Friday, October 18, 2024
Friday, October 18, 2024

ಕೆನರಾ ಎಕ್ಸ್ಪೋ -2023 ಉದ್ಘಾಟನೆ

ಕೆನರಾ ಎಕ್ಸ್ಪೋ -2023 ಉದ್ಘಾಟನೆ

Date:

ಮಂಗಳೂರು: ಡಿ. 24: ಮಂಗಳೂರಿನ ಪ್ರತಿಷ್ಠಿತ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಆಯೋಜನೆಯಲ್ಲಿ ಕೆನರಾ ಎಕ್ಸ್ಪೋ 2023 ವಸ್ತು ಪ್ರದರ್ಶನ ಕೊಡಿಯಾಲ್ ಬೈಲ್ ಕೆನರಾ ಪ್ರೌಢಶಾಲೆಯಲ್ಲಿ ಉದ್ಘಾಟನೆಗೊಂಡಿತು. ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ಸುಧಾಕರ್ ಕೊಠಾರಿ ಉದ್ಘಾಟನೆ ನೆರವೇರಿಸಿದರು.ಕೆನರಾ ಹಳೆ ವಿದ್ಯಾರ್ಥಿಗಳ ಜಾಗತಿಕ ಸಮಾವೇಶದ ಮುನ್ನ ದಿನ ಜರುಗಿದ ಈ ವಿಶಿಷ್ಟ್ಯಪೂರ್ಣ ಕಾರ್ಯಕ್ರಮವು ಸಾರ್ವಜನಿಕರ ಮನಸೆಳೆಯಿತು. ಕೆನರಾ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪೂರೈಸಿ ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಸಿಕೊಂಡ ಹಳೆ ವಿದ್ಯಾರ್ಥಿಗಳಿಗೆ ತಮ್ಮ ನಾವಿನ್ಯತೆ, ಸೃಜನಶೀಲತೆ, ಕೌಶಲಗಳನ್ನು ಅನಾವರಣಗೊಳಿಸಲು ಹಾಗೂ ಮತ್ತೊಮ್ಮೆ ವಿದ್ಯಾಸಂಸ್ಥೆಯೊಂದಿಗೆ ತಮ್ಮ ಸಂಬಂಧಗಳನ್ನು ನವೀಕರಿಸಲು ಈ ಕಾರ್ಯಕ್ರಮವು ಅತ್ಯುತ್ತಮ ವೇದಿಕೆಯಾಗಿ ರೂಪುಗೊಂಡಿತು.

ಕೇಂದ್ರ ಸರ್ಕಾರವು ಉತ್ತೇಜಿಸಿದ ಸ್ಟಾರ್ಟ್ ಅಪ್ ಆಲೋಚನೆಗಳಿಗೆ ಯೋಜನೆಯ ರೂಪ ಕೊಟ್ಟು ತಯಾರಿಸಿದ ವಿವಿಧ ಪ್ರಾಜೆಕ್ಟ್ ಗಳು, ವೈವಿಧ್ಯಪೂರ್ಣ ಆಹಾರ ವಿಚಾರಗಳು ಈ ಕಾರ್ಯಕ್ರಮದಲ್ಲಿ ಕಂಡುಬಂದವು. ಎಲೆಕ್ಟ್ರಿಕ್ ತ್ರಿ ಚಕ್ರ ಹೊಸ ವಿನ್ಯಾಸ ವಾಹನಗಳ ಮಾದರಿ, ಪುಸ್ತಕ ಮಳಿಗೆ, ವಿವಿಧ ಪಾನಿಯ ಆಹಾರ ವಿವಿಧ ವಿನ್ಯಾಸದ ಕೆನರಾ ಬ್ರಾಂಡ್ ನ ಬಟ್ಟೆ, ಪೈ ದ್ವಿ ಚಕ್ರ ಶೋರೂಂ, ಕೆನರಾ ಬ್ಯಾಂಕ್, ಪೀಠೋಪಕರಣ, ಎಸ್ ಕೆ ಟ್ರೇಡರ್ಸ್, ಅಮೋಘ ಗಾರ್ಮೆಂಟ್ಸ್, ಡೇ ಟು ಡೇ ಡಿಜಿಟಲ್, ವೇದಾಮರೋಗ್ಯ, ಎಸ್ ಎಲ್ ಶೇಟ್ ಡೈಮಂಡ್ಸ್, ಫೋರ್ ಟೀಕ್ ಸೊಲ್ಯೂಷನ್ಸ್, ಕುಂಬ್ಳೆ ಸೋಲಾರ್ ಎನರ್ಜಿ ಸೊಲ್ಯೂಷನ್ಸ್, ಶ್ರೇಯಸ್ ಸ್ವೀಟ್ಸ್, ಹೀಗೆ ಅನೇಕ ಪ್ರಮೋಷನ್ ಮಳಿಗೆಗಳು, ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇದ್ದವು. ಸಂಜೆ ಹಳೆಯ ವಿದ್ಯಾರ್ಥಿಗಳಿಂದ ಕನ್ನಡ ಹಿಂದಿ ಹಳೆಯ, ಹೊಸ ಚಲನಚಿತ್ರ ಗೀತೆಗಳು ಹಾಗೂ ವಿವಿಧ ಹಾಡುಗಳು ಕರೋಕೆ ಮೀಟ್ ಕಾರ್ಯಕ್ರಮವು ನಡೆಯಿತು.

