Saturday, October 19, 2024
Saturday, October 19, 2024

ಪುತ್ತಿಗೆ ಪರ್ಯಾಯ: ವೈಭವದ ಚಪ್ಪರ ಮುಹೂರ್ತ

ಪುತ್ತಿಗೆ ಪರ್ಯಾಯ: ವೈಭವದ ಚಪ್ಪರ ಮುಹೂರ್ತ

Date:

ಉಡುಪಿ, ಡಿ.20: ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥರ ಚತುರ್ಥ ಪರ್ಯಾಯೋತ್ಸವದ ಅಂಗವಾಗಿ ಚಪ್ಪರ ಮುಹೂರ್ತ ಬುಧವಾರ ಬೆಳಿಗ್ಗೆ 7.45 ರ ಶುಭ ಘಳಿಗೆಯಲ್ಲಿ ರಾಘವೇಂದ್ರ ಕೊಡಂಚರ ಪೌರೋಹಿತ್ಯದಲ್ಲಿ ನಡೆಯಿತು.

ಚಪ್ಪರ ನಿರ್ವಹಣೆಯ ರಾಜೇಶ್, ಮುಚ್ಚೂರು ರಾಮಚಂದ್ರ ಭಟ್, ನಾಗರಾಜ್ ಉಪಾಧ್ಯ ಹಾಗೂ ಶ್ರೀ ಮಠದ ಮೇಸ್ತ್ರಿ ಪದ್ಮನಾಭ ಅವರಿಗೆ ಕಾರ್ಯನಿರ್ವಹಣೆಯ ಮುಹೂರ್ತ ಪ್ರಸಾದ ನೀಡಲಾಯಿತು ಹಾಗೂ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ. ರಘುಪತಿ ಭಟ್ ರವರು ಪರ್ಯಾಯ ಪ್ರಚಾರಕ್ಕಾಗಿ ಮಾಡಲ್ಪಟ್ಟ ವಾಹನ ಸ್ಟಿಕರ್ಸ್ ಗಳನ್ನು ಬಿಡುಗಡೆಗೊಳಿಸಿದರು.

ಪರ್ಯಾಯ ಪ್ರಚಾರಕ್ಕಾಗಿ ಮಾಡಲ್ಪಟ್ಟ ವಾಹನ ಸ್ಟಿಕರ್ಸ್ ಗಳನ್ನು ಬಿಡುಗಡೆಗೊಳಿಸಲಾಯಿತು

ಶ್ರೀ ಮಠದ ದಿವಾನರಾದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ಕೋಶಾಧಿಕಾರಿ ರಂಜನ್ ಕಲ್ಕೂ ರ್, ಕಾರ್ಯದರ್ಶಿ ರಾಘವೇಂದ್ರ ಕಿಣಿ, ಸಮಿತಿಯ ಪದಾಧಿಕಾರಿಗಳಾದ ಗುರುರಾಜ ಉಪಾಧ್ಯ, ವಿಷ್ಣುಮೂರ್ತಿ ಉಪಾಧ್ಯ, ರವೀಂದ್ರ ಆಚಾರ್ಯ, ರಘುಪತಿ ರಾವ್, ಹಯವದನ ಭಟ್, ರಾಮ ಕೊಡಂಚ, ನಾಗರಾಜ ರಾವ್, ರಾಮಚಂದ್ರ ಸನಿಲ್, ಸುಮಿತ್ರಾ ಕೆರೆಮಠ, ಅಮಿತ ಕ್ರಮಧಾರಿ, ಸರೋಜಾ, ಗೀತಾ ಮುಂತಾದ ಸದಸ್ಯರು ಉಪಸ್ಥಿತರಿದ್ದರು. ಶ್ರೀ ಮಠದ ರಮೇಶ್ ಭಟ್ ಕೆ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತರರ ಭಾವದಲ್ಲಿ

ಸವಿಗೆ ಪಿಯುಸಿಯಲ್ಲಿ 85% ಮಾರ್ಕ್ಸ್ ಬಂದಿತ್ತು. ಅವಳಿಗೆ ಸಿಗಬೇಕಾದ ಅಂಕಕ್ಕಿಂತ 10%...

ಅ.27: ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ

ಉಡುಪಿ, ಅ.18: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ...

ಕಬ್ಬದುಳುಮೆ: ಹಳೆಗನ್ನಡ ಕಾವ್ಯದೋದು ಕಮ್ಮಟ

ತೆಂಕನಿಡಿಯೂರು, ಅ.18: ನೆಲವನ್ನು ಉತ್ತು ಅದರೊಡಲಿಗೆ ಕಾಳು ಬಿತ್ತಿ ಬಾಳು ಕಟ್ಟಿಕೊಂಡ...

ಇಸ್ರೇಲ್ ದಾಳಿಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವು

ಯು.ಬಿ.ಎನ್.ಡಿ., ಅ.18: ಹಮಾಸ್ ಮುಖ್ಯಸ್ಥ ಮತ್ತು ಕಳೆದ ವರ್ಷ ಅಕ್ಟೋಬರ್ 7...
error: Content is protected !!