ಮಣಿಪಾಲ, ಜ.3: ಕಸ್ತೂರ್ಬಾ ಹಾಸ್ಪಿಟಲ್ ಕಾರ್ಪೊರೇಟ್ ಕ್ರಿಕೆಟ್ ಲೀಗ್ ನ 3 ನೇ ಆವೃತ್ತಿಯು ಜನವರಿ 5, 2024 ರಿಂದ ಜನವರಿ 7, 2024 ರವರೆಗೆ ಎಂಡ್ ಪಾಯಿಂಟ್ ಮೈದಾನ, ಮಾಹೆ ಮಣಿಪಾಲದಲ್ಲಿ ನಡೆಯಲಿದೆ. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಿಂದ ಆಯೋಜಿಸಲ್ಪಟ್ಟಿರುವ ಈ ಕ್ರಿಕೆಟ್ ಲೀಗ್ ಕಾರ್ಪೊರೇಟ್ ಕಂಪನಿಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು ಮಾಧ್ಯಮ ಭಾಗವಹಿಸಲಿವೆ. ಈ ಕಾರ್ಯಕ್ರಮದ ಭಾಗವಾಗಿ ಬುಧವಾರ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಆಟಗಾರರ ಜರ್ಸಿಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಮಾಹೆ ಮಣಿಪಾಲ ಬೋಧನಾ ಆಸ್ಪತ್ರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಡಾ. ಆನಂದ್ ವೇಣುಗೋಪಾಲ್, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಡಾ. ಶಿರನ್ ಶೆಟ್ಟಿ, ಜಿಬು ಥಾಮಸ್, ಸಚಿನ್ ಕಾರಂತ್, ಡಾ. ಕೀರ್ತಿನಾಥ ಬಲ್ಲಾಳ, ಡಾ. ಅಣ್ಣಪ್ಪ ಶೆಟ್ಟಿ, ಸುರೇಶ ಶೆಟ್ಟಿ, ಜೀವನ್ ಶೆಟ್ಟಿ ಉಪಸ್ಥಿತರಿದ್ದರು
ಕಸ್ತೂರ್ಬಾ ಹಾಸ್ಪಿಟಲ್ ಕಾರ್ಪೊರೇಟ್ ಕ್ರಿಕೆಟ್ ಲೀಗ್ ಒಂದು ಪ್ರತಿಷ್ಠಿತ ಈವೆಂಟ್ ಆಗಿದ್ದು, ಸೌಹಾರ್ದಯುತವಾಗಿ ಸ್ಪರ್ಧಾತ್ಮಕ ವಾತಾವರಣದಲ್ಲಿ ಸ್ಪರ್ಧಿಸಲು ವಿವಿಧ ವಲಯಗಳ ತಂಡಗಳನ್ನು ಸೆಳೆಯುತ್ತದೆ. ಲೀಗ್ ರೋಮಾಂಚಕ ಪಂದ್ಯಗಳು, ತೀವ್ರ ಪೈಪೋಟಿಗಳು ಮತ್ತು ವಿವಿಧ ಕ್ಷೇತ್ರಗಳ ವೃತ್ತಿಪರರಿಗೆ ಕ್ರಿಕೆಟ್ ಪಿಚ್‌ನಲ್ಲಿ ಒಟ್ಟಿಗೆ ಸೇರುವ ಅವಕಾಶವನ್ನು ನೀಡುತ್ತದೆ. ಟೂರ್ನಮೆಂಟ್ ನಲ್ಲಿ 24 ತಂಡಗಳು ಭಾಗವಹಿಸುತ್ತಿದ್ದು, ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮವು ಜನವರಿ ೫ ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.