ಕೆನರಾ ಆಡಳಿತ ಮಂಡಳಿಯ ಕಾರ್ಯದರ್ಶಿ ರಂಗನಾಥ ಭಟ್, ಜಂಟಿ ಕಾರ್ಯದರ್ಶಿಗಳಾದ ಸುರೇಶ್ ಕಾಮತ್ ಹಾಗೂ ಗೋಪಾಲಕೃಷ್ಣ ಶೆಣೈ, ಕೆನರಾ ವಿಕಾಸ ಕಾಲೇಜಿನ ಸಂಯೋಜಕರಾದ ಬಸ್ತಿ ಪುರುಷೋತ್ತಮ ಶೆಣೈ, ಕೆನರಾ ಪದವಿ ಕಾಲೇಜಿನ ಮ್ಯಾನೇಜರ್ ಶಿವಾನಂದ ಶೆಣೈ, ಆಡಳಿತ ಮಂಡಳಿಯ ಸದಸ್ಯರಾದ ನರೇಶ್ ಶೆಣೈ, ಅಶ್ವಿನಿ ಶೆಣೈ, ಕೆನರಾ ಆಂಗ್ಲ ಪ್ರಾಥಮಿಕ ಶಾಲೆ ಹಾಗೂ ಕೆನರಾ ಹೈಸ್ಕೂಲ್ ಉರ್ವಾ ಇಲ್ಲಿಯ ಮ್ಯಾನೇಜರ್ ಯೋಗೀಶ್ ಕಾಮತ್, ಆಡಳಿತ ಅಧಿಕಾರಿ ಡಾ. ದೀಪ್ತಿ ನಾಯಕ್, ಪಿ.ಆರ್.ಓ ಉಜ್ವಲ್ ಮಲ್ಯ, ಸಮ್ಮಿಲನದ ಉಸ್ತುವಾರಿ ಗೋಪಾಲಕೃಷ್ಣ ಶೆಟ್ಟಿ,ಕೆನರಾ ಸಹೋದರಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರುಗಳು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ, ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಇದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತರರ ಭಾವದಲ್ಲಿ

ಸವಿಗೆ ಪಿಯುಸಿಯಲ್ಲಿ 85% ಮಾರ್ಕ್ಸ್ ಬಂದಿತ್ತು. ಅವಳಿಗೆ ಸಿಗಬೇಕಾದ ಅಂಕಕ್ಕಿಂತ 10%...

ಅ.27: ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ

ಉಡುಪಿ, ಅ.18: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ...

ಕಬ್ಬದುಳುಮೆ: ಹಳೆಗನ್ನಡ ಕಾವ್ಯದೋದು ಕಮ್ಮಟ

ತೆಂಕನಿಡಿಯೂರು, ಅ.18: ನೆಲವನ್ನು ಉತ್ತು ಅದರೊಡಲಿಗೆ ಕಾಳು ಬಿತ್ತಿ ಬಾಳು ಕಟ್ಟಿಕೊಂಡ...

ಇಸ್ರೇಲ್ ದಾಳಿಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವು

ಯು.ಬಿ.ಎನ್.ಡಿ., ಅ.18: ಹಮಾಸ್ ಮುಖ್ಯಸ್ಥ ಮತ್ತು ಕಳೆದ ವರ್ಷ ಅಕ್ಟೋಬರ್ 7...
error: Content is protected !!