಕನಸಿಗಿಂತ ಉತ್ತಮ. ಜೀವನದಲ್ಲಿ ತತ್‌ಕ್ಷಣದಲ್ಲಿ ಬರುವ ಸಂದರ್ಭಗಳನ್ನು ಎದುರಿಸುವುದನ್ನು ಕಲಿತಾಗ ಮಾತ್ರ ಯಶಸ್ಸು ಸಾಧ್ಯ. ನಿಮ್ಮ ಪಾಲಿನ ಸಂಶೋಷ ಮತ್ತು ಯಶಸ್ಸು ಯಾವುದೆಂಬುದನ್ನು ನಿರ್ಧರಿಸಿಕೊಂಡು ಮುಂದೆ ಸಾಗಿ. ನಾವೆಲ್ಲರೂ ತಯಾರಾಗಬೇಕಾಗಿರುವುದು ಪರೀಕ್ಷೆಗಳಿಗೆ ಮಾತ್ರವಲ್ಲ, ನೆನಪಿರಲಿ ಬದುಕಿಗಾಗಿ. ಅಂತಹ ನಾಳೆಯ ಬದುಕಿಗಾಗಿ ವಿದ್ಯಾರ್ಥಿಗಳನ್ನು ತಯಾರುಗೊಳಿಸುವಲ್ಲಿ ಆಳ್ವಾಸ್ ವಿದ್ಯಾಸಂಸ್ಥೆ ಮುಂಚೂಣಿಯಲ್ಲಿದೆ ಎಂದರು.

ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಪ್ರಾಚಾರ‍್ಯ ಡಾ. ಕುರಿಯನ್, ಬದುಕಿನಲ್ಲಿ ಸ್ವಯಂ ನಿಯಂತ್ರಣವೆಂಬುದು ಮುಖ್ಯ. ಯಾವ ವ್ಯಕ್ತಿ ಸ್ವಯಂ ನಿಯಂತ್ರಣ ಸಾಧಿಸುತ್ತಾನೋ ಅವನು ಬದುಕಿನ ಸಫಲತೆಯ ಮಾರ್ಗದಲ್ಲಿ ಸಾಗಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಹಮ್ಮದ್ ಸದಾಕತ್, ಶಿಕ್ಷಣ ಸಂಸ್ಥೆ ಕಲಿಸಿದ ಪಠ್ಯವನ್ನು ನಾವು ಮರೆಯಬಹುದು, ಆದರೆ ಶಿಕ್ಷಣದ ಹಂತದಲ್ಲಿ ಕಲಿತ ಜೀವನ ಪಾಠ ನಮ್ಮನ್ನು ಯಶಸ್ಸಿನೆಡೆಗೆ ಒಯ್ಯಬಲ್ಲದು ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿ ಸುವರ್ಣ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕ ಅಜಿತ್ ಹನಮಕ್ಕನವರ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಸಾಂಸ್ಕೃತಿಕ, ಕ್ರೀಡೆ ಹಾಗೂ ಶೈಕ್ಷಣಿಕ ವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ಮತ್ತು ಆಳ್ವಾಸ್ ಪದವಿಪೂರ್ವ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್., ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಮ್. ಡಿ., ಪದವಿ ಪೂರ್ವ ವಿದ್ಯಾರ್ಥಿಗಳು, ಉಪನ್ಯಾಸಕರು ಇದ್ದರು. ಪದವಿಪೂರ್ವ ವಿಭಾಗದ ಕನ್ನಡ ಉಪನ್ಯಾಸಕ ಟಿ. ಎನ್ ಖಂಡಿಗೆ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಂಘದ ಸಂಚಾಲಕಿ ಶಾಲೆಟ್ ಮೊನಿಸ್ ಸ್ವಾಗತಿಸಿ, ಉಪನ್ಯಾಸಕಿ ರುಚಿಕಾ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತರರ ಭಾವದಲ್ಲಿ

ಸವಿಗೆ ಪಿಯುಸಿಯಲ್ಲಿ 85% ಮಾರ್ಕ್ಸ್ ಬಂದಿತ್ತು. ಅವಳಿಗೆ ಸಿಗಬೇಕಾದ ಅಂಕಕ್ಕಿಂತ 10%...

ಅ.27: ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ

ಉಡುಪಿ, ಅ.18: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ...

ಕಬ್ಬದುಳುಮೆ: ಹಳೆಗನ್ನಡ ಕಾವ್ಯದೋದು ಕಮ್ಮಟ

ತೆಂಕನಿಡಿಯೂರು, ಅ.18: ನೆಲವನ್ನು ಉತ್ತು ಅದರೊಡಲಿಗೆ ಕಾಳು ಬಿತ್ತಿ ಬಾಳು ಕಟ್ಟಿಕೊಂಡ...

ಇಸ್ರೇಲ್ ದಾಳಿಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವು

ಯು.ಬಿ.ಎನ್.ಡಿ., ಅ.18: ಹಮಾಸ್ ಮುಖ್ಯಸ್ಥ ಮತ್ತು ಕಳೆದ ವರ್ಷ ಅಕ್ಟೋಬರ್ 7...
error: Content is protected !!