ನವದೆಹಲಿ, ಜ.5: ಕೆನಡಾದ ರಾಜಕೀಯ ವ್ಯವಸ್ಥೆ ಖಲಿಸ್ತಾನಿ ಪಡೆಗಳಿಗೆ ಸಾಕಷ್ಟು ಅನುಕೂಲಕರ ವಾತಾವರಣ ಸೃಷ್ಟಿಸಿದೆ. ಇದರಿಂದ ಭಾರತ-ಕೆನಡಾ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಕೆನಡಾದ ರಾಜಕೀಯ ವ್ಯವಸ್ಥೆಯು ಖಲಿಸ್ತಾನಿ ಪಡೆಗಳಿಗೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುಮತಿ ನೀಡಿದಂತಿದೆ. ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ 2023ಕ್ಕೂ ಕೆನಡಾದಲ್ಲಿನ ಖಲಿಸ್ತಾನಿ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಖಾಲಿಸ್ತಾನ್ ಸಮಸ್ಯೆ ಹೊಸದೇನಲ್ಲ. ಖಲಿಸ್ತಾನ್ ಸಮಸ್ಯೆಯು ವರ್ಷಗಳಿಂದ ಅಸ್ತಿತ್ವದಲ್ಲಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಕೆನಡಾ ರಾಜಕೀಯ ವ್ಯವಸ್ಥೆಯಿಂದ ಖಲಿಸ್ತಾನಿ ಪಡೆಗಳಿಗೆ ಅನುಕೂಲ: ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್
ಕೆನಡಾ ರಾಜಕೀಯ ವ್ಯವಸ್ಥೆಯಿಂದ ಖಲಿಸ್ತಾನಿ ಪಡೆಗಳಿಗೆ ಅನುಕೂಲ: ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್
Date: