ಹಂಗಾರಕಟ್ಟೆ, ಡಿ.28: ಸಂಘ ಸಂಸ್ಥೆಗಳ ಮೂಲಕ ಸಮಾಜದ ಋಣ ಸಂದಾಯ ಮಾಡಲು ಸಾಧ್ಯ ಎಂದು ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದರು. ಅವರು ಬಾಳೆಕುದ್ರು ಶ್ರೀಮಠದಲ್ಲಿ ಜನವರಿ 13 ರಂದು ಇಂಡಿಕಾ ಕಲಾ ಬಳಗದ ಆಶ್ರಯದಲ್ಲಿ ಇಂಡಿಕಾ ಸಂಭ್ರಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಸಂಘ ಸಂಸ್ಥೆಗಳ ಸಾಮಾಜಿಕ ಬದ್ಧತೆ ಪ್ರದರ್ಶಿಸುವ ಜತೆಗೆ ಸಾಂಸ್ಕೃತಿಕ ಹಾಗೂ ಸಂಸ್ಕಾರ ಉಳಿಸಿ ಬೆಳೆಸುವ ಕಾರ್ಯ ನಿರಂತವಾಗಿಸಬೇಕು, ಈ ನಿಟ್ಟಿನಲ್ಲಿ ಇಂಡಿಕಾ ಕಲಾ ಬಳಗದ ಕಾರ್ಯ ಪ್ರಶಂಸನೀಯ ಎಂದು ಆಶೀರ್ವಚನ ನೀಡಿದರು. ಇಂಡಿಕಾ ಕಲಾ ಬಳಗದ ಸಂಚಾಲಕ ಸಂತೋಷ್ ಕುಮಾರ್ ಕೋಟ, ಸಂಸ್ಥೆಯ ಪ್ರಮುಖರಾದ ಎಂ.ಜಯರಾಮ್ ಶೆಟ್ಟಿ, ಪ್ರದೀಪ್ ಸಾಲಿಯಾನ್, ನಾಗರಾಜ್ ಮಣೂರು ಇದ್ದರು. ಇಂಡಿಕಾ ಸಂಸ್ಥೆಯ ಪ್ರಭಾಕರ್ ಮಣೂರು ಕಾರ್ಯಕ್ರಮ ನಿರೂಪಿಸಿದರು.
ಸಾಮಾಜಿಕ ಕಾರ್ಯಗಳಿಂದ ಸಮಾಜದ ಋಣ ಸಂದಾಯ: ಬಾಳೆಕುದ್ರು ಶ್ರೀ ಮಠ ನೃಸಿಂಹಾಶ್ರಮ ಸ್ವಾಮೀಜಿ
ಸಾಮಾಜಿಕ ಕಾರ್ಯಗಳಿಂದ ಸಮಾಜದ ಋಣ ಸಂದಾಯ: ಬಾಳೆಕುದ್ರು ಶ್ರೀ ಮಠ ನೃಸಿಂಹಾಶ್ರಮ ಸ್ವಾಮೀಜಿ
Date: