Tuesday, November 26, 2024
Tuesday, November 26, 2024

ಕಾರಂತರು ಯುವಜನಾಂಗದ ದಾರಿದೀಪ: ಉಮೇಶ್ ಆಚಾರ್ಯ

ಕಾರಂತರು ಯುವಜನಾಂಗದ ದಾರಿದೀಪ: ಉಮೇಶ್ ಆಚಾರ್ಯ

Date:

ಕೋಟ, ಡಿ. 26: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಬದುಕು-ಬರವಣೆಗೆ ಸ್ಪೂರ್ತಿದಾಯಕವಾಗಿದ್ದು, ಯುವಜನಾಂಗ ಸುಂದರ ಬದುಕು ಕಟ್ಟಿಕೊಳ್ಳಲು ಕಾರಂತರ ಬದುಕಿನ ಹೆಜ್ಜೆಗಳು ಪೂರಕವಾಗಿದೆ, ಮನುಷ್ಯ ಬದುಕಿನಲ್ಲಿ ಏನೆಲ್ಲ ಸಾಧಿಸಬಹುದು ಎನ್ನುವುದಕ್ಕೆ ಕಾರಂತರು ಸ್ಪಷ್ಟ ಉದಾಹರಣೆ ಎಂದು ಸಾಹಿತ್ಯಿಕ ಚಿಂತಕ ಉಮೇಶ್ ಆಚಾರ್ಯ ಉಡುಪಿ ಹೇಳಿದರು. ಅವರು ಕೋಟ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಡಾ. ಶಿವರಾಮ ಕಾರಂತ ಪ್ರತಿಷ್ಠಾನ(ರಿ)ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಡಾ. ಶಿವರಾಮ ಕಾರಂತರ ಪುಣ್ಯ ಸ್ಮರಣೆ ಅಂಗವಾಗಿ ತಿಂಗಳ ಸಡಗರ, ದತ್ತಿ ಪುರಸ್ಕಾರ, ವಿಶೇಷ ಉಪನ್ಯಾಸ, ನಾಟಕ ಪ್ರದರ್ಶನ ಅಭಿಜ್ಞಾ- ೨೦೨೩ (ಕೊನೆಯಿರದ ತಂಗುದಾಣ) ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಗತಿ ಪರ ಕೃಷಿಕ ರವೀಂದ್ರ ಐತಾಳ್, ಕೃಷಿಯಿಂದ ವಿಮುಖರಾಗದೆ ಯುವಕರು ಕೃಷಿಯಲ್ಲಿ ಒಲವು ಮೂಡಿಸಿಕೊಳ್ಳಬೇಕು, ಕೃಷಿಕರಿಗೆ ಜನರ ಪ್ರೋತ್ಸಾಹ ಕೂಡ ಮುಖ್ಯವಾದುದು ಎಂದರು. ಈ ಸಂದರ್ಭದಲ್ಲಿ ದಿ.ಡಾ.ರಾಘವೇಂದ್ರ ಉರಾಳ ದತ್ತಿ ಪುರಸ್ಕಾರ ತಾರನಾಥ ಹೊಳ್ಳ ಕಾರ್ಕಡ, ದಿ.ಮನೋಹರ್ ತೋಳಾರ್ ಕ್ರೀಡಾ ಪುರಸ್ಕಾರ ಸುರೇಶ್ ಪೂಜಾರಿ ಪಾಂಡೇಶ್ವರ, ತೆಕ್ಕಟ್ಟೆ ಸುರೇಂದ್ರ ಶೆಟ್ಟಿ ಸ್ಮಾರಕ ದತ್ತಿ ಪುರಸ್ಕಾರ ದೀಕ್ಷಾ ಎಸ್ ಎಮ್ ಬ್ರಹ್ಮಾವರ, ದಿ.ಉಪೇಂದ್ರ ಐತಾಳ್ ಕೃಷಿ ದತ್ತಿ ಪುರಸ್ಕಾರ ಪ್ರಗತಿಪರ ಕೃಷಿಕ ಶೀಲರಾಜ್ ಕದ್ರಿಕಟ್ಟು ಅವರಿಗೆ ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಸತೀಶ್ ಕುಂದರ್, ಕಾರ್ಯದರ್ಶಿ ಸುಮತಿ ಅಂಚನ್, ಸದಸ್ಯರಾದ ಎಚ್ ಪ್ರಮೋದ್ ಹಂದೆ, ವಾಸು ಪೂಜಾರಿ, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ ಆಚಾರ್ಯ, ಬ್ರಹ್ಮಾವರ ಕ.ಸಾ.ಪ ಅಧ್ಯಕ್ಷ ರಾಮಚಂದ್ರ ಐತಾಳ್ ಗುಂಡ್ಮಿ ಉಪಸ್ಥಿತರಿದ್ದರು.

ಶಿಕ್ಷಕ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾ ಕಾರ್ಯಕ್ರಮದ ನಂತರ ಬ್ರಹ್ಮಾವರ ಹಾರಾಡಿಯ ಶ್ರೀ ದುರ್ಗಾ ಕಲಾ ತಂಡದಿಂದ ಕುಂದಗನ್ನಡದ ಹಾಸ್ಯಮಯ ನಾಟಕ ‘ಒಂದಲ್ಲಾ ಒಂದ್ ಸಮಸ್ಯೆ’ ಪ್ರದರ್ಶಿಸಲಾಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!