Saturday, October 19, 2024
Saturday, October 19, 2024

ಪಾಜಕ ಆನಂದತೀರ್ಥ ವಿದ್ಯಾಲಯಕ್ಕೆ ದಶಮಾನೋತ್ಸವ ಸಂಭ್ರಮ, ಸಾಂಸ್ಕೃತಿಕ ಉತ್ಸವ

ಪಾಜಕ ಆನಂದತೀರ್ಥ ವಿದ್ಯಾಲಯಕ್ಕೆ ದಶಮಾನೋತ್ಸವ ಸಂಭ್ರಮ, ಸಾಂಸ್ಕೃತಿಕ ಉತ್ಸವ

Date:

ಕಟಪಾಡಿ, ಜ.1: ಪೇಜಾವರ ಮಠದ ಆಡಳಿತಕ್ಕೊಳಪಟ್ಟ, ಪಾಜಕ ಆನಂದತೀರ್ಥ ವಿದ್ಯಾಲಯದ ಹತ್ತನೇ ವರ್ಷದ ದಶಮಾನೋತ್ಸವ ಸಮಾರಂಭ ಪ್ರಯುಕ್ತ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಿತು. ಪೇಜಾವರ ಮಠಾಧೀಶ ಹಾಗೂ ಶಾಲಾ ಆಡಳಿತ ಮಂಡಳಿ ಆದ್ಯಕ್ಷ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಕಾರ್ಯಕ್ರಮ ಉಧ್ಘಾಟಿಸಿ ಆಶೀರ್ವಚನ ನೀಡಿ, ನಮ್ಮ ಹಿರಿಯ ಶ್ರೀಗಳ ಕನಸಿನ ಕೂಸಿಗೆ ಈಗ ಹತ್ತು ವರ್ಷದ ಸಂಭ್ರಮ. ಅವರು ಇಲ್ಲಿ 2014 ರಲ್ಲಿ ನಿರ್ಮಿಸಿದ ಈ ಆನಂದತೀರ್ಥ ಶಾಲೆ ಆಗ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಂದ ಆರಂಭವಾಗಿ ಇಂದು ಸುಮಾರು 2 ಸಾವಿರಕ್ಕೂ ಅಧಿಕ ಮಕ್ಕಳು ಅಭ್ಯಾಸ ಮಾಡುತ್ತಿರುವ ಈ ಸಂಸ್ಥೆಯ ಜೊತೆಗೆ ಆನಂದತೀರ್ಥ ಪ.ಪೂ ಕಾಲೇಜು, ಶ್ರೀ ವಿಶ್ವೇಶತೀರ್ಥ ಮಹಾವಿದ್ಯಾಲಯ ಪದವಿ ಕಾಲೇಜು ಪ್ರಾರಂಭವಾಗಿ ಇಡೀ ರಾಜ್ಯದ ಹಾಗೂ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ವಿಧ್ಯಾಭ್ಯಾಸ ಮಾಡುವ ಜ್ಞಾನ ದೇಗುಲವಾಗಿ ಬೆಳಗುತ್ತಿರುವುದು ಶ್ರೀಗಳ ಪ್ರಯತ್ನಕ್ಕೆ ಶ್ರೀಕೃಷ್ಣ ಪರಮಾತ್ಮ ನೀಡಿದ ವರದಂತೆ ಭಾಸವಾಗುತ್ತಿದೆ. ಈ ಸಂಸ್ಥೆಯು ಇನ್ನೂ ಉನ್ನತ ಮಟ್ಟಕ್ಕೆ ಏರಲಿ, ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ಸಾಲಿನಲ್ಲಿ ನಮ್ಮ ಈ ಶಾಲೆಯೂ ನಿಲ್ಲುವಂತೆ ಆಗಲಿ. ಇಲ್ಲಿನ ಮಕ್ಕಳಿಗೆ ಕೇವಲ ಪುಸ್ತಕದ ಶಿಕ್ಷಣ ಮಾತ್ರ ಹೇಳಿಕೊಡದೆ, ಧಾರ್ಮಿಕ, ಆಧ್ಯಾತ್ಮಿಕ ಶಿಕ್ಷಣವನ್ನೂ ಕೂಡ ಕಲಿಸಲಾಗುತ್ತಿದೆ. ಇದು ಇಂದಿನ ಅಗತ್ಯಗಳಲ್ಲಿ ತುಂಬಾ ಮಹತ್ವದ್ದು ಎಂದರು. ದಶಮಾನೋತ್ಸವ ಆಚರಿಸುತ್ತಿರುವ ಈ ಸಂಸ್ಥೆಯು ನೂರಾರು ವರ್ಷ ಹೆಮ್ಮೆಯ ವಿದ್ಯಾಸಂಸ್ಥೆಯಾಗಿ ಹೆಸರು ಪಡೆಯಲಿ ಎಂದು ಶೂಭಾಶೀರ್ವಾದ ನೀಡಿದರು.

ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಕೆ.ಎ.ಪಿ.ಎಂ.ಸಿ ಶಿವಮೊಗ್ಗ ಇಲ್ಲಿನ ಮನಶಾಸ್ತ್ರವಿಭಾಗದ ಸಹ ಪ್ರಾಧ್ಯಾಪಕಿ ಡಾ. ಅರ್ಚನಾ ಭಟ್ ಮಾತನಾಡಿ, ಇಂದಿನ ಮಕ್ಕಳ ಮನಸ್ಥಿತಿ ಎಷ್ಟು ಸೂಕ್ಷ್ಮವಾಗಿದೆ ಎಂದರೆ ಯಾವುದೇ ಸಣ್ಣ ವಿಷಯವನ್ನು ಕೂಡ ಸಹಿಸಿಕ್ಕೊಳ್ಳುವ ಶಕ್ತಿ ಇಲ್ಲದಾಗಿದೆ. ಮಕ್ಕಳ ಮನಸ್ಥಿತಿ ವಿಕಾಸಗೊಳ್ಳುವ ಬದಲು ಸಂಕುಚಿತವಾಗುತ್ತಿದೆ. ಯಾವುದು ಮನಸ್ಸಿಗೆ ಮಾರಕವೋ ಅದು ಮಕ್ಕಳಿಗೆ ಬೇಗ ಸಿಗಬೇಕು ಅದರಿಂದ ಸುಖ ಉಂಟುಮಾಡುತ್ತದೆ ಎಂಬ ಮನಸ್ಥಿತಿ ಮಕ್ಕಳದಾಗುತ್ತಿದೆ. ಅದರಿಂದಾಗುವ ಅನಾಹುತಗಳ ಪರಿವೆಯೇ ಇಲ್ಲದ ಸ್ಥಿತಿ ಅವರದ್ದಾಗುತ್ತಿದೆ. ತಿಳಿ ಹೇಳಬೇಕಾದ ಪೋಷಕರದ್ದು ನೂರಾರು ಸಮಸ್ಯೆ, ಕೆಲಸದ ಒತ್ತಡ, ಸಾಮಾಜಿಕ ಒತ್ತಡ, ಮಾನಸಿಕ ಒತ್ತಡ ಹೀಗೆ ಎಲ್ಲಾ ಒತ್ತಡಗಳ ನಡುವೆ ಮಕ್ಕಳ ಮನಸ್ಸನ್ನು ನಿರ್ಮಲಗಳೊಸುವ ಕೆಲಸ ಎಲ್ಲಿಯೂ ಆಗುತ್ತಿಲ್ಲ. ಹೀಗೆ ಮಕ್ಕಳ ಎಲ್ಲಾ ಮನಸ್ಸಿನ ಗೊಂದಲಗಳಿಗೆ ಶಾಲೆಗಳಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯ, ಅದರಲ್ಲಿಯೂ ಸ್ವಾಮೀಜಿಗಳು ನಡೆಸುವ ಶಾಲೆಗಳಾಗಿದ್ದರೆ ಅಲ್ಲಿ ವಿದ್ಯೆ ಜೊತೆಗೆ ಮಕ್ಕಳ ಸರ್ವತೋಮುಖ ಮನೋ ವಿಕಾಸಕ್ಕೆ ಇಂತಹ ಶಾಲೆಗಳು ಹೆಚ್ಚಿನ ಮಹತ್ವ ನೀಡುತ್ತವೆ.

ಮಕ್ಕಳಲ್ಲಿ ಹಾಗೂ ಎಲ್ಲಾ ವರ್ಗದವರಲ್ಲಿಯೂ ಮೊಬೈಲ್ ಬಳಕೆಗೆ ನಾವೇ ಒಂದು ಕಡಿವಾಣ ಹಾಕಬೇಕೆ ವಿನಃ ಬೇರೆ ಯಾವುದೇ ದಾರಿಯಿಂದ ಅದರ ನಿಯಂತ್ರಣ ಅಸಾಧ್ಯ, ಏಕೆಂದರೆ ಅದು ಅಷ್ಟೊಂದು ವೇಗವಾಗಿ ಇಡೀ ಮನುಕುವನ್ನು ಆವರಿಸಿ ತನ್ನ ಕಪಿ ಮಷ್ಠಿಗೆ ತೆಗೆದುಕೊಂಡಾಗಿದೆ. ಅದರ ನಿಯಂತ್ರಣ ಕೇವಲ ನಮ್ಮ ನಿರ್ಧಾರದಿಂದ ಮಾತ್ರ ಸಾಧ್ಯ ಹೊರತು ಬೇರೆ ಯಾವುದೇ ಮಾರ್ಗದಿಂದ ಸಾಧ್ಯವಿಲ್ಲ ಎಂದರು. ಮೊಬೈಲ್ ಬಳಕೆ ಒಂದು ಫೊಭಿಯಾ ಆಗಿ ಬದಲಾಗಿ ಇಡೀ ಮನುಕುಲವನ್ನು ಅಧಃಪತನಕ್ಕೆ ತಳ್ಳುತ್ತಿದೆ. ಮನುಷ್ಯ ಕೇವಲ ಯಾಂತ್ರಿಕನಾಗುತ್ತಿದ್ದಾನೆ, ಮಕ್ಕಳೂ ಕೂಡ ಹಿರಿಯರನ್ನು ನೋಡಿ ಕಲಿಯುತ್ತಿವೆ. ಯಾವುದಾದರೂ ಎಷ್ಟು ಬೇಕೋ ಅಷ್ಟು ಇದ್ದರೆ ಚಂದ, ಮಿತಿ ಮೀರಿದರೆ ಅದರಿಂದ ಆಪತ್ತೇ ಜಾಸ್ತಿ, ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮಕ್ಕಳ ಮನಸ್ಸನ್ನು ಬೇಗ ಅರ್ಥಮಾಡಿಕ್ಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಅಂತಹ ಶಿಕ್ಷಕರು ಮಕ್ಕಳ ಮನಸ್ಸಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರನ್ನು ಸಮಾಜದ ಸತ್ಪ್ರಜೆಯಾಗಿ ಮಾಡುವಲ್ಲಿ ನಿರಂತರ ಕ್ರಿಯಾಶೀಲರಾಗಿರಬೇಕು ಎಂದರು.

ಸಂಸ್ಥೆಯ ಕಾರ್ಯಾಧ್ಯಕ್ಷ ನಾಗರಾಜ್ ಬಲ್ಲಾಳ್, ಕಾರ್ಯದರ್ಶಿ ಸುಬ್ರಹ್ಮಣ್ಯ ಸಾಮಗ, ಖಜಾಂಚಿ ಲಕ್ಷ್ಮೀನಾರಾಯಣ ಉಪಾಧ್ಯ, ಸದಸ್ಯರಾದ ಸುದರ್ಶನ್ ರಾವ್, ರೂಪಾ ಬಲ್ಲಾಳ್, ಪ್ರಾಂಶುಪಾಲೆ ಡಾ. ಗೀತಾ ಶಶಿಧರ್ ಉಪಸ್ಥಿತರಿದ್ದರು. ‘ಪ್ರಪಂಚಕ್ಕೆ ಭಾರತದ ಕೊಡುಗೆ’ ಎಂಬ ವಿಷಯದ ಬಗ್ಗೆ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅತ್ಯಂತ ವಿಶಿಷ್ಟವಾಗಿ ಮಾಡಿಬಂದಿತು. ಸಂಯೋಜಕಿ ವಿಜೇತಾ ಸ್ವಾಗತಿಸಿ, ಜ್ಯೋತಿ ಆಚಾರ್ಯ ಅತಿಥಿಗಳ ಪರಿಚಯ ಮಾಡಿದರು.
ದಿವ್ಯ ಉಚ್ಚಿಲ ವಂದಿಸಿದರು. ಶಿಕ್ಷಕಿ ಸುನಾಲಿನಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತರರ ಭಾವದಲ್ಲಿ

ಸವಿಗೆ ಪಿಯುಸಿಯಲ್ಲಿ 85% ಮಾರ್ಕ್ಸ್ ಬಂದಿತ್ತು. ಅವಳಿಗೆ ಸಿಗಬೇಕಾದ ಅಂಕಕ್ಕಿಂತ 10%...

ಅ.27: ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ

ಉಡುಪಿ, ಅ.18: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ...

ಕಬ್ಬದುಳುಮೆ: ಹಳೆಗನ್ನಡ ಕಾವ್ಯದೋದು ಕಮ್ಮಟ

ತೆಂಕನಿಡಿಯೂರು, ಅ.18: ನೆಲವನ್ನು ಉತ್ತು ಅದರೊಡಲಿಗೆ ಕಾಳು ಬಿತ್ತಿ ಬಾಳು ಕಟ್ಟಿಕೊಂಡ...

ಇಸ್ರೇಲ್ ದಾಳಿಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವು

ಯು.ಬಿ.ಎನ್.ಡಿ., ಅ.18: ಹಮಾಸ್ ಮುಖ್ಯಸ್ಥ ಮತ್ತು ಕಳೆದ ವರ್ಷ ಅಕ್ಟೋಬರ್ 7...
error: Content is protected !!